ಉಡುಪಿಯ ಕೈದಿಯಿಂದ ಸಹ ಕೈದಿಗಳ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ: ಕೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಈ ಮಾರಾಮಾರಿಯಲ್ಲಿ ಮೂರು ಕೈದಿಗಳಿಗೆ ಗಾಯವಾಗಿದ್ದು, ಆ ಪೈಕಿ ಓರ್ವ ಕೈದಿಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ಊಟ ಮುಗಿದ ಮೇಲೆ ಕುಡಿಯುವ ನೀರಿನ ವಿಚಾರಕ್ಕೆ ಕೈದಿಗಳ ನಡುವೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಉಡುಪಿ ಮೂಲದ ಪ್ರಶಾಂತ್ ಎಂಬ ಕೈದಿ ಸಹ ಕೈದಿಗಳಾದ ಮಲ್ಲೇಶ್, ದೇವೇಂದ್ರಪ್ಪ ಹಾಗೂ ಚಿಕ್ಕಮಗಳೂರಿನ ಬೆನಕಶೆಟ್ಟಿ ಎಂಬುವವರಿಗೆ ಲೋಟದಿಂದ ಹಲ್ಲೆ ನಡೆಸಿ, ಚಮಚದಿಂದ ಇರಿದಿದ್ದಾನೆ. ಘಟನೆಯಲ್ಲಿ ಮಲ್ಲೇಶ್ […]

ಮನೆ ಮಾಲೀಕರಿಗೆ ಚೂರಿಯಿಂದ ಇರಿದು ಲಕ್ಷಾಂತರ ಮೌಲ್ಯದ ಆಭರಣ, ನಗದು ದರೋಡೆ

ಬೆಳ್ತಂಗಡಿ: ದುಷ್ಕರ್ಮಿಗಳ ತಂಡವೊಂದು ಮಾಲೀಕರಿಗೆ ಚೂರಿ‌ ಇರಿದು ಮನೆಯಲ್ಲಿ ಲಕ್ಷಾಂತರ ಮೌಲ್ಯದ ನಗದು, ಆಭರಣಗಳನ್ನು ದರೋಡೆ ಮಾಡಿದ ಘಟನೆ ಬೆಳ್ತಂಗಡಿ ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನದ ಸಮೀಪ ಇಂದು ನಸುಕಿನ ವೇಳೆ ನಡೆದಿದೆ. ಸೌತಡ್ಕ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಇರುವ ತುಕ್ರಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಇಂದು ನಸುಕಿನ ವೇಳೆ ಏಕಾಏಕಿಯಾಗಿ ಮನೆಗೆ ನುಗ್ಗಿದ ಒಂಭತ್ತು ಮಂದಿ ದರೋಡೆಕೋರರ ತಂಡವು ಮನೆಯವರನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ತುಕ್ರಪ್ಪ ಶೆಟ್ಟಿ ಮತ್ತು ಅವರ‌ ಪತ್ನಿಯ […]

ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿರಹಿತ ಸಾಲ

ಬೆಂಗಳೂರು: ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ (ಸಿಎಸ್‌ಐಎಸ್‌) ಅಡಿ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಇತರೆ ಯಾವುದೇ ಸಮಗ್ರ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಗರಿಷ್ಠ ₹7.5ಲಕ್ಷದ ವರೆಗೆ ಬಡ್ಡಿರಹಿತ ಸಾಲ ಸಿಗಲಿದೆ. ಈ ಸೌಲಭ್ಯ ಪಡೆಯಲು ಯಾವುದೇ ಪೂರಕ ಭದ್ರತೆ (ಕೊಲ್ಯಾಟರಲ್‌ ಸೆಕ್ಯುರಿಟಿ) ಒದಗಿಸಬೇಕಾದ ಅಗತ್ಯವೂ ಇಲ್ಲ. ಮೂರನೇ ವ್ಯಕ್ತಿಯ ಭದ್ರತೆ ಒದಗಿಸಬೇಕಾಗಿಯೂ ಇಲ್ಲ. ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಸಾಲ ಪಡೆಯಬಹುದು. ಕಾನೂನು, ಎಂಜಿನಿಯರಿಂಗ್‌, ನರ್ಸಿಂಗ್‌, ವೈದ್ಯಕೀಯ, ದಂತ […]