ವಿನಯ್ ಕುಲಕರ್ಣಿ ಬಂಧನ ಬಿಜೆಪಿಯ ರಾಜಕೀಯ ಪಿತೂರಿ: ಸುರ್ಜೇವಾಲ ಆರೋಪ
ಬೆಂಗಳೂರು: ಬಿಜೆಪಿ ಸರ್ಕಾರವು ಸಿಬಿಐ ಅನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದೆ. ಇದರಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿ ಅಡಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿಯ ಇಂತಹ ತಂತ್ರಗಳಿಗೆ ಕಾಂಗ್ರೆಸ್ ಎಂದಿಗೂ ಜಗ್ಗುವುದಿಲ್ಲ. ಅಸ್ಥಿರ ಯಡಿಯೂರಪ್ಪ ಸರ್ಕಾರವು ಸಿಬಿಐ, ಇಡಿ ಬಳಸಿಕೊಂಡು ಡಿಕೆ ಶಿವಕುಮಾರ್, ಡಾ.ಜಿ ಪರಮೇಶ್ವರ್, ವಿನಯ್ ಕುಲಕರ್ಣಿ ಸೇರಿದಂತೆ ಇನ್ನಿತರ ಕಾಂಗ್ರೆಸ್ […]
ಮೂಡುಬಿದಿರೆ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ನ ಚೊಚ್ಚಲ ಕಾರ್ಯಕ್ರಮ
ಮೂಡುಬಿದಿರೆ: ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಸಕ್ರೀಯರಾಗಿರುವ ಕಿದಿಯೂರಿನ ಭಾಗವತ ಕೆ.ಜೆ.ಗಣೇಶ್ ನೇತೃತ್ವದಲ್ಲಿ ಇತ್ತೀಚಿಗೆ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ನ ಕಲಾವಿದರು ಮೂಡುಬಿದಿರೆ ಅಲಂಗಾರು ಇಂದಿರಾ ಪಾಲ್ಕೆ ಸಭಾಭವನದಲ್ಲಿ ಚೊಚ್ಚಲ ಕಾರ್ಯಕ್ರಮ ‘ಗಾನವೈಭವ’ ಪ್ರಸ್ತುತಪಡಿಸಿದರು. ಭಾಗವತರಾಗಿ ಕೆ.ಜೆ.ಗಣೇಶ್ ಹಾಗು ಅವರ ಪುತ್ರ ದೀಪ್ತ ಕಿದಿಯೂರು, ಮದ್ದಳೆವಾದಕರಾಗಿ ಕೆ.ಜೆ.ಸುಧೀಂದ್ರ, ಅರವಿಂದ, ಚೆಂಡೆವಾದಕರಾಗಿ ಕೆ.ಜೆ.ಕೃಷ್ಣ ಮತ್ತು ಅವರ ಪುತ್ರ ಪ್ರಣೀತ್ ಕಿದಿಯೂರು ಪಾಲ್ಗೊಂಡರು. ಗಣ್ಯರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ […]
ದೀಪಾವಳಿ ಹಬ್ಬ ಆಚರಣೆ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ: ಸರ್ಕಾರದ ಆದೇಶದಲ್ಲಿ ಏನಿದೆ.?
ಬೆಂಗಳೂರು: ದೀಪಾವಳಿ ಹಬ್ಬ ಆಚರಣೆ ಕುರಿತಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಅದರಂತೆ ನವೆಂಬರ್ 7ರಿಂದ 16 ರ ವರೆಗೆ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. * ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಮಾರುವಂತಿಲ್ಲ ಹಾಗೂ ಸುಡುವಂತಿಲ್ಲ. *ಪರವಾನಗಿ ಪಡೆಯುವ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. *ಹಸಿರು ಮಾರಾಟ ಮಳಿಗೆಗಳನ್ನು ನವೆಂಬರ್ 7ರಿಂದ 16ರ ವರೆಗೆ ಮಾತ್ರ ತೆರೆಯಬೇಕು. *ಸಾರ್ವಜನಿಕ ಸ್ಥಳಗಳಿಂದ […]
ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಮನೆ, ಕಚೇರಿ ಸಹಿತ ಆರು ಕಡೆ ಎಸಿಬಿ ದಾಳಿ
ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಬೆಂಗಳೂರಿನ ಮನೆ ಸೇರಿದಂತೆ ಒಟ್ಟು ಆರು ಕಡೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಮತ್ತು ಅವ್ಯವಹಾರ ಸಂಬಂಧ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ಬೆಂಗಳೂರು ಮತ್ತು ಉಡುಪಿಯ ಹೆಬ್ರಿ ಸೇರಿದಂತೆ ಒಟ್ಟು ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಕೊಡಿಗೇನಹಳ್ಳಿಯಲ್ಲಿರುವ ನಿವಾಸ, ಸುಧಾ ಅವರಿಗೆ ಸಂಬಂಧಪಟ್ಟ ಯಲಹಂ ಫ್ಲಾಟ್, ಬ್ಯಾಟರಾಯನಪುರದ ಪರಿಚಿತರ […]
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ
ಉಡುಪಿ: ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಮಲ್ಪೆ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನ ಹೊಂದಿದರು. ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು. ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಕಲಾವಿದ ಮಲ್ಪೆ ರಾಮದಾಸ ಸಾಮಗರ ಪುತ್ರ , ತಂದೆ ಮತ್ತು ದೊಡ್ಡಪ್ಪ ಯಕ್ಷ ದಿಗ್ಗಜರೆನಿಸಿದ್ದ ಮಲ್ಪೆ ಶಂಕರನಾರಾಯಣ ಸಾಮಗರೇ ಇವರ ಗುರುಗಳು. ಅತ್ಯಂತ ಧೀಮಂತಿಕೆಯ ಅರ್ಥಧಾರಿ. ಪ್ರಾಯಃ ಮುಂದೆ ಅಂಥಹ ಧೀಮಂತಿಕೆ ಅಧ್ಯಯನಪೂರ್ಣತೆ ಇರುವ ಕಲಾವಿದರೇ ಅಪರೂಪವಾದಾರು . […]