ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ವ್ಯಾಪಕ ಪ್ರಚಾರ ಅಗತ್ಯ: ಜಾವೇದ್ ಅಖ್ತರ್
ಉಡುಪಿ: ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ವಾರ್ತಾ ಇಲಾಖೆಯ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದರು. ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿರುವ ನಿಯಮಾವಳಿಗಳ ಅರಿವು ಮೂಡಿಸುವ ಕಾರ್ಯ ತಳಮಟ್ಟದಿಂದ ಆಗಬೇಕಿದೆ ಎಂದರು. ಮಾಧ್ಯಮಗಳು […]
ಉಡುಪಿ: ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ; ಮೀಸಲಾತಿ ಪ್ರಕಟ
ಉಡುಪಿ: ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಈ ಕೆಳಕಂಡಂತೆ ಮೀಸಲಾತಿ ನಿಗದಿಪಡಿಸಲಾಗಿದೆ. ಉಡುಪಿ ನಗರಸಭೆ: ಉಡುಪಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ). ಕುಂದಾಪುರ ಪುರಸಭೆ: ಕುಂದಾಪುರ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಅಭ್ಯರ್ಥಿ. ಕಾಪು ಪುರಸಭೆ: ಕಾಪು ಪುರಸಭೆಯ ಅಧ್ಯಕ್ಷ […]
ಪೆರ್ಡೂರು: ಯುವತಿ ನಾಪತ್ತೆ
ಹಿರಿಯಡಕ: ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಮಂಜುಳಾ (21) ಎಂಬ ಯುವತಿ ಸೆಪ್ಟಂಬರ್ 29 ರಿಂದ ಕಾಣೆಯಾಗಿದ್ದಾಳೆ. 5 ಅಡಿ 2 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಮಿಶ್ರ ಕೃಷಿಯಲ್ಲಿ ಬಂಗಾರದಂತಹ ಬೆಳೆ ಪಡೆದ ಹಿರ್ಗಾನದ ಕೃಷಿಕ ದಿನೇಶ್ ಕುಮಾರ್ ಕತೆ ಇದು !
ಕೃಷಿ ಕ್ಷೇತ್ರ ಕೃಷಿಕರಿಗೆ ವಿಪುಲ ಅವಕಾಶಗಳನ್ನು ತೆರೆದಿಡುತ್ತದೆ. ನಿತ್ಯ ಶ್ರಮ ವಹಿಸುವ ಶ್ರಮಿಕ ರೈತರಿಗೆ ಕೃಷಿಯೆ ಜೀವಾಳ. ಇಲ್ಲೊಂದು ಕೃಷಿಕರೊಬ್ಬರ ಸಾಧನೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇವರ ಹೆಸರು ದಿನೇಶ್ ಕುಮಾರ್ ಪೆರ್ನೆಬೆಟ್ಟು. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕ್ರಿಯಾಶೀಲ ಕೃಷಿಕರಿವರು. ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಉತ್ತಮ ಫಸಲನ್ನು ಪಡೆಯುತ್ತಿರುವ ಕೃಷಿಕ ದಿನೇಶ್ ಕುಮಾರ್ ಅವರ ಕತೆ ಇಲ್ಲಿದೆ. ದಿನೇಶ್ ಕುಮಾರ್ ತಮ್ಮ ತೋಟದ ಬದಿಗಳಲ್ಲಿ 75 ತೆಂಗಿನ ಮರಗಳಿದ್ದು ವಾರ್ಷಿಕವಾಗಿ ಎರಡು […]
ಹತ್ರಾಸ್ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪ: ರಾಹುಲ್ ಗಾಂಧಿ ಆಪ್ತನ ಬಂಧನ
ಲಕ್ನೋ: ಮಧ್ಯಪ್ರದೇಶದ ಹತ್ರಾಸ್ ನಲ್ಲಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಕಾಂಗ್ರೆಸ್ ನಾಯಕ ಶ್ಯೋರಾಜ್ ಜೀವನ್ ರನ್ನು ಬಂಧಿಸಿದ್ದಾರೆ. ಈತನನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಎಂದು ಹೇಳಲಾಗುತ್ತಿದೆ. ಗಲಭೆಗೆ ಸಂಬಂಧಿಸಿ ಉತ್ತರ ಪ್ರದೇಶದ ಪೊಲೀಸರು ಶ್ಯೋರಾಜ್ ಜೀವನ್ಗೆ ನೋಟಿಸ್ ನೀಡಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದರು. ಸುದೀರ್ಘ ವಿಚಾರಣೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಶ್ಯೋರಾಜ್ ಜೀವನ್ ವಿರುದ್ಧ ಹತ್ರಾಸ್ ಘಟನೆ ಬಳಿಕ ಗಲಾಟೆಗೆ ಪ್ರಚೋದನೆ ನೀಡಿದ್ದಾರೆ […]