ಕಾರ್ಕಳ: ಪರ್ಪಲೆಗಿರಿ ಅಷ್ಟಮಂಗಲ ಪ್ರಶ್ನಾಚಿಂತನೆ, ಜೀರ್ಣೋದ್ಧಾರ ಸಂಕಲ್ಪ ಸಭೆಗೆ ಚಾಲನೆ

ಉಡುಪಿ: ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಪ್ರಯುಕ್ತ ಹಮ್ಮಿಕೊಂಡಿರುವ ಮೂರು ದಿನಗಳ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ ಸಂಕಲ್ಪ ಸಭೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಚಾಲನೆ ನೀಡಲಾಯಿತು. ಖ್ಯಾತ ದೈವಜ್ಞ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಕಾರ್ಕಳ ಶ್ರೀಕ್ಷೇತ್ರ ಪರ್ಪಲೆ ಗಿರಿಯ ಜತೆಗೆ ಕಾರ್ಕಳ […]

ಸುಮತಿ ರಘುರಾಮ್ ಪ್ರಭುಗೆ ಪಿಎಚ್.ಡಿ ಪದವಿ

ಉಡುಪಿ: ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಂಡಾರು ರಘುರಾಮ್ ಪ್ರಭು ಅವರ ಪತ್ನಿ ಸುಮತಿ ಪಿ ಅವರು ಮಂಡಿಸಿದ ‘ಹಿಸ್ಟೋರಿಕಲ್ ಸ್ಟಡಿ ಆಫ್ ಹೈಯರ್ ಎಜುಕೇಶನ್ ಇನ್ ಕರ್ನಾಟಕ ಸಿನ್ಸ್ ಇಂಡಿಪೆಂಡೆನ್ಸ್ (1947-2010)’ ಎಂಬ ವಿಷಯದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಸೈಂಟ್ ಆನ್ಸ್ ಕಾಲೇಜ್ ಆಪ್ ಎಜುಕೇಶನ್’ನ ಸಹ ಪ್ರಾಧ್ಯಾಪಕಿ (ವಿಶ್ರಾಂತ) ಡಾ. ಶಶಿಕಲಾ ಎ. ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಪ್ರಸ್ತುತ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ […]

ಉಡುಪಿ: ಶ್ರೀಕೃಷ್ಣಮಠದಲ್ಲಿ ತಪ್ತಮುದ್ರಾಧಾರಣ ಸಂಭ್ರಮ

ಉಡುಪಿ: ಕಾರ್ತಿಕ ಶುದ್ಧ ಏಕಾದಶಿ ದಿನವಾದ ಇಂದು ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು. ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡರು. ಬಳಿಕ ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು. ಭಕ್ತರಿಗೆ ಶ್ರೀಗಳಿಂದ ಮುದ್ರಾಧಾರಣೆ: ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು. […]

ಮಂಗಳೂರು: ರೌಡಿ ಶೀಟರ್ ನ ಬರ್ಬರ ಹತ್ಯೆ

ಮಂಗಳೂರು: ದುಷ್ಕರ್ಮಿಗಳ ತಂಡವೊಂದು ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬರ್ಕೆ ಠಾಣಾ ವ್ಯಾಪ್ತಿಯ ಕುದ್ರೋಳಿ ಸಮೀಪದ ಕರ್ನಲ್ ಗಾರ್ಡನ್ ನಲ್ಲಿ ನಡೆದಿದೆ. ಮೃತನನ್ನು ರೌಡಿ ಶೀಟರ್ ಇಂದ್ರಜಿತ್ ಎಂದು ಗುರುತಿಸಲಾಗಿದೆ. ಈತನನ್ನು‌ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಗಾರ್ಡನ್ ಬಳಿ‌ ಎಸೆದಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬರ್ಕೆ ಠಾಣಾ ಇನ್ಸ್‌ಪೆಕ್ಟರ್ ಸಿಬ್ಬಂದಿ ಆಗಮಿಸಿ ತನಿಖೆ ‌ನಡೆಸುತ್ತಿದ್ದಾರೆ.ಈತನ ಮೇಲೆ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ‌ ರೌಡಿ ಶೀಟ್ ತೆರೆಯಲಾಗಿತ್ತು. […]