ಕಾರ್ಕಳ: ಭೀಕರ ರಸ್ತೆ ಅಪಘಾತ; ಸ್ಕೂಟರ್ ಸವಾರ ಮೃತ್ಯು

ಕಾರ್ಕಳ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಕಾರ್ಕಳದ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಇಂದು ಸಂಭವಿಸಿದೆ. ಮೃತ ಸ್ಕೂಟರ್ ಸವಾರನನ್ನು ಕುಂದಾಪುರ ತಾಲೂಕಿನ ಹಾಲಾಡಿಯ ಮಂಜುನಾಥ (32) ಎಂದು ಗುರುತಿಸಲಾಗಿದೆ.‌ ಕಾರೊಂದು ಓವರ್‌ ಟೇಕ್‌ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಸವಾರ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರ ಸಹಾಯದಿಂದ ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ […]

ಉಡುಪಿ: ಸರ್ಕಾರಿ ಗೌರವದೊಂದಿಗೆ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ

ಉಡುಪಿ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಅಂತ್ಯಕ್ರಿಯೆ ಇಂದು ರಾತ್ರಿ ಅಂಬಲಪಾಡಿಯ ಮನೆಯ ಆವರಣದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಜಿಲ್ಲಾಧಿಕಾರಿ ಜಿ. ಜಗದೀಶ್‌ ಜಿಲ್ಲಾಡಳಿತದ ಪರವಾಗಿ ಗೌರವ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಿದರು. ಬಳಿಕ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹಿರಿಯ ಪುತ್ರ ವಿನಯಭೂಷಣ ಆಚಾರ್ಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ರಘುಪತಿ […]

ರಾಜ್ಯದಲ್ಲಿ ನಾಳೆ (ಡಿ.14) ಖಾಸಗಿ ಬಸ್ ಬಂದ್ ಇಲ್ಲ: ಕುಯಿಲಾಡಿ

ಉಡುಪಿ: ರಾಜ್ಯದಲ್ಲಿ ನಾಳೆ (ಡಿ.14)ಖಾಸಗಿ ಬಸ್ ಬಂದ್ ಇಲ್ಲ. ಎಂದಿನಂತೆ 8,500 ಬಸ್ ಗಳು ರಾಜ್ಯಾದ್ಯಂತ ಓಡಾಡಲಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಕೋಶಾಧಿಕಾರಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸರಕಾರದ ಜೊತೆ ಖಾಸಗಿ ಬಸ್ ಗಳು ಬೆಂಬಲವಾಗಿ ನಿಂತಿವೆ. ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧ ಇಲ್ಲ. ರಾಜ್ಯದ ಪ್ರಯಾಣಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾರ್ಕಳ: ಅರ್ಧದಲ್ಲಿ ಸ್ಥಗಿತಗೊಂಡಿದ್ದ ಬಡ ಕುಟುಂಬದ ಮನೆಯನ್ನು ಪೂರ್ಣಗೊಳಿಸಿದ ಕರಾವಳಿ ಯೂತ್ ಕ್ಲಬ್

ಕಾರ್ಕಳ: ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಅಶಕ್ತ ಕುಟುಂಬದ ನಿವಾಸಿ ದಿ. ಮಮತಾ ನಾಯ್ಕ ಅವರು ಆರ್ಥಿಕ ಹೊರೆಯಿಂದ ಅರ್ಧದಲ್ಲೇ ನಿಲ್ಲಿಸಿದ ಮನೆಯನ್ನು ಕರಾವಳಿ ಯೂತ್ ಕ್ಲಬ್ (ಕೆವೈಸಿ) ಉಡುಪಿ ಸಂಸ್ಥೆಯ ವತಿಯಿಂದ ತುರ್ತು ಯೋಜನೆಯ ಸಹೃದಯಿ ದಾನಿಗಳ ಸಹಕಾರದಿಂದ ಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಇಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ದಾನಿಗಳ ನೆರವಿನಿಂದ ಒಟ್ಟಾದ ಮೊತ್ತದಲ್ಲಿ ಮನೆಯ ಕೆಲಸ ಆಗಿ ಉಳಿದ 47,000 ಮೊತ್ತದ ಚೆಕ್ ನ್ನು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ಮನೆಯ ಖರ್ಚು ವೆಚ್ಚಕ್ಕಾಗಿ […]

ಮಣಿಪಾಲದಲ್ಲಿ ಮರಗಳ ಮಾರಣಹೋಮ: ಕಾನೂನು ಕ್ರಮಕ್ಕೆ ಆಗ್ರಹ

ಮಣಿಪಾಲ: ಸುಡುಬಿಸಿಲನಿಂದ ಕೂಡಿದ ಮಣಿಪಾಲ ನಗರಕ್ಕೆ ನೆರಳಿನ ಜತೆಗೆ ತಂಗಾಳಿಯನ್ನು ನೀಡುತ್ತಿದ್ದ ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸಿರುವ ಅಮಾನವಿಯ ಕೃತ್ಯ ಮಣಿಪಾಲ- ಹುಡ್ಕೊ ಕಾಲೋನಿಯ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯ ಬಳಿಯ ಸರಕಾರಿ ಸ್ಥಳದಲ್ಲಿ ನಡೆದಿದೆ. ವೃಕ್ಷಗಳ ಹತ್ಯೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ಪರಿಸರಪ್ರೇಮಿ ಗುರುರಾಜ್ ಆಚಾರ್ಯ ಅವರು ತಿವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಅರಣ್ಯ ಇಲಾಖೆ ಮರ ಕಡಿದು ಪರಿಸರಕ್ಕೆ ಹಾನಿ ಮಾಡಿರುವರ ವಿರುದ್ಧ […]