ಉಡುಪಿ: 17,641 ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 17641 ಮಂದಿಗೆ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಶುಕ್ರವಾರ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಗೆ 2021 ರ ಮೊದಲ ತ್ರೆöÊಮಾಸಿಕ ಅವಧಿಯಲ್ಲಿ ಕೋವಿಡ್19 ಲಸಿಕೆ ಸರಬರಾಜು ಆಗುವ ನಿರೀಕ್ಷೆಯಿದ್ದು, ಈ ಲಸಿಕೆಯನ್ನು ಪ್ರಾಥಮಿಕವಾಗಿ ಕರೋನಾ ವಿರುದ್ದ ಹೋರಾಡುತ್ತಿರುವ ಫ್ರಂಟ್‌ಲೈನ್ ವರ್ಕರ್ ಗಳಾದ ಆರೋಗ್ಯ […]
ಸ್ವರ್ಣಾರತಿ ಅಭಿಯಾನಕ್ಕೆ ಶ್ರೀ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ತೀರ್ಥ ಸ್ವಾಮೀಜಿಗಳಿಂದ ಚಾಲನೆ
ಕಾರ್ಕಳ: ಸ್ವರ್ಣಾರಾಧನಾ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾದ ಸ್ವರ್ಣಾರತಿ ಕಾರ್ಯಕ್ರಮವನ್ನು ಎಣ್ಣೆಹೊಳೆ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಾಲಯದ ಬಳಿ ಸ್ವರ್ಣಾನದಿ ತಟದಲ್ಲಿ ಶ್ರೀ ಗೌಡಪಾದಾಚಾರ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಇಂದು ಚಾಲನೆ ನೀಡಿದರು. ಅಕ್ಟೋಬರ್ ಎರಡರಿಂದ ಪ್ರಾರಂಭವಾದ ಸ್ವರ್ಣಾರತಿ ಕಾರ್ಯಕ್ರಮವು ಎಪ್ರಿಲ್ ತಿಂಗಳ 13, 2021 ರ ಸೌರಮಾನ ಯುಗಾದಿಯ ತನಕ ನಡೆಯಲಿದೆ. ಸಮಾರಂಭದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ದ ಮೊಕ್ತೆಸರ ರಘುರಾಮ ನಾಯಕ್ ಅಂಡಾರು, ,ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ್ ನಾಯಕ್ ಸಂಘದ ಸದಸ್ಯರು […]
ಸಿದ್ದರಾಮಯ್ಯ ಅವರು 2ನೇ ಅವಧಿಗೆ ಸಿಎಂ ಆಗಬೇಕೆಂದು ನಾನು ಬಯಸಿದ್ದೆ: ಡಿಕೆಶಿ
ಬೆಳಗಾವಿ: ಸಿದ್ದರಾಮಯ್ಯ ಅವರು 2ನೇ ಅವಧಿಗೆ ಮುಖ್ಯಮಂತ್ರಿ ಆಗಬೇಕೆಂದು ನಾನು ಬಯಸಿದ್ದೆ. ಮೈಸೂರು ಜಿಲ್ಲೆಯ ಹುಣಸೂರಲ್ಲಿ ಚುನಾವಣಾ ಪ್ರಚಾರದಲ್ಲಿ ನಾನೇ ಭಾಷಣ ಮಾಡಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು, 2ನೇ ಬಾರಿಗೆ ನಾನು ಮುಖ್ಯಮಂತ್ರಿ ಆಗುವುದು ನಮ್ಮವರಿಗೇ ಬೇಡವಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದವರು ನಾವು. ಯಾವ ದೃಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ, ಆಂತರಿಕವಾಗಿ ಏನಾಯಿತೋ ಗೊತ್ತಿಲ್ಲ ಎಂದರು. ಸಿದ್ದರಾಮಯ್ಯ ಅವರನ್ನು ಎಲ್ಲರೂ ಬೆಂಬಲಿಸಿದ್ದರಿಂದಲೇ […]
ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆಟೊ ಚಾಲಕ
ಬೆಂಗಳೂರು: ಡ್ರಾಪ್ ಕೊಡಿಸುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಆಟೋ ಚಾಲಕ ದೇವನಹಳ್ಳಿಯ ಮುಬಾರಕ್ ಎಂದು ಗುರುತಿಸಲಾಗಿದೆ. 19 ವರ್ಷದ ಅತ್ಯಾಚಾರ ಸಂತ್ರಸ್ತೆ ಕಾಲೇಜು ಯುವತಿ ಮಾಗಡಿ ರಸ್ತೆಯ ಬಳಿಯ ನಿವಾಸಿಯಾಗಿದ್ದು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೂಡ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 9ರಂದು, ಮದುವೆ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡಲು ಥಣಿಸಂದ್ರಕ್ಕೆ ಬಂದಿದ್ದರು. ಮದುವೆ […]
ಡಿವೈಎಸ್ಪಿ ನಿಗೂಢ ಸಾವಿನ ಬೆನ್ನಲ್ಲೆ ಪೊಲೀಸ್ ದಂಪತಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ಡಿವೈಎಸ್ಪಿ ಲಕ್ಷ್ಮೀ ನಿಗೂಢ ಸಾವಿನ ಬೆನ್ನಲ್ಲೆ ಪೊಲೀಸ್ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಮಾಡಿಕೊಂಡ ಘಟನೆ ಬೆಂಗಳೂರು ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾನ್‌ಸ್ಟೇಬಲ್‌ಗಳಾದ ಎಚ್.ಸಿ. ಸುರೇಶ್ ಹಾಗೂ ಶೀಲಾ ಆತ್ಮಹತ್ಯೆ ಮಾಡಿಕೊಂಡವರು. ಈ ಇಬ್ಬರೂ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು. ಮಕ್ಕಳಾಗಿರಲಿಲ್ಲ ಎಂಬ ಕೊರಗು ಅವರಿಗೆ ಇತ್ತು. ಇದರಿಂದಲೇ ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಶೀಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಪಿಗೆಹಳ್ಳಿ ಎಸಿಪಿ ಉಪವಿಭಾಗದ ಕಚೇರಿಯಲ್ಲಿ ಬರಹಗಾರರಾಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯ ನಿರ್ವಹಿಸಿ ಮನೆಗೆ […]