‘800’ ಚಿತ್ರದಿಂದ ದಯವಿಟ್ಟು ಹೊರಬನ್ನಿ: ನಟ ವಿಜಯ್ ಸೇತುಪತಿಗೆ ಮುರಳಿಧರನ್ ಮನವಿ
ಚೆನ್ನೈ: ಕ್ರಿಕೆಟ್ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಅವರ ಜೀವನಾಧಾರಿತ 800 ಚಿತ್ರ ನಿರ್ಮಾಣ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಚಿತ್ರದಲ್ಲಿ ಮುರಳಿಧರನ್ ಪಾತ್ರದಲ್ಲಿ ನಟಿಸಬೇಕಿದ್ದ ನಟ ವಿಜಯ್ ಸೇತುಪತಿ ಅವರನ್ನು ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳಿಧರನ್ ಮನವಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಯೋಪಿಕ್ 800 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ವಿಜಯ್ ಸೇತುಪತಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳಿಧರನ್ ಅವರು ವಿಜಯ್ ಸೇತುಪತಿಗೆ […]
ಬೈಕ್ ಸವಾರರಿಗೆ ಶಾಕಿಂಗ್ ಸುದ್ದಿ: ಹೆಲ್ಮೆಟ್ ಧರಿಸದಿದ್ದರೆ ದಂಡದ ಜತೆ 3 ತಿಂಗಳು ಲೈಸನ್ಸ್ ಅಮಾನತು
ಬೆಂಗಳೂರು: ಸಾರಿಗೆ ಇಲಾಖೆ ಹೊಸ ನಿಯಮ ಜಾರಿಗೊಳಿಸಿದ್ದು, ಅದರಂತೆ ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ ದಂಡದ ಜತೆಗೆ 3 ತಿಂಗಳು ಲೈಸನ್ಸ್ ಅಮಾನತುಗೊಳ್ಳಲಿದೆ. ಹಿಂಬದಿ ಸವಾರರಿಗೂ ಹೆಲ್ಮೇಟ್ ಕಡ್ಡಾಯಗೊಳಿಸಿದ್ದು, ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯ ಹೆಲ್ಮೇಟ್ ಧರಿಸಬೇಕು. ದ್ವಿಚಕ್ರ ವಾಹನ ಚಾಲಕರು ಹೆಚ್ಚು ಅಪಘಾತಕ್ಕೀಡಾಗುತ್ತಿರೋ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಠಿಣ ನಿಮಯ ಜಾರಿಗೊಳಿಸಿದೆ. ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರ ವಿರುದ್ಧ ವಾಹನಗಳ ಕಾಯ್ದೆ 1988 ಕಲಂ 194-ಟಿ ಅನ್ವಯ ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ […]
ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡ್: ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯರು ಮಾಡೋ ಬ್ಯಾಟ್ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚು
ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡಿದೆ.ದೀರ್ಘ ಬಾಳಿಕೆ ಬರುವ ಇವರು ತಯಾರಿಸೋ ಬ್ಯಾಟ್ ಗಾಗಿ ಹುಡುಕಿಕೊಂಡು ಬರುವ ಕ್ರಿಕೆಟ್ ಪ್ರೇಮಿಗಳಿದ್ದಾರೆ, ಹೌದು. ಕ್ರಿಕೆಟ್ ಬ್ಯಾಟ್ ತಯಾರಿಕೆ ಮಾಡುವ ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯ ತುಳುನಾಡಿನ ಜನರ ಮನಗೆದ್ದಿದ್ದಾರೆ ಕಳೆದ ಹತ್ತೊಂಬತ್ತು ವರ್ಷಗಳ ಬ್ಯಾಟ್ ಸೇರಿದಂತೆ ಮರದ ಕೆಲಸಗಳಲಕ್ಲಿ ತೊಡಗಿರುವ ಇವರು ಬ್ಯಾಟ್ ತಯಾರಿಸುವಲ್ಲಿ ಸಿದ್ಧಹಸ್ತರು. ಇವರು ತಯಾರಿಸುವ ಬ್ಯಾಟ್ ಗಳಿಗೆ ಪುತ್ತೂರು ಮಂಗಳೂರು ಉಡುಪಿ ಬೆಳ್ತಂಗಡಿ ದಾವಣಗೆರೆಯಾದ್ಯಂತ ಭಾರಿ ಬೇಡಿಕೆ, ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಅನುಗುಣವಾಗಿ […]
ವೈಟ್–ವೆಸ್ಟಿಂಗ್ಹೌಸ್ ವಾಷಿಂಗ್ ಮೆಷಿನ್ಗಳ ಮೇಲೆ ಭಾರಿ ರಿಯಾಯಿತಿ: ಆರಂಭಿಕ ಬೆಲೆ ರೂ. 7,299
ನವದೆಹಲಿ: ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ವಿಶೇಷ ಮಾರಾಟ ಹಿನ್ನೆಲೆಯಲ್ಲಿ ಅಮೆರಿಕದ ವೈಟ್–ವೆಸ್ಟಿಂಗ್ಹೌಸ್ ಬ್ರ್ಯಾಂಡ್ನ ಸೆಮಿ ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಈ ಬ್ಯಾಂಡ್ನ 7ಕೆ.ಜಿ ವಾಷಿಂಗ್ ಮೆಷಿನ್ಗೆ ₹7,299 ನಿಗದಿಯಾಗಿದೆ. 8ಕೆ.ಜಿ. ಸಾಮರ್ಥ್ಯದ ಮೆಷಿನ್ಗೆ ₹8,799 ಹಾಗೂ 9ಕೆ.ಜಿ. ಸಾಮರ್ಥ್ಯದ ಸೆಮಿ ಆಟೊಮ್ಯಾಟಿಕ್ ಮೆಷಿನ್ಗೆ ₹9,799 ಇದೆ. ಅಮೆಜಾನ್ನಲ್ಲಿ ಎಚ್ಡಿಎಫ್ಸಿ ಕಾರ್ಡ್ ಬಳಸಿ ಖರೀದಿ ನಡೆಸುವವರಿಗೆ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ಸಿಗುತ್ತಿದೆ.
ನ.1ರಿಂದ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ: ಜಿಪಂ ಅಧ್ಯಕ್ಷ ದಿನಕರ ಬಾಬು
ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ನವೆಂಬರ್ 1 ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತಂತೆ ಎಲ್ಲಾ ಪಿಡಿಓಗಳು ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ಲಾಸ್ಟಿಕ್ ನಿಷೇಧ ಕಾಯಿದೆ 2016 ರಲ್ಲಿ ಜಾರಿಯಾಗಿದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಆದೇಶ ಪಾಲನೆ ನಡೆಯುತ್ತಿಲ್ಲ. ಅಂಗಡಿಗಳಲ್ಲಿ, […]