ಮುಂದಿನ ಎರಡು ವರ್ಷದೊಳಗೆ ಭಾರತ ಟೋಲ್ ಬೂತ್ ಮುಕ್ತವಾಗಲಿದೆ: ನಿತಿನ್ ಗಡ್ಕರಿ
ನವದೆಹಲಿ: ಮುಂದಿನ ಎರಡು ವರ್ಷದೊಳಗೆ ಭಾರತದ ಎಲ್ಲ ಹೆದ್ದಾರಿಗಳನ್ನು ಟೋಲ್ಬೂತ್ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ದೇಶಾದ್ಯಂತ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಟೋಲ್ ಸಂಗ್ರಹಕ್ಕೆ ಜಿಪಿಎಸ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದರು. ವಾಹನಗಳ ತಡೆರಹಿತ ಚಾಲನೆ ಇನ್ಮುಂದೆ ಟೋಲ್ ಬೂತ್ನಲ್ಲಿ ಕಟ್ಟಬೇಕಾದ ಶುಲ್ಕವನ್ನು ಮುಂದಿನ ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಯಿಂದಲೇ ಕಡಿತಗೊಳಿಸಲಾಗುತ್ತದೆ. ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ […]
ಉಡುಪಿ ಯಶೋದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಚೇರಿ ಉದ್ಘಾಟನೆ
ಉಡುಪಿ: ಇಲ್ಲಿನ ಕೃಷ್ಣಮಠ ಪಾರ್ಕಿಂಗ್ ಬೈಲಕೆರೆ ಹೋಟೆಲ್ ಮಥುರದ ಹತ್ತಿರ ಆರಂಭಿಸಿರುವ ಯಶೋದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪ್ರಧಾನ ಕಚೇರಿಯನ್ನು ಉಡುಪಿ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದರ ಪರಿಪಾಲನೆ ಮತ್ತು ಶಿಸ್ತು ನಮ್ಮ ಜವಾಬ್ದಾರಿಯಾಗಿದೆ ಎಂದರು. ಉಡುಪಿ ಯಶೋದ ಆಟೋ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ಮಾಲಕರಾದ ಭಾಸ್ಕರ್ ಶೇರಿಗಾರ್, […]