ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಿಗೆ ಹೊಸ ಮಾರ್ಗಸೂಚಿ: ನಾಳೆಯಿಂದ (ಅ.1) ಜಾರಿ
ನವದೆಹಲಿ: ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ ಪೇಮೆಂಟ್ ಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವುದಕ್ಕಾಗಿ ಆರ್ ಬಿಐ ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಅ.1 ರಿಂದ ಇವುಗಳು ಜಾರಿಗೆ ಬರಲಿವೆ. ಗ್ರಾಹಕರೇ ಕೇಳದ ಹೊರತು ಕಾರ್ಡ್ ಗಳಿಗೆ ಅಂತಾರಾಷ್ಟ್ರೀಯ ಸೌಲಭ್ಯವನ್ನು ಕಲ್ಪಿಸುವಂತಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರಿಗೆ ತಮಗೆ ಯಾವೆಲ್ಲಾ ಸೇವೆಗಳು ಬೇಕು-ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಅವಕಾಶ […]
ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸತ್ಯಕ್ಕೆ ಸಂದ ಜಯ: ಯಶ್ ಪಾಲ್ ಸುವರ್ಣ
ಉಡುಪಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಇಂದು ನೀಡಿದ ತೀರ್ಪು ಸತ್ಯಕ್ಕೆ ಸಂದ ಜಯ. ಶ್ರೀ ರಾಮನ ಧ್ಯೇಯವಾಖ್ಯಕ್ಕೆ ಪೂರಕವಾಗಿ ಬಂದಿರುವ ತೀರ್ಪು ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ. ಸತ್ಯ ಎಂದಿಗೂ ಸತ್ಯವೇ, ಈಗ ಈ ತೀರ್ಪು ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ. ನಮ್ಮ ಹಿರಿಯ ಮುತ್ಸದ್ಧಿ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮುಂತಾದವರನ್ನು ಈ […]
ಅತ್ಯಾಚಾರಕ್ಕೊಳಗಾದ ಯುವತಿ ಸಾವು: ಪೊಲೀಸರಿಂದ ರಾತ್ರೋರಾತ್ರಿ ಶವ ಸಂಸ್ಕಾರ
ನವದೆಹಲಿ: ಕಳೆದ 15 ದಿನಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದೆಹಲಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರು ಮನೆಯವರಿಗೂ ತಿಳಿಸದೆ ರಾತ್ರೋರಾತ್ರಿ ಮಾಡಿ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಯುವತಿಯ ಪೋಷಕರು, ಸಂಬಂಧಿಕರನ್ನು ಮನೆಯಲ್ಲಿಯೇ ಕೂಡಿಹಾಕಿದ್ದಾರೆ ಎನ್ನಲಾಗಿದೆ. ರಾತ್ರಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕುಟುಂಬವು ಪೊಲೀಸರೊಂದಿಗೆ ವಾದಿಸುತ್ತಿದ್ದು, ಯುವತಿಯ ಮೃತ ದೇಹವನ್ನು ಕೊಂಡೊಯ್ಯುವಾಗ ಮಹಿಳಾ ಸಂಬಂಧಿಕರನ್ನು ಪಕ್ಕಕ್ಕೆ ಸರಿಸಿದ ಪೊಲೀಸರು, ಅಂತಿಮ ದರ್ಶನಕ್ಕೂ ಅವಕಾಶ ನೀಡದೆ ನೇರವಾಗಿ ಶವಸಂಸ್ಕಾರಕ್ಕೆ ಕರೆದೊಯ್ಯುತ್ತಾರೆ. […]
ಸೆಲ್ಫಿ ಅವಾಂತರ: ಗಂಡನ ಕಣ್ಣೆದುರಲ್ಲೇ ನದಿಯಲ್ಲಿ ಕೊಚ್ಚಿಹೋದ ಪತ್ನಿ
ಭೋಪಾಲ್: ಅಣೆಕಟ್ಟಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ನದಿ ನೀರಿಗೆ ಬಿದ್ದು ಕೊಚ್ಚಿಹೋದ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಅಣೆಕಟ್ಟು ನೋಡಲು ವೈದ್ಯ ಉತ್ಕರ್ಷ ಮಿಶ್ರಾ ಹೆಂಡತಿಯೊಡನೆ ಬಂದಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾನು ನನ್ನ ಹೆಂಡತಿ ಡ್ಯಾಂ ನೋಡಲು ಬಂದಿದ್ದೇವು. ಈ ವೇಳೆ ಆಕೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಯಾವಾಗ ಆಕೆ ಆಯಾ ತಪ್ಪಿ ಬಿದ್ದಳು ಎಂಬುದು ತಿಳಿಯಲಿಲ್ಲ. ನನ್ನ ಕಣ್ಣ ಎದುರೇ ಆಕೆ ಬಿದ್ದು ನೀರಿನಲ್ಲಿ ಕೊಚ್ಚಿಹೋದಳು ಎಂದು ಪತಿ […]
ಮಣಿಪಾಲದಲ್ಲಿ ಅ.1 ರಂದು WELSPUN ಅತ್ಯಾಕರ್ಷಕ ಶೋರೂಂ ಶುಭಾರಂಭ
ಮಣಿಪಾಲ:ಬೆಡ್, ಬೆಡ್ ಶೀಟ್,ಬಾತಿಂಗ್ ಶೀಟ್ ಮೊದಲಾದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ WELSPUN ಸಂಸ್ಥೆಯ ಅತ್ಯಾಕರ್ಷಕ ಶೋರೂಂ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳೀಕಮ ಲಕ್ಷ್ಮಿಂದ್ರ ನಗರದ ಶಿರೂರ್ ಶ್ರೀ ಲಕ್ಷ್ಮೀ ಸಮಿಟ್ ನಲ್ಲಿ ಅ.1 ರಂದು ಶುಭಾರಂಭಗೊಳ್ಳಲಿದೆ. WELSPUN ನ ಈ ಶೋರೂಂ ನಲ್ಲಿ ಬೆಡ್ ಸಂಬಂಧಿ ಎಲ್ಲಾ ವಿದದ ಉತ್ಪನ್ನಗಳು ಲಭ್ಯವಿದೆ. ಮಾಹಿತಿಗಾಗಿ 8762448572 ಸಂಪರ್ಕಿಸಿ