ನಟಿ, ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್
ಚೆನ್ನೈ: ಪ್ರತಿಭಟನೆಯೊಂದರಲ್ಲಿ ಭಾಗವಹಿಸಲು ತೆರಳಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ಮಂಗಳವಾರ ತಮಿಳುನಾಡಿನ ಮುಟ್ಟುಕಾಡುದಲ್ಲಿ ಪೊಲೀಸರು ಬಂಧಿಸಿದರು. ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ಅವರು ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ಬಗ್ಗೆ ಆಡಿದ್ದರು ಎನ್ನಲಾದ ಮಾತುಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಳ್ಳಲು ಖುಷ್ಬೂ ಅವರು ಚಿದಂಬರಂಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅವರನ್ನು ಬಂಧಿಸಲಾಗಿದೆ. ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸೋಮವಾರ ಅನುಮತಿ ನಿರಾಕರಿಸಿದ್ದರು. ಖುಷ್ಬೂ ಅವರ ಬಂಧನದ ಬೆನ್ನಲ್ಲೇ ರಾಜ್ಯ […]
ಸಂಗೀತ ಪ್ರಿಯ ಉಡುಪಿ ಶ್ರೀಕೃಷ್ಣನ ಕತೆ ಹೇಳಿದ್ದಾರೆ ಪಿ.ಲಾತವ್ಯ ಆಚಾರ್ಯ
»ಪಿ.ಲಾತವ್ಯ ಆಚಾರ್ಯ ಉಡುಪಿ. 15ನೇ ಶತಮಾನದಲ್ಲಿ ದಾಸಸಾಹಿತ್ಯದ ಕ್ರಾಂತಿಗೆ ಶ್ರೀಕೃಷ್ಣನ ಉಡುಪಿ ಕ್ಷೇತ್ರವೇ ತವರೂರಾಯಿತು ಶ್ರೀವ್ಯಾಸರಾಜರು, ಶ್ರೀವಾದಿರಾಜರು. ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯೀಂದ್ರರ ನೇತೃತ್ವದಲ್ಲಿ ನೂರಾರು ಕೃತಿಗಳು ಉಡುಪಿಯಲ್ಲಿ ಅನಾವರಣಗೊಂಡಿತು. ಉಡುಪಿ ಶ್ರೀಕೃಷ್ಣ ನ ಕುರಿತಾಗಿಯೇ ಅಸಂಖ್ಯ ಗದ್ಯ ಪದ್ಯಗಳು ರಚಿತವಾಯಿತು. ತಂಬೂರಿ ಮೀಟಿ,ಗೆಜ್ಜೆ ಕಟ್ಟಿ, ಶುದ್ಧಭಕ್ತಿ,ಮುಗ್ಧ ಹೃದಯದಿಂದ ಭಜಿಸಿ ನಲಿದ ಸಂತರಿಗೆ ಉಡುಪಿಯು ಸಾಕ್ಷಾತ್ಕಾರದ ನೆಲೆಯಾಯಿತು. ಕನಕದಾಸರ ಅಂತರಾಳದ ಕೂಗಿಗೆ ಕಡೆಗೋಲಕೃಷ್ಣ ದರುಶನವನ್ನು ಕರುಣಿಸಿದ. ದಾಸಸಾಹಿತ್ಯದ ಸ್ವಣ೯ಯುಗವೆಂದೇ ಬಿಂಬಿತವಾದ ಈ ಪವ೯ಕಾಲದಲ್ಲಿ ಸಮಸ್ತ ಉಡುಪಿಯು ಸಂಗೀತಮಯವಾಯಿತು. ಹೌದು […]