ಅಲೆವೂರು: ಮೂಲದ ಮನೆಯಲ್ಲಿ ನಡೆದ ಷಷ್ಠಿಪೂಜೆಯಲ್ಲಿ ಭಾಗಿಯಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ: ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ತಮ್ಮ ಹಿರಿಯರ ಮನೆಯಾದ ಅಲೆವೂರು ದೊಡ್ಡಮನೆ ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಷಷ್ಠಿ ಮಹೋತ್ಸವದ ಪೂಜೆಯಲ್ಲಿ ಭಾಗವಹಿಸಿದರು. ಷಷ್ಠಿಯ ಹಿನ್ನೆಲೆಯಲ್ಲಿ ಕುಟುಂಬದ ಮನೆಯಲ್ಲಿ ಪ್ರತೀ ವರ್ಷ ನಾಗ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಅದರಂತೆ ಇಂದು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಪಾಲ್ಗೊಂಡರು. ನಾಗ ಬನ ಸಮೀಪ ನೆಲದಲ್ಲಿ ಕುಳಿತು ಷಷ್ಠಿಯ ವಿಶೇಷ ಭೋಜನ ಮಾಡುವ ಸಂಪ್ರದಾಯವಿದ್ದು, ಅವರು ಕೂಡ ಕುಟುಂಬದವರ […]
ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ; ಗುರುಗಳ ಹಾದಿಯಲ್ಲಿ ಶಿಷ್ಯನ ಹೆಜ್ಜೆ
ಉಡುಪಿ: ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಿ ಸದೃಢ ದೇಶದ ಕಟ್ಟುವ ಸಲುವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದೇಶಾದ್ಯಂತ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಕ್ರಾಂತಿಯಾದ ಹೆಜ್ಜೆಯನ್ನಿಟ್ಟದ್ದರು. ಇದೀಗ ಅವರ ಶಿಷ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕೂಡ ಗುರುಗಳ ದಾರಿಯಲ್ಲಿ ಹೆಜ್ಜೆ ಹಾಕುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಸಮಗ್ರ ಹಿಂದೂ ಸಮಾಜದ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ. ಅಯೋಧ್ಯೆ ರಾಮ […]
ಪಡಿತರದೊಂದಿಗೆ ₹2,500 ನಗದು ದೊರೆಯಲಿದೆ.!
ಚೆನ್ನೈ: ತಮಿಳುನಾಡಿನಲ್ಲಿ ಜನವರಿ ತಿಂಗಳಿನಲ್ಲಿ ಪೊಂಗಲ್ (ಸಂಕ್ರಾತಿ ಹಬ್ಬ) ಆಚರಣೆ ಮಾಡಲಿದ್ದು, ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ರಾಜ್ಯದ 2.6 ಕೋಟಿ ಪಡಿತರ ಚೀಟಿದಾರರಿಗೆ ಪಡಿತರದೊಂದಿಗೆ ಉಡುಗೊರೆ ಮತ್ತು ₹2,500 ನಗದು ಘೋಷಣೆ ಮಾಡಿದೆ. 2021ರ ಜನವರಿ 4ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ನಗದು ಮತ್ತು ಪೊಂಗಲ್ ಗಿಫ್ಟ್ ಬ್ಯಾಗ್ ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಬ್ರಹ್ಮಾವರ: ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ
ಬ್ರಹ್ಮಾವರ: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಹಾರಾಡಿ ಗ್ರಾಮ ಹೊನ್ನಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಸಿಯಾ (32) ಎಂಬ ಮಹಿಳೆ ತನ್ನ ಮೂರು ಮಕ್ಕಳಾದ ಫಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7) ಹಾಗೂ ಚಿಕ್ಕ ಮಗಳಾದ ಆಯಿಷಾ ಝಿಫ್ರಾ (3) ಅವರೊಂದಿಗೆ ಡಿಸೆಂಬರ್ 18ರಿಂದ ನಾಪತ್ತೆಯಾಗಿದ್ದಾರೆ. ಫಾತಿಮಾ ತನ್ನ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಪತಿ ಮಹಮ್ಮದ್ ಖಲೀಲ್ ಬಳಿ […]