ಪುಷ್ಪಗಿರಿ ತಪ್ಪಲಿನಲ್ಲಿ ಭೂಕಂಪನದ ಅನುಭವ: ನಡುರಾತ್ರಿ ಬೆಚ್ಚಿಬಿದ್ದ ಜನ
ಸುಬ್ರಹ್ಮಣ್ಯ: ಇಲ್ಲಿನ ಪುಷ್ಪಗಿರಿ ತಪ್ಪಲು ಪ್ರದೇಶದ ಹಲವು ಕಡೆಗಳಲ್ಲಿ ಭಾನುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಇದರಿಂದ ಈ ಭಾಗದ ಜನರು ಭಾರಿ ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಯ ಗಡಿಭಾಗದಲ್ಲಿ ಬರುವ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ಮೊದಲಾದ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳು ಏಕಾಎಕಿಯಾಗಿ ಅಲುಗಾಡಿದ್ದು, ಭೂಗರ್ಭದಿಂದ ಸದ್ದು ಕೇಳಿಬಂದಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. […]
ಉಡುಪಿ: ನಾಳೆಯಿಂದ ಬೃಹತ್ ಕೆನರಾ ಗೃಹ ಸಾಲಮೇಳ
ಉಡುಪಿ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ- 1 ಹಾಗೂ ಆರ್ ಎಎಚ್ -1 ಸಹಯೋಗದಲ್ಲಿ ‘ಕೆನರಾ ಗೃಹ ಸಾಲ ಮೇಳ 2020’ ಬೃಹತ್ ಗೃಹ ಸಾಲಮೇಳ ಕಾರ್ಯಕ್ರಮ ಡಿಸೆಂಬರ್ 15 ಮತ್ತು 16ರಂದು ಬೆಳಿಗ್ಗೆ 10ರಿಂದ 5ಗಂಟೆಯವರೆಗೆ ಉಡುಪಿ ಕೋರ್ಟ್ ರೋಡ್ ನಲ್ಲಿರುವ ಪ್ರಾದೇಶಿಕ ಕೆನರಾ ಬ್ಯಾಂಕ್ ಕಚೇರಿಯಲ್ಲಿ ನಡೆಯಲಿದೆ. ಏನೇನಿದೆ ವಿಶೇಷ ಆಫರ್.? *ಶೇ. 6.90 ಬಡ್ಡಿದರದಲ್ಲಿ ಗೃಹ ಸಾಲ *ಜಾಮೀನು ರಹಿತ ಸಾಲ *ಮುಂಗಡ ಪಾವತಿ ಶುಲ್ಕವಿಲ್ಲ *ಆಕರ್ಷಕ ದರದಲ್ಲಿ ಸುಲಭ ಸಾಲ *ಸಾಲ […]
ಮುಷ್ಕರ ಹಿಂಪಡೆಯಲು ಸಾರಿಗೆ ನೌಕರರು ನಿರ್ಧಾರ: ಮಧ್ಯಾಹ್ನ ಸರ್ಕಾರಿ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆ
ಬೆಂಗಳೂರು: ದಿಢೀರ್ ನಡೆದ ಬೆಳವಣಿಗೆಯಿಂದಾಗಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಹಿಂಪಡೆಯಲು ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆ ಮಾಡಲು ಮಾತ್ರ ಬಾಕಿ ಇದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸಹಿತ ಇತರ ಸಚಿವರೊಂದಿಗೆ ಸಾರಿಗೆ ನೌಕರರ ಮುಖಂಡರು ನಡೆಸಿದ ಸಭೆ ವಿಫಲಗೊಂಡಿತ್ತು. ಅಲ್ಲದೆ, ಸೋಮವಾರ […]