ಮಣಿಪಾಲ: ರಾಜೀವನಗರದ ಮನೆಯೊಂದರ ಬೇಲಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ಪತ್ತೆ

ಮಣಿಪಾಲ: ಇಲ್ಲಿನ ಮಂಚಿ ರಾಜೀವನಗರದ ಗಣೇಶ್ ಆಚಾರ್ಯ ಎಂಬುವವರ ಮನೆಯ ಸಮೀಪ ಮಂಗಳವಾರ ರಾತ್ರಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಅದನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.   ಗಣೇಶ್ ಅವರ ಮನೆಯ ಬೇಲಿಯಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಕೂಡಲೇ ಮನೆಯವರು ಉರಗ ತಜ್ಞ ಸುಧೀರ್ ರಾಜೀವನಗರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.   ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸುಧೀರ್, ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಟ್ಟರು. ಇವರಿಗೆ ಸ್ಥಳೀಯರಾದ ಶಿವಪ್ರಸಾದ್ […]

ಉಡುಪಿ: ಅಕ್ಷರದಾಸೋಹ ನೌಕರರ ವೇತನ ಹೆಚ್ಚಿಸುವಂತೆ ಆಗ್ರಹಿಸಿ ನ. 26ರಂದು ಮುಷ್ಕರ

ಕಾರ್ಕಳ: ಅಕ್ಷರದಾಸೋಹ ನೌಕರರನ್ನು ಖಾಯಂ ಗೊಳಿಸಬೇಕು ಹಾಗೂ ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ, ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನವೆಂಬರ್ 26 ರಂದು ಅಕ್ಷರದಾಸೋಹ ನೌಕರರು ಮುಷ್ಕರ ಮಾಡಲಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಕಾರ್ಕಳದಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಿಐಟಿಯು ಮುಖಂಡ ಕವಿರಾಜ್ ಮಾತನಾಡಿ, ಅಕ್ಷರದಾಸೋಹ ನೌಕರರು ನ. 9 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸದ್ದಾರೆ ಎಂದು ಹೇಳಿದರು. ಕಾರ್ಮಿಕ ಮುಖಂಡ […]

ಉಡುಪಿ: ನ. 8ರಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಾರಂಭ

ಉಡುಪಿ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಜಂಟಿ ಆಶ್ರಯದಲ್ಲಿ ‘ಮಲಬಾರ್ ವಿಶ್ವರಂಗ ಪುರಸ್ಕಾರ -2020’ ಸಮಾರಂಭ ಇದೇ ನವೆಂಬರ್ 8ರಂದು ಸಂಜೆ 5 ಗಂಟೆಗೆ ಉಡುಪಿಯ ಗೀತಾಂಜಲಿ ಬಳಿ ಇರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಕಿರ್ಣದಲ್ಲಿ ನಡೆಯಲಿದೆ. ಈ ಬಾರಿ ಮಲಬಾರ್ ವಿಶ್ವರಂಗ ಪುರಸ್ಕಾರವನ್ನು ಹಿರಿಯ ರಂಗಕರ್ಮಿಗಳಾದ ಶ್ರೀನಿವಾಸ್ ಶೆಟ್ಟಿಗಾರ್, ಡಾ. ಮಾಧವಿ ಭಂಡಾರಿ, ಜಯರಾಮ್ ನೀಲಾವರ, ರಾಜಗೋಪಾಲ್ ಶೇಟ್ ಹಾಗೂ ಅಭಿಲಾಷಾ ಎಸ್. ಅವರಿಗೆ […]

ನೈಮಿಷಾರಣ್ಯದ ವಿನಾಯಕ ದೇವರ ದರ್ಶನ ಪಡೆದ ಪೇಜಾವರ ಶ್ರೀ

ಉತ್ತರಪ್ರದೇಶ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ನೈಮಿಷಾರಣ್ಯ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಂಡರು. ನೈಮಿಷಾರಣ್ಯದಲ್ಲಿ ಚಕ್ರ ತೀರ್ಥ ಸ್ನಾನ ಮತ್ತು ಗೋಮತಿ ನದಿ ಸ್ನಾನ ಮಾಡಿದ ಶ್ರೀಗಳು, ಬಳಿಕ ವ್ಯಾಸ ಗದ್ದುಗೆ ದರ್ಶನ ಪಡೆದರು. ಸಂಜೆ ಹರಿದ್ವಾರಕ್ಕೆ ಭೇಟಿ ನೀಡಿದರು. ನಾಳೆ ಶ್ರೀಗಳು ಬದ್ರಿ ಪ್ರಯಾಣ ಮಾಡಲಿದ್ದಾರೆ. ನ. 5ರಂದು ಬದ್ರಿ ನಾರಾಯಣ ದೇವರ ದರ್ಶನ ಪಡೆದು, ನ. 6ರಂದು ಹರಿದ್ವಾರದಿಂದ ವಾಪಸಾಗುವರು.

ಉಡುಪಿ: ಯುವಕರಿಬ್ಬರಿಗೆ ಹಲ್ಲೆ ನಡೆಸಿ ಚಿನ್ನದ ಸರ ಸುಲಿಗೆ ಮಾಡಿದ ದುಷ್ಕರ್ಮಿಗಳು

ಉಡುಪಿ: ಯುವಕರಿಬ್ಬರಿಗೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ದೊಡ್ಡಣಗುಡ್ಡೆಯ ಆಟೋ ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದಿದೆ. ಲಭೀಶ್ ಎಂಬುವವರು ತನ್ನ‌ ಗೆಳೆಯ ಕಿಶನ್ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಇವರು ದೊಡ್ಡಣಗುಡ್ಡೆಯ ಆಟೋ ನಿಲ್ದಾಣದ ಬಳಿ ತೆರಳುತ್ತಿರುವಾಗ ಸ್ಕಾರ್ಪಿಯೋ ಕಾರೊಂದು ಅತೀ ವೇಗವಾಗಿ ಬಂದು ಕಾರಿನ ಎಡಕ್ಕೆ ತಿರುಗಿಸಿದ್ದಾರೆ. ಇದೇ ಸಂದರ್ಭದಲ್ಲಿ ಬುಲೆಟ್ ನಲ್ಲಿ ಬಂದ ನಿಶಾಂತ ಹಾಗೂ ಸುಮನ್ ಎಂಬುವವರು ಬುಲೆಟ್ ನ್ನು ಲಭೀಶ್ ಪ್ರಯಾಣಿಸುತ್ತಿದ್ದ ಕಾರಿಗೆ […]