ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ, ಆತ್ಮಹತ್ಯೆ: ಡಾ. ಸುಧೀರ್ ಗುಪ್ತಾ
ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಕೊಲೆಯಲ್ಲ, ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ವಿಷ ನೀಡಿ ಅಥವಾ ಕತ್ತು ಹಿಸುಕಿ ಕೊಲೆ ನಡೆದಿಲ್ಲ ಎಂದು ಏಮ್ಸ್ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ತಿಳಿಸಿದರು. ಆರು ಸದಸ್ಯರ ವಿಧಿವಿಜ್ಞಾನ ವೈದ್ಯರಿರುವ ತಂಡವು ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಅಲ್ಲದೆ, ಈ ಮಾಹಿತಿಯನ್ನು ಏಮ್ಸ್ನ ವೈದ್ಯಕೀಯ ತಂಡವು ಸಿಬಿಐಗೆ ಇರಿಸಿದೆ. ಇದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ನಮ್ಮ ಅಂತಿಮ ವರದಿಯನ್ನು […]
ಚಿತ್ರ ಸಾಹಿತಿ ಕೆ. ಕಲ್ಯಾಣ್ ಪತ್ನಿಯ ಅಪಹರಣ: ದೂರು ದಾಖಲು
ಬೆಳಗಾವಿ: ಅಡುಗೆ ಕೆಲಸದ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಂದಿಗೆ ಸೇರಿಕೊಂಡು ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿರುವ ಘಟನೆ ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಆರೋಪಿ ಗಂಗಾ ಕುಲಕರ್ಣಿ (ಅಡುಗೆ ಕೆಲಸದಾಳು) ಬೀಳಗಿಯ ಶಿವಾನಂದ ಬಸವರಾಜ ವಾಲಿ ಜೊತೆ ಸೇರಿಕೊಂಡು ಪತ್ನಿ ಅಶ್ವಿನಿ, ಅತ್ತೆ ರಾಧಿಕಾ ಸಾತ್ವಿಕ್ ಹಾಗೂ ಮಾವ ಕೃಷ್ಣ ಸಾತ್ವಿಕ್ ಅವರನ್ನು ಪುಸಲಾಯಿಸಿ ಮೋಸ ಮಾಡಿದ್ದಾರೆ. ಮೂವರ ಬ್ಯಾಂಕ್ ಖಾತೆಯಿಂದ […]
ಇಂದು ರಾಹುಲ್ಗಾಂಧಿ ನೇತೃತ್ವದಲ್ಲಿ ಉ.ಪ.ಸಂತ್ರಸ್ತೆಯ ಕುಟುಂಬದ ಭೇಟಿ
ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ಅಪ್ರಾಪ್ತ ಯುವತಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.ಉತ್ತರ ಪ್ರದೇಶದ ಸಿಎಂ ಯೋಗಿ ವಿರುದ್ದವೂ ಜನಾಕ್ರೋಶ ವ್ಯಕ್ತವಾಗಿದೆ.ಇಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಲಿದೆ. ಪಕ್ಷದ ಸಂಸದರೊಂದಿಗೆ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಹತ್ರಾಸ್ ಗೆ ಭೇಟಿ ನೀಡಲಿದ್ದು, ಬರ್ಬರ ರೀತಿಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿರುವ 19 ವರ್ಷದ ಹೆಣ್ಣುಮಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಾಗಿ ಕಾಂಗ್ರೆಸ್ […]