ಉಡುಪಿ: ದೊಡ್ಡಣಗುಡ್ಡೆ ವೃದ್ಧೆಯ ರಕ್ಷಣೆ

ಉಡುಪಿ: ಸುಬ್ರಹ್ಮಣ್ಯ ನಗರದಲ್ಲಿ ದಿಕ್ಕುತಪ್ಪಿ ಬಂದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ದೊಡ್ಡಣಗುಡ್ಡೆಯ ಮನೆಗೆ ಸೇರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ವೃದ್ಧೆ ಮರೆವು ಕಾಯಿಲೆಯಿಂದ ಬಳಲುತ್ತಿದ್ದವರೆಂದು ತಿಳಿದು ಬಂದಿದೆ. ಮನೆಯಿಂದ ಬೆಳಗ್ಗೆ ಹೊರಗೆ ತೆರಳಿದ ವೃದ್ಧೆ, ಮರಳಿ ಮನೆಗೆ ಸೇರಲು ದಿಕ್ಕು ಕಾಣದೆ ರಾತ್ರಿ ಸಮಯದವರೆಗೂ ಅಲೆದಾಟ ನಡೆಸಿದ್ದಾರೆ. ಸುಬ್ರಹ್ಮಣ್ಯ ನಗರದಲ್ಲಿ ಸ್ಥಳೀಯರು ವೃದ್ಧೆಯನ್ನು ಉಪಚರಿಸಿದ್ದಾರೆ. ನಂತರ ನಗರಸಭೆ ಸದಸ್ಯೆ ಜಯಂತಿ ಪೂಜಾರಿ ಅವರು ನಾಗರಿಕ ಸಮಿತಿಯ ಸಹಾಯವಾಣಿಗೆ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ […]

ನಟಿ, ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ದುರ್ಮರಣ

ಹುಬ್ಬಳ್ಳಿ: ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉಮಾಶ್ರೀ ಅವರನ್ನು ಬಿಟ್ಟು ಕಾರು ಚಾಲಕ ತಮ್ಮೂರಿಗೆ ಹೊರಟಿದ್ದ. ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಸಮೀಪ ಅಪಘಾತ ನಡೆದಿದ್ದು, ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿಗೆ ಬಂದ ಕಾರುಗಳ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.