ಸೆ. 26ಕ್ಕೆ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನಾ ಸಮಾರಂಭ
ಕಟಪಾಡಿ: ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನಾ ಸಮಾರಂಭ ನಾಳೆ (ಸೆ. 26) ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಎಂಸಿಎಫ್ ಮಂಗಳೂರು ಹಾಗೂ ಕರ್ಣಾಟಕ ಬ್ಯಾಂಕ್ ನ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿರುವ ಕಾಂಕ್ರಿಟೀಕರಣದ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ಗೋಪಾಲಕೃಷ್ಣ ಬಿ. ಸಾಮಗ ಅವರು ನೆರವೇರಿಸುವರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ತಾಲ್ಲೂಕು ಪಂಚಾಯತ್ […]
ನೂರೊಂದು ನೆನಪು ಎದೆಯಾಳದಲ್ಲಿ ಬಿಟ್ಟು ಹೋದ್ರು ಎಸ್ ಪಿ ಬಾಲಸುಬ್ರಹ್ಮಣ್ಯ
ಚೆನ್ನೈ: ನೂರೊಂದು ನೆನಪುಗಳನ್ನು ಅಭಿಮಾನಿಗಳ ಎದೆಯಾಳದಲ್ಲಿ ಅಮರವಾಗಿಸಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ನಿದ್ದೆ ಜಾರಿದ್ದಾರೆ. ಗಾನ ಗಂಧರ್ವ ಎಂದೇ ಖ್ಯಾತರಾದ ಎಸ್ ಪಿ ಬಾಲಸುಬ್ರಮಣ್ಯಂ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಎಸ್ ಪಿಬಿ ಕಳೆದ ಆಗಸ್ಟ್ 5 ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. 74 ವರ್ಷದ ಬಾಲಸುಬ್ರಹ್ಮಣ್ಯಂ ಅವರು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. […]
ಉಡುಪಿ ಜಿಲ್ಲೆಯ ಜನರ ಬಾಯಲ್ಲಿ ಜನಜನಿತವಾಗ್ತಿದೆ ಜನನಿ ಎಂಟರ್ ಪ್ರೈಸಸ್ ನೀಡಿರೋ ಈ ಭರ್ಜರಿ ಆಫರ್: ಆಫರ್ ಏನ್ ಗೊತ್ತಾ?
ಉಡುಪಿ ಭಾಗದಲ್ಲಿ ಮೊನ್ನೆಯಷ್ಟೇ ಬಂದ ಪ್ರವಾಹಕ್ಕೆ ಅಂಗಡಿ-ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು,ಪೀಠೋಪಕರಣಗಳು ಹಾಳಾಗಿ ಜನ ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹೀಗಾಗಿರುವದನ್ನು ನೋಡಿ ನೊಂದುಕೊಂಡ ಕೆಲವರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರೆ, ಮತ್ತೆ ಕೆಲವರು ಆದದ್ದಾಗಲಿ ಅಂದುಕೊಂಡು ಸುಮ್ಮನೆ ಕೂತಿಲ್ಲ. ನೀರಿನಲ್ಲಿ ಚಂಡಿಯಾದ ಟಿ.ವಿ, ಇನ್ವರ್ಟರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀದಾ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ಗೆ ಕೊಟ್ಟು ಅಧಿಕ ಉಳಿತಾಯದಲ್ಲಿ ಹೊಸತಾದ ಟಿ.ವಿ, ಇನ್ವರ್ಟರ್ ಗಳನ್ನು ಪಡೆದು ಸಂತೃಪ್ತರಾಗಿದ್ದಾರೆ. ಮೊನ್ನೆಯ […]
ಎಸ್ಪಿ ಕಚೇರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತ ಬಾಲಕಿ
ಪಾಟ್ನಾ: ಅಪ್ರಾಪ್ತ ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬಿಹಾರ ಪಾಟ್ನಾದ ಕಿಶಾನ್ ಗಂಜ್ ಎಸ್ ಪಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದಿದೆ. ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಈಕೆಗೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಬಾಲಕಿ ನ್ಯಾಯ ಕೇಳಲು ಎಸ್ಪಿ ಕಚೇರಿಗೆ ಹೋದದಂತಹ ಸಂದರ್ಭದಲ್ಲಿ ಅಲ್ಲಿಯೇ ಆಕೆಗೆ ಹೆರಿಗೆ ಆಗಿದೆ ಎಂದು ತಿಳಿದುಬಂದಿದೆ. ಪಹಾದಕಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ನೆರೆಯ ಹಳ್ಳಿಯ ಮುನ್ನಾ ಕುಮಾರ್ ಎಂಬ ಯುವಕ, ಪ್ರೀತಿಯ ನೆಪದಲ್ಲಿ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಆಕೆ […]
ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಸಾಧ್ಯತೆ
ಬೆಂಗಳೂರು: ಇದೇ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 5,800 ಗ್ರಾಮ ಪಂಚಾಯತ್ ಗಳಿಗೆ ಈ ವರ್ಷ ಚುನಾವಣೆ ನಡೆಯಲಿದ್ದು, ಅಗತ್ಯವಿರುವ ಪೂರ್ವ ಸಿದ್ಧತೆ ಕೈಗೊಳ್ಳಲು ಚುನಾವಣಾ ಆಯೋಗ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದಿದೆ ಎನ್ನಲಾಗಿದೆ. ಚುನಾವಣಾ ಸಮದಲ್ಲಿ ಸೂಕ್ತ ಭದ್ರತೆ ಕೈಗೊಂಡು ಕಾನೂನು ಸುವ್ಯವಸ್ಥೆ ಪಾಲಿಸುವಂತೆ ಸೂಚಿಸಿದೆ. ಚುನಾವಣಾ ಖರ್ಚು ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. […]