ಯುವತಿ ಮೇಲೆ ಡೆಲಿವೆರಿ ಬಾಯ್ಸ್ ಗಳಿಂದ ಸಾಮೂಹಿಕ ಅತ್ಯಾಚಾರ
ಚಂಡೀಗಢ: ನಾಲ್ವರು ಡೆಲಿವೆರಿ ಬಾಯ್ಸ್ 25 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರಗಾಂವ್ನಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ನಾಲ್ವರು ಡೆಲಿವರಿ ಬಾಯ್ಸ್ ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಯುವತಿಯನ್ನು ರಿಯಲ್ ಎಸ್ಟೇಟ್ ಕಚೇರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಪೈಕಿ ಒಬ್ಬ ಆರೋಪಿ ಆಕೆಯನ್ನು ತಾನು ಕೆಲಸ ಮಾಡುವ ಜಾಗಕ್ಕೆ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಬಂದಿದ್ದು, ಆ ಜಾಗದಲ್ಲಿ ಅದಾಗಲೇ ಮೂರು ಹುಡುಗರನ್ನು ನೋಡಿ ಆಕೆ […]
ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿ ಅಂತ್ಯ: ₹57 ಲಕ್ಷ ನಗದು, ಹಲವು ದಾಖಲೆ ವಶ
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆಯ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಬೆಳಿಗ್ಗೆ ಆರಂಭಿಸಿದ್ದ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಈ ವೇಳೆ ₹57 ಲಕ್ಷ ನಗದು ಮತ್ತು ಹಲವು ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸದಾಶಿವನಗರದ ಡಿಕೆಶಿ ಮನೆ ಸಹಿತ ಕರ್ನಾಟಕದ ಒಂಭತ್ತು, ದೆಹಲಿಯ ನಾಲ್ಕು ಮತ್ತು ಮುಂಬೈನ ಒಂದು ಸ್ಥಳ ಒಳಗೊಂಡಂತೆ ಸಿಬಿಐ ಅಧಿಕಾರಿಗಳು ಇಂದು ಡಿಕೆಶಿಗೆ ಸಂಬಂಧಿಸಿದಂತೆ […]
ಡಿಕೆ ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿಗೂ ಬೈ ಎಲೆಕ್ಷನ್ ಗೂ ಸಂಬಂಧವಿಲ್ಲ: ಅಶ್ವಥನಾರಾಯಣ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಗೂ ಉಪ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ಪ್ರೇರಿತ ದಾಳಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ಈಗಾಗಲೇ ದಾಳಿ ನಡೆಸಿದೆ. ಇದು ಅದರ ಮುಂದುವರಿದ ಭಾಗ ಆಗಿರಬಹುದು. ಆದ್ದರಿಂದ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಅಗತ್ಯವಿಲ್ಲ ಎಂದರು. ಇಂಥ ಸೂಕ್ಷ್ಮ ವಿಚಾರದಲ್ಲಿ […]
ಕುತಂತ್ರ, ಬೆದರಿಕೆಗಳಿಗೆ ಹೆದರುವ ಮಗನೇ ಅಲ್ಲ: ಡಿಕೆ ಶಿವಕುಮಾರ್
ಬೆಂಗಳೂರು: “ರಾಜಕೀಯ ಕುತಂತ್ರಕ್ಕೆ ಈ ಡಿ.ಕೆ. ಶಿವಕುಮಾರ್ ಹೆದರುವ ಮಗನೇ ಅಲ್ಲ. ಯಾವುದೇ ಒತ್ತಡಕ್ಕೆ ಹೆದರುವ ಮಗ ಅಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಇಂದು ಸಿಬಿಐ ತನಿಖೆ ಅಂತ್ಯಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಐಟಿ ಪ್ರಕರಣ ದಾಖಲಿಸಿತು. 2019ರಲ್ಲಿ ಇಡಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ಇದೀಗ 2020ರಲ್ಲಿ ಮತ್ತೆ ಸಿಬಿಐ […]
ಕಾರ್ಕಳ: ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಯ ಚಿನ್ನದ ಸರ ಸುಲಿಗೆ
ಕಾರ್ಕಳ: ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚೈನ್ ಅನ್ನು ಕಸಿದುಕೊಂಡು ಪರಾರಿಯಾದ ಘಟನೆ ಕಾರ್ಕಳ ಎರ್ಲಪಾಡಿ ಗ್ರಾಮದ ಬುಕ್ಕಿಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಬುಕ್ಕಿಗುಡ್ಡೆ ನಿವಾಸಿ ಕಮಲಾ (75) ಚೈನ್ ಕಳೆದುಕೊಂಡವರು. ಇವರು ಶಿವನೆಟ್ಟು ಮಣ್ಣು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಸುಲಿಗೆಕೋರರು ಕುತ್ತಿಗೆಯಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಸುಲಿಗೆಕೋರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.