ಉಡುಪಿ: ಕೆನರಾ ಬ್ಯಾಂಕ್ ಸಿಎಸ್ಆರ್ ನಿಧಿಯಿಂದ ವಿಜೇತ ವಿಶೇಷ ಶಾಲೆಗೆ 15 ಕಾಟ್ ಬೆಡ್ ಹಸ್ತಾಂತರ
ಉಡುಪಿ: ಕೆನರಾ ಬ್ಯಾಂಕ್ ಸಿ.ಎಸ್.ಆರ್ ನಿಧಿಯಿಂದ ವಿಜೇತ ವಿಶೇಷ ಶಾಲೆಯ ವಸತಿ ನಿಲಯದ ಮಕ್ಕಳಿಗೆ ಅವಶ್ಯಕವಿರುವ 15 ಕಾಟ್ ಹಾಗೂ ಬೆಡ್ ಗಳನ್ನು ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಚೇರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಣಿ ಮೇಕಲೈ ಇಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಜನರಲ್ ಮ್ಯಾನೇಜರ್ ರಾಕೇಶ್ ಕಶ್ಯಪ್, ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ, ವೃತ್ತ ಕಚೇರಿ ಮಣಿಪಾಲದ ಜನರಲ್ ಮ್ಯಾನೇಜರ್ ರಾಮ ನಾಯ್ಕ್, ಡಿಜಿಎಂ ಪ್ರದೀಪ್ ಭಕ್ತ, […]
ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆ ಸಂಶೋಧಿಸಿದ ಔಷಧಿಗೆ ಅಮೆರಿಕಾದ ಪೇಟೆಂಟ್
ಮಣಿಪಾಲ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿರುವ ಆರು ಸಂಶೋಧಿತ ಆಯುರ್ವೇದ ಔಷಧಿಗಳು ಹಾಗೂ ಒಂದು ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಇಪ್ಪತ್ತು ವರ್ಷಗಳ ಅವಧಿಯವರೆಗಿನ ಪೇಟ್‍ಂಟ್ ದೊರೆತಿದೆ. ಹೃದಯಘಾತವನ್ನು ಜೀವಕಣದ ಜೀನ್ ಮಟ್ಟದಲ್ಲಿ ನಿಯಂತ್ರಿಸಬಲ್ಲ ಹಾರ್ಟೋಜನ್ ಮಾತ್ರೆಗಳು, ದೇಹದಲ್ಲಿ ಇನ್ಸುಲಿನ್ ಅನ್ನು ಪುನರುತ್ಪತ್ತಿಗೊಳಿಸಿ ಆ ಮೂಲಕ ಸಿಹಿಮೂತ್ರ ರೋಗ ನಿಯಂತ್ರಣ ಹಾಗೂ ದೇಹದ ಪ್ರಮುಖ ಅಂಗಗಳಿಗೆ ರಕ್ಷಣೆ ಕೊಡುವ ಇನ್ಸೋಲ್ –ಎನ್ […]
ವಾರಾಹಿ ಇಲಾಖೆಯಿಂದ ನಿರ್ಮಿಸಲಾದ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ: ಲೋಕಾಯುಕ್ತ ತನಿಖೆಗೆ ಆಗ್ರಹ
ಉಡುಪಿ: ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ ವಾರಾಹಿ ಇಲಾಖೆಯಿಂದ ನಿರ್ಮಾಣಗೊಂಡಿರುವ ರಸ್ತೆ ಕಳಪೆಯಿಂದ ಕೂಡಿದ್ದು, ಈ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಕಾಮಗಾರಿಗೆ ₹ 2 ಕೋಟಿ ಪಾವತಿಯಾಗಿದೆ. ಈ ಬಗ್ಗೆ ಲೋಕಾಯುಕ್ತದಿಂದ ಸಮಗ್ರ ತನಿಖೆ ನಡೆಸುವಂತೆ ಸದಸ್ಯ ಜನಾರ್ದನ ತೋನ್ಸೆ ಆಗ್ರಹಿಸಿದರು. ಈ ಕುರಿತಂತೆ ಲೋಕಾಯುಕ್ತಕ್ಕೆ ಪತ್ರ ಬರೆಯಲು ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಲಾಕ್‍ಡೌನ್ ಅವಧಿಯಲ್ಲಿ ಬೈಂದೂರು ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸಿರುವಲ್ಲಿ ಅವ್ಯವಹಾರ […]
ಉಡುಪಿ ಜಿಲ್ಲಾಸ್ಪತ್ರೆ ಬ್ರಹ್ಮಾವರಕ್ಕೆ ಸ್ಥಳಾಂತರ.!
ಉಡುಪಿ: ಪ್ರಸ್ತುತ ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಇತರೆ ಮೂಲಭೂತ ಸೌಕರ್ಯಗಳೊಂದಿಗೆ ₹ 115 ಕೋಟಿ ವೆಚ್ಚದಲ್ಲಿ ಕಾಮಗಾರಿಗೊಳ್ಳಲು ಈಗಾಗಲೇ ಅನುಮೋದನೆ ದೊರೆತಿದೆ. ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಪೂಣಗೊಳ್ಳುವವರೆಗೆ, ಈಗಿರುವ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಬಗ್ಗೆ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಯು 2021 ರ ಫೆಬ್ರವರಿ ಅಥವಾ ಮಾರ್ಚ್ […]