ಹಿರಿಯಡಕ: ಕಡಿದ ಮರ ಹಣೆಗೆ ಬಡಿದು ವ್ಯಕ್ತಿ ಮೃತ್ಯು

ಹಿರಿಯಡಕ: ಮರ ಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಡಿದ ಮರ ಹಣೆಗೆ ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮಾರಬೆಟ್ಟು ಎಂಬಲ್ಲಿ ಭಾನುವಾರ ನಡೆದಿದೆ. ಹಿರಿಯಡಕ ಬೊಮ್ಮಾರಬೆಟ್ಟು ಗ್ರಾಮದ ಕೊಂಡಾಡಿ ನಿವಾಸಿ ಸುಂದರ ಹರಿಜನ (57) ಎಂಬುವವರು ಮೃತ ದುರ್ದೈವಿ. ಇವರು‌ ಸಂತೋಷ ಪೂಜಾರಿ ಎಂಬುವವರ ಕಂಟ್ರ್ಯಾಕ್ಟರಿನಲ್ಲಿ ಮರ ಕಡಿಯುವ ಕೆಲಸ ಮಾಡಿಕೊಂಡಿದ್ದರು. ಭಾನುವಾರ (ನ.1) ಬೆಳಿಗ್ಗೆ 10 ಗಂಟೆಗೆ ವೇಳೆಗೆ ಬೊಮ್ಮಾರಬೆಟ್ಟು ಗ್ರಾಮದ ಮಾಣೈ ಕೃಷ್ಣ ನಾಯ್ಕ ಅವರ ಮನೆಯ ಬಳಿ ಇರುವ ಮರವನ್ನು ಕಡಿಯುತ್ತಿದ್ದರು. ಈ […]

ಕನ್ನಡಿಗರೆಲ್ಲಾ ನೋಡಲೇಬೇಕಾದ ಕಾಡೋ ಕಿರುಚಿತ್ರ “ಕನ್ನಡ ಮೀಡಿಯಂ”

ಕನ್ನಡದ ಕಾಳಜಿ, ಪ್ರೀತಿಯ ಕುರಿತು ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಿರುಚಿತ್ರಗಳು ಬಂದಿದೆ.ಅವುಗಳಲ್ಲಿ ಕೆಲವೊಂದು ಕಿರುಚಿತ್ರಗಳು ವಿಭಿನ್ನ ನಿರೂಪಣೆ ಮತ್ತು ಹೊಸ ಪ್ರಯತ್ನಗಳಿಂದ ಕಾಡುತ್ತದೆ. ಅಂತಹ ವಿಭಿನ್ನ ಮತ್ತು ಕಾಡುವ ಕಿರುಚಿತ್ರವೊಂದು ರಿಲೀಸ್ ಆಗಿದೆ. ಸಿನಿಮಾದ ಹೆಸರು “ಕನ್ನಡ medium” ಕನ್ನಡ ಭಾಷೆಯ ರಕ್ಷಣೆ ಹಾಗೂ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಕಿರು ಚಿತ್ರವನ್ನು ಬೆಳಕು ಚೆಲ್ಲುತ್ತದೆ. ಸುಂದರವಾದ ಈ ಚಿತ್ರವನ್ನು ದಶಮಾನೋತ್ಸವ ಆಚರಿಸಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟ ಶಿರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಕರಿಸಿದ್ದು, ಅಡ್ಡಹೊಳೆ ಪ್ರಾಥಮಿಕ […]

ಮಣಿಪಾಲ: ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಆಟೊ ರಿಕ್ಷಾ ಕಳವು

ಮಣಿಪಾಲ: ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದ ಆಟೊ ರಿಕ್ಷಾವನ್ನು ಕಳವು ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ನಿವಾಸಿ ಶಂಕರ ಪೂಜಾರಿ (52) ಎಂಬುವವರು ಆಟೊ ಕಳೆದುಕೊಂಡವರು. ಶಂಕರ ಪೂಜಾರಿ ಅ. 31ರಂದು ರಾತ್ರಿ ತನ್ನ ಮನೆಯಲ್ಲಿ ಆಟೊವನ್ನು ಬೀಗಿ ಹಾಕಿ ನಿಲ್ಲಿಸಿದ್ದರು. ಮರುದಿನ ನ. 1ರಂದು‌ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಬಳಿ ನಿಲ್ಲಿಸಿದ್ದ ಆಟೊ […]

ಉಡುಪಿ: ರಕ್ಷಿತಾ ಅನುಮಾನಾಸ್ಪದ ಸಾವು ಪ್ರಕರಣ; ಪ್ರಿಯಕರ ಪ್ರಶಾಂತ್ ಮೂರು ದಿನ ಪೊಲೀಸ್ ಕಸ್ಟಡಿಗೆ

ಉಡುಪಿ: ವಿದ್ಯಾರ್ಥಿನಿ ರಕ್ಷಿತಾ ನಾಯಕ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಮೊಗವೀರನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ರಕ್ಷಿತಾ ನಾಯಕ್ ಗೆಳೆಯ ಪ್ರಶಾಂತ್ ಮೊಗವೀರನನ್ನು ಉಡುಪಿ ನಗರ ಠಾಣಾ ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಏನಿದು ಘಟನೆ: ಅಕ್ಟೋಬರ್ 24ರಂದು ರಕ್ಷಿತಾಳನ್ನು ಪ್ರಶಾಂತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ತಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಬಳಿಕ […]

‘ಪ್ರತ್ಯೇಕ ತುಳುರಾಜ್ಯಕ್ಕಾಗಿ ನಾವು ಬ್ಲಾಸ್ಟ್ ಮಾಡಬೇಕು’: ಆಡಿಯೋ ವೈರಲ್

ಮಂಗಳೂರು: ‘ಪ್ರತ್ಯೇಕ ತುಳು ರಾಜ್ಯದ ಹೋರಾಟಕ್ಕಾಗಿ ನಾವು ಬ್ಲಾಸ್ಟ್ ಮಾಡಬೇಕು’ (ತುಳು ರಾಜ್ಯಗಾದ್ ನಮ ಒಂಜಿ ಬ್ಲಾಸ್ಟ್ ಮಲ್ಪೊಡು ) ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದ್ದಾರೆ ಎನ್ನಲಾದ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್‌ಗಳಿಗೆ ಬೆಂಕಿ ಹಚ್ಚಬೇಕು. ಆಗ ಸರ್ಕಾರ ನಮ್ಮನ್ನು ಸಂಧಾನಕ್ಕೆ ಕರೆಸುತ್ತದೆ. ಅಲ್ಲಿ, ತುಳುವನ್ನು ಅಧಿಕೃತ […]