ಎಐಸಿಸಿ ಕಾರ್ಯದರ್ಶಿಯಾಗಿ ಐವನ್ ಡಿಸೋಜ ನೇಮಕ
ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರು ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಎಐಸಿಸಿ (ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ) ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕಗೊಳಿಸಿ ಆದೇಶ ನೀಡಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬೆನ್ನಲ್ಲೆ ಐವನ್ ಡಿಸೋಜ ಅವರಿಗೆ ಕೇರಳ ರಾಜ್ಯದ ಉಸ್ತುವಾರಿಯನ್ನು ವಹಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ. ಐವನ್ ಅವರು ಈ ಹಿಂದೆ ಕೇರಳ ರಾಜ್ಯದ ಇಡ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳ ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. […]
ವನಸ್ಥಾ ಆಗ್ರೋ ಫುಡ್ ಸಂಸ್ಥೆಯ ಆಹಾರೋತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ
ಬೆಂಗಳೂರು: ವನಸ್ಥಾ ಆಗ್ರೋ ಫುಡ್ ಪ್ರೈ ಲಿ. ಸಂಸ್ಥೆಯ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭವು ಬೆಂಗಳೂರಿನ ರಾಜಭವನ ರಸ್ತೆಯ ವಸಂತನಗರದಲ್ಲಿರುವ “ದ ಕ್ಯಾಪಿಟಲ್” ಹೋಟೇಲಿನಲ್ಲಿ ಶನಿವಾರ ನಡೆಯಿತು. ಬಿಗ್_ಬಾಸ್ ಸೀಝನ್-7ರ ವಿಜೇತ ಹಾಗೂ ಉದಯೋನ್ಮುಖ ಚಲನಚಿತ್ರ ನಟ ಶೈನ್ ಶೆಟ್ಟಿ ‘’ವನಸ್ಥಾ’’ ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ. ಅವರು ಇಂದು ಅಧಿಕೃತವಾಗಿ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಅವಧೂತ ಶ್ರೀ ವಿನಯ ಗುರೂಜಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಾಸ್ಟ್ ಫುಡ್ ಲೈಪ್ ನಲ್ಲಿ ಮರೆಯಾಗುತ್ತಿರುವ ಪಾರಂಪರಿಕ […]
ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠದ ಸದಸ್ಯರಾಗಿ ರತ್ನಾಕರ್ ಇಂದ್ರಾಳಿ ನೇಮಕ
ಉಡುಪಿ: ಬಿಜೆಪಿ ಉಡುಪಿ ಜಿಲ್ಲೆಯ ನೇಕಾರರ ಪ್ರಕೋಷ್ಠದ ಸಂಚಾಲಕ ರತ್ನಾಕರ್ ಇಂದ್ರಾಳಿ ಅವರು ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರನ್ನು ರಾಜ್ಯ ನೇಕಾರರ ಪ್ರಕೋಷ್ಠದ ಸದಸ್ಯರನ್ನಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಶಿಫಾರಸಿನ ಮೇರೆಗೆ ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕ ಡಾ. ಬಸವರಾಜ್ ಎಸ್. ಕೇಲಗಾರ ಹಾಗೂ ಸಹ ಸಂಚಾಲಕ ಡಾ. ಕೆ. ನಾರಾಯಣ್ ನೇಮಕ ಮಾಡಿದ್ದಾರೆ. ರತ್ನಾಕರ್ ಇಂದ್ರಾಳಿ ಮಂಗಳೂರು ವಿಭಾಗದ ಕೊಡಗು, ದಕ್ಷಿಣ ಕನ್ನಡ ಹಾಗೂ […]
ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ 215 ಜನರಿಗೆ ಕನ್ನಡಕ ವಿತರಣೆ
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಹಾಗೂ ಕೊಡವೂರು ಬ್ರಾಹ್ಮಣ ವಲಯ ಸಮಿತಿ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ 215 ಜನರಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ಕೊಡವೂರು ವಿಪ್ರಶ್ರೀ ಸಭಾಸಭನದಲ್ಲಿ ಶನಿವಾರ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಿದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. […]
ಕಟಪಾಡಿ ಗ್ರಾಪಂ ವ್ಯಾಪ್ತಿಯ ಅನ್ಯ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಪರ ಆಡಳಿತ ಹಾಗೂ ಸದೃಢ ಪಕ್ಷ ಸಂಘಟನೆಯಿಂದ ಇಂದು ಬಿಜೆಪಿ ಸರ್ವಸ್ಪರ್ಶಿ ಸರ್ವವ್ಯಾಪಿ ಎನಿಸಿದೆ. ಇದರ ಪರಿಣಾಮವಾಗಿ ಯುವ ಜನತೆಯ ಒಲವು ಬಿಜೆಪಿಯತ್ತ ಕೇಂದ್ರೀಕೃತವಾಗಿದೆ. ಪ್ರಸಕ್ತ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಗರಿಷ್ಠ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. […]