ಕಾಪು: ಎರ್ಮಾಳು ನಿವಾಸಿ ನಾಪತ್ತೆ
ಉಡುಪಿ: ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಚಂದ್ರಾವತಿ ನಿಲಯ ನಿವಾಸಿ ಪದ್ಮನಾಭ ಕುಂದರ್ (59) ಎಂಬುವವರು ಡಿಸೆಂಬರ್ 7 ರಿಂದ ಕಾಣೆಯಾಗಿದ್ದಾರೆ. ಚಹರೆ: 5 ಅಡಿ 5 ಇಂಚು ಎತ್ತರವಿದ್ದು, ಸಾಮಾನ್ಯ ಶರೀರ, ಎಣ್ಣೆಕಪ್ಪು ಬಣ್ಣ ಹೊಂದಿದ್ದು, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ದೂ. ಸಂಖ್ಯೆ: 0820-2555452, 9480805450, ಕಾಪು ವೃತ್ತ ಪೊಲೀಸ್ ನಿರೀಕ್ಷಕರು ದೂ. ಸಂಖ್ಯೆ: 0820-2552133, ಉಡುಪಿ […]
ಕೆನರಾ ಗೃಹ ಸಾಲ ಮೇಳಕ್ಕೆ ಚಾಲನೆ: ಜನರಿಗೆ ಕೈಗೆಟಕುವ ದರದಲ್ಲಿ ಗೃಹ ನಿರ್ಮಾಣ- ಜೆರ್ರಿ ವಿನ್ಸೆಂಟ್ ಡಯಾಸ್
ಉಡುಪಿ: ಇಲ್ಲಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1 ಮತ್ತು ಆರ್ಎಎಚ್ ಕಚೇರಿ 1 ಇವರ ಸಹಯೋಗದಲ್ಲಿ ಎರಡು ದಿನಗಳ “ಕೆನರಾ ಗೃಹ ಸಾಲ ಮೇಳ-2020” ಬೃಹತ್ ಗೃಹ ಸಾಲ ಮೇಳ ಉಡುಪಿಯ ಕೆನರಾ ಬ್ಯಾಂಕ್ ಕೋರ್ಟ್ ರಸ್ತೆಯಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ನಡೆಯಿತು. ಮಾಂಡೋವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಜೆರ್ರಿ ವಿನ್ಸೆಂಟ್ ಡಯಾಸ್ ಮೇಳಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ನಿರ್ಮಾಣ ಸಂಸ್ಥೆಗಳು ನೋಟ್ ಅಮಾನೀಕರಣ, ಜಿಎಸ್ಟಿ, […]
ಅಂಚೆ ಕಚೇರಿಗಳಲ್ಲಿ ವಿದ್ಯುತ್, ಗ್ಯಾಸ್, ನೀರಿನ ಬಿಲ್ ಪಾವತಿ ಸೌಲಭ್ಯ
ಬೆಂಗಳೂರು: ವಿದ್ಯುತ್, ಗ್ಯಾಸ್, ನೀರಿನ ಬಿಲ್ ಗಳನ್ನು ಕಟ್ಟಲು ಅಲೆದಾಡುವ ಜನರಿಗೆ ಅಂಚೆ ಇಲಾಖೆ ಸಿಹಿಸುದ್ದಿ ನೀಡಿದೆ. ಹೌದು, ರಾಜ್ಯದ 800ಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ಇನ್ನು ಮುಂದೆ ನಾಗರಿಕರು ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್ ಪಾವತಿಸಬಹುದು. ಹಾಗೆ ಜೀವ ವಿಮೆ, ಸಾಮಾನ್ಯ ವಿಮೆ ಪಾಲಿಸಿಗಳು, ಇಎಂಐಗಳನ್ನು ಸಹ ಪಾವತಿಸಬಹುದು ಹಾಗೂ ಸಾಲಗಳಿಗೆ ಆನ್ ಲೈನ್ ಅರ್ಜಿಯನ್ನು ಸಹ ಅಂಚೆ ಕಚೇರಿ ಮೂಲಕ ಭರ್ತಿ ಮಾಡಬಹುದಾಗಿದೆ. 3 ತಿಂಗಳ ಪ್ರಾಯೋಗಿಕ ಸೇವೆ ನಂತರ ಅಂಚೆ ಇಲಾಖೆ, […]
ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ
ಮಂಗಳೂರು: ದುಷ್ಕರ್ಮಿಗಳ ತಂಡ ಯುವಕನೊಬ್ಬನ ಮೇಲೆ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿದ ಘಟನೆ ಮಂಗಳೂರಿನ ಅಡ್ಡೂರು ಎಂಬಲ್ಲಿ ಸಂಭವಿಸಿದೆ. ತಲವಾರು ದಾಳಿಗೆ ಒಳಗಾದ ಯುವಕನನ್ನು ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ ಎಂದು ಗುರುತಿಸಲಾಗಿದೆ. ಈತ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಮೂರು ಮಂದಿಯ ತಂಡ ದಾಳಿ ನಡೆಸಿದೆ. ಈ ಕೃತ್ಯವನ್ನು ಫರ್ವೀಝ್ ಹಾಗೂ ಸಹಚರರು ನಡೆಸಿದ್ದಾರೆ ಎಂದು ಎನ್ನಲಾಗಿದೆ. ದಾಳಿಯಿಂದ ಗಾಯಗೊಂಡ ತಾಜುದ್ದೀನ್ ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಬಜಪೆ […]