ಮಣಿಪಾಲ: ಇಂದಿನಿಂದ ‘ಕೆನರಾ ಕಾರ್ ಉತ್ಸವ’; ಗ್ರಾಹಕರಿಗೆ ಸ್ಥಳದಲ್ಲೇ ಕಾರು ಸಾಲ ಸೌಲಭ್ಯ

ಮಣಿಪಾಲ: ಕೆನರಾ ಬ್ಯಾಂಕ್ (ಸಿಂಡಿಕೇಟ್ ಬ್ಯಾಂಕ್) ಆಶ್ರಯದಲ್ಲಿ ‘ಕೆನರಾ ಕಾರ್ ಉತ್ಸವ’ ಗ್ರಾಹಕರಿಗೆ ಸ್ಥಳದಲ್ಲೇ ಕಾರು ಸಾಲ ಸೌಲಭ್ಯ ಒದಗಿಸುವ ವಿಶೇಷ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ (ಅ.21 ಮತ್ತು ಅ. 22) ಸಿಂಡಿಕೇಟ್ ಬ್ಯಾಂಕ್ ನ ಮಣಿಪಾಲ ಕಚೇರಿಯ ಬಳಿ ಆಯೋಜಿಸಲಾಗಿದೆ. ಕಾರು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಶೇ. 7.30 ಕನಿಷ್ಠ ಬಡ್ಡಿದರದಲ್ಲಿ ಸಾಲವನ್ನು ಒದಗಿಸುತ್ತಿದೆ. ಪ್ರತಿ ಲಕ್ಷಕ್ಕೆ 1524 ರೂ. (84 ತಿಂಗಳು) ತಿಂಗಳ ಇಎಂಐ ಪಾವತಿಸುವ ಅವಕಾಶ ನೀಡುತ್ತಿದೆ. ಅಲ್ಲದೆ, […]

ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ತೊರಕೆ ಮೀನು

ಉಡುಪಿ: ಆಳಸಮುದ್ರದ ಮೀನುಗಾರಿಕೆಗೆ ತೆರಳಿದ ಮೀನುಗಾರರ ಬಲೆಗೆ ಭಾರೀ ಗಾತ್ರದ ತೊರಕೆ ಮೀನೊಂದು ಸಿಕ್ಕಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಮಲ್ಪೆಯ ಸುಭಾಸ್ ಸಾಲಿಯಾನ್ ಮಾಲೀಕತ್ವದ ಬೋಟ್ ನ ಮೀನುಗಾರರ ಬಲೆಗೆ ಈ ಮೀನು ಬಿದ್ದಿದ್ದು, ಈ ತೊರಕೆ ಮೀನು ಸುಮಾರು 750 ಕೆ.ಜಿ. ತೂಕ ಇದೆ ಎಂದು ಅಂದಾಜಿಸಲಾಗಿದೆ. ಈ ಮೀನನ್ನು ಬೋಟ್ ನಿಂದ ಕ್ರೇನ್ ಮೂಲಕ ಇಳಿಸಲಾಯಿತು. ಈ ಮೀನನ್ನು ನೋಡಲು ಬಂದರಿನಲ್ಲಿ ಭಾರೀ ಜನರು ಸೇರಿದ್ದರು.

ಪದ್ಮಾಸಿನಿ ಉದ್ಯಾವರ ಅವರಿಗೆ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್

ಉಡುಪಿ: ಉಡುಪಿ ತಾಲ್ಲೂಕಿನ ಪದ್ಮಾಸಿನಿ ಉದ್ಯಾವರ ಅವರು ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜಾನಪದ ವಿಭಾಗದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಅ. 19ರಂದು ನಡೆದ ಮೈಸೂರು ವಿಶ್ವವಿದ್ಯಾಲಯದ 100ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಪದ್ಮಾಸಿನಿ ಅವರಿಗೆ ವಿವಿಯು ಚಿನ್ನದ ಪದಕಗಳನ್ನು ಪ್ರದಾನ ಮಾಡಿದೆ. ಇವರು ಪ್ರಸ್ತುತ ಶಿರ್ವ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ ವಿಧಿವಶ

ಮಂಗಳೂರು: ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ(75) ಮಂಗಳವಾರ ತಡರಾತ್ರಿ ನಿಧನ ಹೊಂದಿದರು. ಮೂಲತಃ ಮೂಲ್ಕಿಯವರಾದ ಜಯ ಸಿ. ಸುವರ್ಣ ಅವರು ಮುಂಬೈನಲ್ಲಿ ಹೋಟೆಲ್ ಉದ್ಯಮದ ಮೂಲಕ‌ ಬದುಕು ಕಟ್ಟಿಕೊಂಡರು. ಬಳಿಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಮುಂಬೈ ಸಹಿತ ವಿವಿಧ ಕಡೆ ಬಿಲ್ಲವರ ಯೂನಿಯನ್ ಸ್ಥಾಪಿಸಿ, ಬಿಲ್ಲವರ ಏಳಿಗೆಗೆ ಶ್ರಮಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಆಗಿದ್ದಾರೆ. ಸುವರ್ಣರು ಪತ್ನಿ, […]