ಪೆರ್ಡೂರು: ಯುವತಿ ನಾಪತ್ತೆ

ಹಿರಿಯಡಕ: ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಮಂಜುಳಾ (21) ಎಂಬ ಯುವತಿ ಸೆಪ್ಟಂಬರ್ 29 ರಿಂದ ಕಾಣೆಯಾಗಿದ್ದಾಳೆ.

5 ಅಡಿ 2 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.