ಉಡುಪಿ ಸಹಿತ 10 ಜಿಲ್ಲೆಗಳಲ್ಲಿ ಭಾರೀ ಮಳೆ: ಯೆಲ್ಲೊ ಅಲರ್ಟ್ ಘೋಷಣೆ

ಬೆಂಗಳೂರು: ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಸೆ.26 ಮತ್ತು 27ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ, ವಿಜಯಪುರ, ರಾಯಚೂರು, ಕಲಬುರ್ಗಿ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
ಕಂಬಳ ಕ್ಷೇತ್ರದ ಸಾಧಕ ಕುಕ್ಕುಂದೂರು ಶಂಕರಬೆಟ್ಟು ಶಂಕರ ಮಡಿವಾಳ್ ನಿಧನ

ಕಾರ್ಕಳ: ಕಂಬಳ ಕ್ಷೇತ್ರದ ಸಾಧಕ, ಕೋಣಗಳ ಯಜಮಾನ ಹಾಗೂ ಖ್ಯಾತ ಕಂಬಳ ಓಟಗಾರರಾಗಿದ್ದ ಕಾರ್ಕಳದ ಕುಕ್ಕುಂದೂರು ಶಂಕರಬೆಟ್ಟು ಶಂಕರ ಮಡಿವಾಳ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಕಂಬಳ ಕ್ಷೇತ್ರದಲ್ಲಿ ಒಂದೆರಡು ದಶಕಗಳ ಕಾಲ ಓಟಗಾರನಾಗಿ, ಅನಂತರ ಯಶಸ್ವೀ ಯಜಮಾನರಾಗಿ ಹಲವು ಬಹುಮಾನಗಳನ್ನು ಪಡೆದಿದ್ದರು. ಅಲ್ಲದೇ ಯಶಸ್ವೀ ಫ್ಲಾಗ್ ರೆಫ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2003-2004ರಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಇವರ ಕೋಣಗಳು 18 ಕಂಬಳದಲ್ಲಿ 17 ಬಹುಮಾನ ಪಡೆದು ಚ್ಯಾಂಪಿಯನ್ ಆಗಿ ಸಾಧನೆ ಮಾಡಿದ್ದರು. ನೇಗಿಲು ಹಿರಿಯ, […]
ಹಿರಿಯಡಕ: ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ; ಮನೋಜ್ ಕೋಡಿಕೆರೆ ತಂಡ ವಿರುದ್ಧ ದೂರು ದಾಖಲು

ಹಿರಿಯಡಕ: ಹಿರಿಯಡಕ ಪೇಟೆಯಲ್ಲಿ ಗುರುವಾರ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಕೋಡಿಕೆರೆ ತಂಡ ಮೇಲೆ ಪ್ರಕರಣ ದಾಖಲಾಗಿದೆ. ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ದ್ವೇಷದಲ್ಲಿ ಮನೋಜ್ ತಂಡ ಈ ಕೃತ್ಯ ಎಸಗಿದೆ ಎಂದು ದಿವ್ಯರಾಜ್ ಶೆಟ್ಟಿ ಹಿರಿಯಡ್ಕ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತಂಡ ತನಿಖೆ ಚುರುಕುಗೊಳಿಸಿದ್ದು, ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ ಮತ್ತೊಂದು […]