udupixpress
Home Trending ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ತೊರಕೆ ಮೀನು

ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ತೊರಕೆ ಮೀನು

ಉಡುಪಿ: ಆಳಸಮುದ್ರದ ಮೀನುಗಾರಿಕೆಗೆ ತೆರಳಿದ ಮೀನುಗಾರರ ಬಲೆಗೆ ಭಾರೀ ಗಾತ್ರದ ತೊರಕೆ ಮೀನೊಂದು ಸಿಕ್ಕಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಮಲ್ಪೆಯ ಸುಭಾಸ್ ಸಾಲಿಯಾನ್ ಮಾಲೀಕತ್ವದ ಬೋಟ್ ನ ಮೀನುಗಾರರ ಬಲೆಗೆ ಈ ಮೀನು ಬಿದ್ದಿದ್ದು, ಈ ತೊರಕೆ ಮೀನು ಸುಮಾರು 750 ಕೆ.ಜಿ. ತೂಕ ಇದೆ ಎಂದು ಅಂದಾಜಿಸಲಾಗಿದೆ. ಈ ಮೀನನ್ನು ಬೋಟ್ ನಿಂದ ಕ್ರೇನ್ ಮೂಲಕ ಇಳಿಸಲಾಯಿತು. ಈ ಮೀನನ್ನು ನೋಡಲು ಬಂದರಿನಲ್ಲಿ ಭಾರೀ ಜನರು ಸೇರಿದ್ದರು.

error: Content is protected !!