ಮಾಜಿ ಸಚಿವ ವಿನಯಕುಮಾರ್ ಸೊರಕೆ ಕೆಪಿಸಿಸಿ ವಕ್ತಾರರಾಗಿ ನೇಮಕ
ಉಡುಪಿ: ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಿ ಜಿಲ್ಲೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಸಾಕಷ್ಟು ಅನುಭವವಿರುವ ಮಾಜಿ ಸಚಿವ ಸೊರಕೆಯವರಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವಿದೆ ಎನ್ನುವುದನ್ನು ಗಮನಿಸಿ ನಿಮ್ಮನ್ನು ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಲಾಗಿದೆ ಎಂದು ನೇಮಕ ಆದೇಶ ಪ್ರತಿಯಲ್ಲಿ ಡಿಕೆಶಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷದೊಳಗಿರುವ ಆಂತರಿಕ ಕಲಹದಿಂದಾಗಿ ಸದ್ಯ ಕಾಂಗ್ರೆಸ್ ಸಂಘಟನೆಯಲ್ಲಿ ದುರ್ಬಲವಾಗಿದೆ. ನಾಯಕರೊಳಗಿನ ಮುಸುಕಿನ ಗುದ್ದಾಟದಿಂದ ನಾಯಕರ ನಡುವೆ ಸಮನ್ವಯತೆ ಇಲ್ಲದಾಗಿದೆ. ಈ […]
ಡ್ರಗ್ಸ್ ದಂಧೆ: ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಎನ್ ಸಿಬಿಯಿಂದ ಸಮನ್ಸ್
ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆ ಹಾಜರಾಗುವಂತೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರೀಶ್ಮಾ ಜೊತೆ 2017ರ ಅಕ್ಟೋಬರ್‌ನಲ್ಲಿ ಡ್ರಗ್ಸ್‌ಗೆ ಸಂಬಂಧಿಸಿ ದೀಪಿಕಾ ಜೊತೆ ವಾಟ್ಸ್‌ಆ್ಯಪ್ ಸಂವಹನ ನಡೆಸಿದ್ದರು ಎನ್ನಲಾಗಿದೆ. ಇದರ ಆಧಾರದಲ್ಲಿ ಎನ್ ಸಿಬಿ ತಂಡ ನೋಟಿಸ್ ನೋಡಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ನಟಿ ರಕುಲ್ […]
ನನಗೆ ಗಾಂಜಾ ಬೇಡ, ಮಾಲ್ ಬೇಕೆಂದಿದ್ದ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಗಿರ್ಕಿ ಹೊಡೆಯುತ್ತಿದ್ದ ಡ್ರಗ್ಸ್ ದಂಧೆ ಪ್ರಕರಣ ಇದೀಗ ನಟಿ ದೀಪಿಕಾ ಪಡುಕೋಣೆಯ ಕೊರಳಿಗೂ ಸುತ್ತಿಕೊಂಡಿದೆ. ಬಾಲಿವುಡ್ ಗೆ ಅಂಟಿರುವ ಡ್ರಗ್ಸ್ ಜಾಲದ ಬಗ್ಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ತೀವ್ರಗೊಳಿಸಿದ್ದು, 2017ರಲ್ಲಿ ದೀಪಿಕಾ ಮಾಡಿರುವ ವಾಟ್ಸ್ಆ್ಯಪ್ ಸಂದೇಶ ವಿನಿಮಯ ಈಗ ಬಹಿರಂಗಗೊಂಡಿದೆ. ‘ಡಿ’ ಮತ್ತು ‘ಕೆ’ ಎಂಬ ಅಕ್ಷರದಲ್ಲಿ ಸಂದೇಶ ವಿನಿಮಯವಾಗಿದ್ದು, ‘ಡಿ’ ಎಂದರೆ ದೀಪಿಕಾ ಪಡುಕೋಣೆ ಮತ್ತು ‘ಕೆ’ ಎಂದರೆ ಕರೀಷ್ಮಾ ಪ್ರಕಾಶ್ ಎಂದು ಹೇಳಲಾಗಿದೆ. […]
ಬೈಂದೂರಿನ ಕಳಿಹಿತ್ಲು ಕಡಲ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ ಪತ್ತೆ: ಸ್ಥಳೀಯರಲ್ಲಿ ಆತಂಕ
ಬೈಂದೂರು: ಇಲ್ಲಿನ ಶಿರೂರು ಸಮೀಪದ ಕಳಿಹಿತ್ಲು ಕಡಲ ತೀರದಲ್ಲಿ ಇಂದು ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಡಲ ತೀರದಲ್ಲಿ ಕಂಡುಬಂದಿರುವ ವಸ್ತುವಿನ ಬಗ್ಗೆ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣ ಇದಾಗಿದ್ದು, ಇದು ಕ್ಷಿಪಣಿ ಮಾದರಿಯಲ್ಲಿ ಇರುವುದರಿಂದ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿತ್ತು. ಹಡಗಿನ ದಿಕ್ಕು ಸೂಚಕ.? ಈ ಉಪಕರಣ ಮೇಲ್ನೋಟಕ್ಕೆ ಹಡಗಿನ […]
ಅಖಿಲ ಭಾರತೀಯ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಗೊರೂರು ಘಟಕ ಉದ್ಘಾಟನೆ
ಉಡುಪಿ: ಕನ್ನಡ ಸಾಹಿತ್ಯ ಪರಂಪರೆ ಬಹಳ ವಿಶೇಷವಾದ, ವಿಶಿಷ್ಟವಾದ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಒಳಗೊಂಡಿದೆ. ಸಾಹಿತ್ಯ ಕ್ಷೇತ್ರದ ವಿಶೇಷ ಅಭಿರುಚಿಯನ್ನು ಮೈಗೂಡಿಸಿಕೊಂಡರೆ ಅದು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಬಲ್ಲ ಶಕ್ತಿಯನ್ನು ಹೊಂದಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಹಕಾರ್ಯದರ್ಶಿ ಕ.ವೆಂ. ನಾಗರಾಜು ಹೇಳಿದರು. ಗೊರೂರು ಅನಂತ್ರಾಜ್ ಅಭಾಸಾಪ ಹಾಸನ ಘಟಕದ ಆಶ್ರಯದಲ್ಲಿ ನಡೆದ ಗೊರೂರು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಅಭಾಕಸಾಪ ರಾಜ್ಯ ಸದಸ್ಯ ಗುರುರಾಜ್ ಕುಂದಾಪುರ, […]