ಉಡುಪಿ: ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರಿಗೆ ಮಂಕುಬೂದಿ ಎರಚುತ್ತಿದ್ದ ಆರೋಪಿಯ ಬಂಧನ

ಉಡುಪಿ: ಕೊಂಕಣ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಹಣ ಸುಲಿಗೆ ಮಾಡುತ್ತಿದ್ದ ವಂಚಕನೊಬ್ಬನನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಈತ ಜನರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಹಾಗೂ ದಾಖಲೆ ಪತ್ರಗಳನ್ನು ಪಡೆದುಕೊಂಡು ಮಂಕುಬೂದಿ ಎರಚುತ್ತಿದ್ದನು. ಅಕ್ಟೋಬರ್ 25 ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಒಪಿಡಿ ಬಳಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಮಥಾಯಿಸ್ ಎಂಬುವವರ ನ್ನು ಪರಿಚಯ ಮಾಡಿಕೊಂಡ ಆರೋಪಿ ಗಣೇಶ್ ನಾಯ್ಕ್ ‘ನಾನು […]

ಕಂಬಳ ಕೂಟದಲ್ಲಿ ಮಿಂಚಿ ಕಂಬಳ ಪ್ರಿಯರ ಮನಗೆದ್ದ “ಅಪ್ಪು”ಇನ್ನಿಲ್ಲ

ಕಂಬಳ ಕೂಟದಲ್ಲಿ ಮಿಂಚಿ ಸಾಧನೆಗೈದ ಕುಕ್ಕುಂದೂರು ಕಂಬಳ ಕೋಣ ‘ಅಪ್ಪು’ ಮಂಗಳವಾರ ಸಾವನ್ನಪ್ಪಿದ್ದು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದು ಕುಕ್ಕುಂದೂರು ರವೀಂದ್ರ ಕುಮಾರ್ ಅವರ ಮುದ್ದಿನ ಕೋಣವಾಗಿತ್ತು. ೨೨ ಹರೆಯದ ಅಪ್ಪುವಿಗೆ ಕಳೆದ ಕೆಲವು ವಾರದಿಂದ ಬೇಧಿಗೆ ಚಿಕಿತ್ಸೆ ನೀಡಲಾಗಿತ್ತು,ಆದರೆ ಅಪ್ಪು ಚಿಕಿತ್ಸೆಗೆ  ಸ್ಪಂದಿಸದೆ ಮಂಗಳವಾರ ಸಾವ್ನಪ್ಪಿದೆ. ಕಂಬಳಕೂಟದಲ್ಲಿ ಅಪ್ಪುವಿಗೆ ಭಾರೀ ಹೆಸರಿತ್ತು. 6-7 ವರ್ಷದ ಅವಧಿಯಯಲ್ಲಿ ಪ್ರತಿ ವರ್ಷವೂ ಪದಕ ಪಡೆದು 40-42 ಪದಕ ತನ್ನದಾಗಿಸಿಕೊಂಡಿತ್ತು ಅಪ್ಪು ಪ್ರತೀ ವರ್ಷದ ಕಂಬಳ ಕೂಟದಲ್ಲಿ ಹೊಸ […]

ಉಡುಪಿ ಕಿನ್ನಿಮುಳ್ಕಿ ಪೃಥ್ವಿ ಏಜೆನ್ಸೀಸ್: ದೀಪಾವಳಿ ಪ್ರಯುಕ್ತ ಆಫರ್ ಸೇಲ್

ಉಡುಪಿ: ಕಿನ್ನಿಮುಲ್ಕಿ ಮುಖ್ಯರಸ್ತೆಯಲ್ಲಿ ಹಲವಾರು ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಗೃಹೋಪಕರಣ ಮತ್ತು ಪೀಠೋಪಕರಣಗಳ ಬೃಹತ್ ಮಳಿಗೆ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಆಫರ್ ಸೇಲ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 3 ಡೋರ್ ವಾರ್ಡ್ರೋಬ್ 9,999 ರೂ., ಕ್ಲಾತ್ ಹ್ಯಾಂಗರ್ 999ರೂ., ಗ್ಲಾಸ್ ಸೆಂಟರ್ ಟೇಬಲ್ 999 ರೂ., ಡಬಲ್ ಕಾಟ್ 7,500 ರೂ., 4 ಚೇಯರ್ಸ್ ಡೈನಿಂಗ್ ಟೇಬಲ್ 4,999 ರೂ., ಕಂಪ್ಯೂಟರ್ ಚೆಯರ್ 2,500 ರೂ., ಕಂಪ್ಯೂಟರ್ […]

ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

ನವದೆಹಲಿ: ನೂರು ವರ್ಷಗಳ ನಂತರ ದೇಶದಲ್ಲಿ ಪ್ರಕಟವಾಗಿರುವ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ (ಸಂಸ್ಕೃತ 24 ಸಂಪುಟಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ. ಶ್ರೀ ಪಲಿಮಾರು ಮಠದ ತತ್ವ ಸಂಶೋಧನ ಸಂಸತ್ ನ ವತಿಯಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರಕಟಗೊಂಡು ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಅನೇಕ‌ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ವೈಭವದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತ್ತು. ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ […]

ಮಣಿಪಾಲ: ಮಾನಸಿಕ ಅಸ್ವಸ್ಥನ ರಕ್ಷಣೆ

ಉಡುಪಿ: ಮಣಿಪಾಲ ಪರಿಸರದಲ್ಲಿ ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥನ ರಕ್ಷಣಾ ಕಾರ್ಯಚರಣೆಯು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸೋಮವಾರ ನಡೆಯಿತು. ಮಣಿಪಾಲ ಪೋಲಿಸ್ ಠಾಣೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಹಾಗೂ ಸ್ಥಳಿಯರು ಕಾರ್ಯಚರಣೆಗೆ ಸಹಕಾರ ನೀಡಿದರು. ಕಳೆದ ಹಲವಾರು ದಿನಗಳಿಂದ ನಗರದ ರಸ್ತೆಗಳಲ್ಲಿ ಅಪರಿಚಿತ ಮಾನಸಿಕ ಅಸ್ವಸ್ಥನೊರ್ವ ಸಂಚರಿಸುತ್ತಿದ್ದನು. ಇತನ ಉಪಟಳದಿಂದ ಸಾರ್ವಜನಿಕರು ಭೀತಿಗೊಳಗಾಗಿದ್ದರು. ಅಶ್ಲಿಲ ವರ್ತನೆ, ವಿನಾಕಾರಣ ವಾಹನಗಳ ಮೇಲೆ ಕಲ್ಲುಗಳನ್ನು ಎಸೆಯುವುದು, ಮಹಿಳೆಯರನ್ನು ಹಿಂಬಾಲಿಸುವ ವಿಕೃತ ಕೃತ್ಯಗಳು […]