ಶಿಸ್ತು ಸಂಯಮ ಸಂಘಟನೆಯಿಂದ ಪಕ್ಷ ಜತೆಗೆ ವ್ಯಕ್ತಿತ್ವ ವಿಕಸನ ಸಾಧ್ಯ: ಮಹೇಶ್ ಟೆಂಗಿನಕಾಯಿ
ಉಡುಪಿ: ಪಕ್ಷವು ವಿಶ್ವಾಸದಿಂದ ನೀಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ವಿಜಯ ಸಾಧಿಸುವ ಗುರಿ ಬಹಳ ಮುಖ್ಯವಾಗಿದೆ. ಶಿಸ್ತು, ಸಂಯಮ, ಸಂಘಟನೆಯಿಂದ ಪಕ್ಷದ ತತ್ವ ಸಿದ್ಧಾಂತಗಳ ಚೌಕಟ್ಟಿನೊಳಗೆ ಪಕ್ಷವನ್ನು ಎತ್ತರಕ್ಕೆ ಬೆಳೆಸುವ ಜೊತೆಗೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳನ್ನು ನೀಡುತ್ತಾ ಬಂದಿರುವ ಪಕ್ಷ ಬಿಜೆಪಿ. ಸೇವೆಯೇ ಸಂಘಟನೆ ಎಂಬ ವಿಶ್ವನಾಯಕ ಪ್ರಧಾನಿ […]
ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ: ಟ್ರಂಪ್ ಗೆ ಭಾರಿ ಮುಖಭಂಗ
ವಾಷಿಂಗ್ಟನ್: ಅಮೆರಿಕಾದ 46ನೇ ಅಧ್ಯಕ್ಷರಾಗಿ ಡಮಾಕ್ರಟಿಕ್ ಪಕ್ಷದ ಜೋ ಬೈಡನ್ ಆಯ್ಕೆಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಜೋ ಬೈಡನ್ ಗೆ 284 ಮತಗಳು ಲಭ್ಯಸಿದ್ದು, ಟ್ರಂಪ್ ಗೆ 214 ಮತಗಳು ಲಭಿಸಿದೆ. ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಕಮಲ ಹ್ಯಾರಿಸ್ ನೇಮಕಗೊಂಡಿದ್ದಾರೆ.
ಬಿಹಾರ ಮತದಾನೋತ್ತರ ಸಮೀಕ್ಷೆ: ಎನ್ ಡಿಎ ಮತ್ತು ಮಹಾಘಟಬಂಧನ್ ಮಧ್ಯೆ ಭಾರಿ ಪೈಪೋಟಿ
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಎನ್‌ಡಿಎ ಮತ್ತು ಮಹಾಘಟ ಬಂಧನ್ ನಡುವೆ ಅಧಿಕಾರಕ್ಕೆ ಸಮಬಲದ ಪೈಪೋಟಿ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ವಿಧಾನ ಸಭೆಯ ಬಲ 243 ಸರಳ ಬಹುಮತ 123 ಟಿವಿ9 ಭರತ್‌ವರ್ಷ್ ಬಿಜೆಪಿ–ಜೆಡಿಯು (ಎನ್‌ಡಿಎ): 110-120 ಕಾಂಗ್ರೆಸ್–ಆರ್‌ಜೆಡಿ (ಮಹಾಘಟ ಬಂಧನ್): 115-125 ಇತರೆ 10-15 ಸಿವೋಟರ್ ಸಮೀಕ್ಷೆ ಬಿಜೆಪಿ–ಜೆಡಿಯು (ಎನ್‌ಡಿಎ) 116 ಕಾಂಗ್ರೆಸ್–ಆರ್‌ಜೆಡಿ (ಮಹಾಘಟ ಬಂಧನ್) 120 ಇತರೆ 06 ಜನ್ ಕಿ ಬಾತ್ ಸಮೀಕ್ಷೆ ಬಿಜೆಪಿ–ಜೆಡಿಯು (ಎನ್‌ಡಿಎ) 91-117 ಕಾಂಗ್ರೆಸ್–ಆರ್‌ಜೆಡಿ (ಮಹಾ ಮೈತ್ರಿ) 118-138 […]
ಬೈ ಎಲೆಕ್ಷನ್ ಮತಗಟ್ಟೆ ಸಮೀಕ್ಷೆ: ಆರ್ ಆರ್ ನಗರ, ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು
ಬೆಂಗಳೂರು: ಸಿ ವೋಟರ್ ನಡೆಸಿರುವ ಆರ್ ಆರ್ ಕ್ಷೇತ್ರ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ಆರ್ ಆರ್ ನಗರದಲ್ಲಿ ಮುನಿರತ್ನ ಜಯಭೇರಿ ಸಾಧಿಸಲಿದ್ದು, ಶಿರಾದಲ್ಲಿ ರಾಜೇಶ್ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಸೋಲಲಿದ್ದು, ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ತಿಳಿಸಿದೆ.
ಕುಂದಾಪುರ: 9 ಬಾಲಕಿಯರು ಸಹಿತ 11 ಮಕ್ಕಳ ರಕ್ಷಣೆ
ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಕುಂದಾಪುರ ಪುರಸಭೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ, ವಿಶ್ವಾಸದಮನೆ ಸಂಸ್ಥೆಗಳು ಸೇರಿ ಶನಿವಾರ ಕುಂದಾಪುರ ಪುರಸಭೆ ವ್ಯಾಪ್ತಿಯ ವಿವಿಧೆಡೆ ಜಂಟಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ 11 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಕುಂದಾಪುರದ ವಾರದ ಸಂತೆ ಮಾರುಕಟ್ಟೆ, ಹೊಸ ಬಸ್ ನಿಲ್ದಾಣ, ಪೇಟೆ, ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶಿರಸಿ ಮತ್ತು […]