ಡ್ರಗ್ಸ್ ದಂಧೆ: ನಟ ಯೋಗೀಶ್, ಮಾಜಿ ಕ್ರಿಕೆಟಿಗ ಅಯ್ಯಪ್ಪ ವಿಚಾರಣೆ
ಬೆಂಗಳೂರು: ಡ್ರಗ್ಸ್ ದಂಧೆಯ ಕರಾಳಮುಖವನ್ನು ಸಿಸಿಬಿ ಪೊಲೀಸರು ಬಯಲಿಗೆಳೆಯಲು ಹೊರಟಿರುವ ಬೆನ್ನಲ್ಲೇ, ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಪೊಲೀಸರು ಡ್ರಗ್ಸ್ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ. ಡ್ರಗ್ಸ್ ಪೆಡ್ಲರ್ ಗಳು ನೀಡುತ್ತಿರುವ ಹೇಳಿಕೆಯನ್ನು ಆಧಾರಿಸಿ ಐಎಸ್ ಡಿ ಅಧಿಕಾರಿಗಳು, ನಟ ಯೋಗಿ ಅಲಿಯಾಸ್ ಲೂಸ ಮಾದ, ಮಾಜಿ ಕ್ರಿಕೆಟಿಗ ಅಯ್ಯಪ್ಪ, ಖಾಸಗಿ ಸುದ್ದಿವಾಹಿನಿಯ ಉದ್ಯೋಗಿ ನಿಶ್ಚಿತಾ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ನಾಲ್ವರಿಗೂ ಇತ್ತೀಚೆಗೆ ನೋಟಿಸ್ ನೀಡಿದ್ದ ಐಎಸ್ಡಿ, ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಅದರನ್ವಯ ಶಾಂತಿನಗರದಲ್ಲಿರುವ ಐಎಸ್ಡಿ […]
ಸೆ. 27ಕ್ಕೆ ಮಣಿಪಾಲ ನರಸಿಂಗೆ ಶ್ರೀನರಸಿಂಹ ದೇವಸ್ಥಾನದ ವಾರ್ಷಿಕ ಮಹಾಸಭೆ
ಮಣಿಪಾಲ: ಇಲ್ಲಿನ ನರಸಿಂಗೆ ಶ್ರೀನರಸಿಂಹ ದೇವಸ್ಥಾನದ ವಾರ್ಷಿಕ ಮಹಾಸಭೆ ಸೆ. 27ರಂದು ಮಧ್ಯಾಹ್ನ 3ಗಂಟೆಗೆ ದೇವಳದ ಸಭಾಭವನದಲ್ಲಿ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಿರಣ್ ಕುಮಾರ್ ಉದ್ಯಾವರ
ಉಡುಪಿ: ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಉದ್ಯಾವರ ಅವರು ಇಂದು ಶಾಸಕ ಲಾಲಾಜಿ ಆರ್ ಮೆಂಡನ್ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕಿರಣ್ ಅವರು ಪ್ರಸ್ತುತ ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷನಾಗಿ ಸೇವೆ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ ಹಾಗೂ ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯರಾಗಿದ್ದರು. ಆದರೆ ದಿಢೀರ್ ಆಗಿ ಉಂಟಾದ ರಾಜಕೀಯ ಬೆಳವಣಿಗೆಯಿಂದ ಕಿರಣ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. […]
ಕುದುರೆಮುಖ ರಾ.ಹೆ 2 ದಿನ ವಾಹನ ಸಂಚಾರ ನಿಷೇಧ
ಉಡುಪಿ : ವಿಪರೀತ ಮಳೆ ಸುರಿಯುತ್ತಿರುವ ಕಾರಣ ಕಾರ್ಕಳ ತಾಲೂಕು ಮಾಳ ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169 ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣು ರಸ್ತೆಗೆ ಬೀಳುತ್ತಿದ್ದು, ಅಲ್ಲದೇ ರಸ್ತೆ ಸಮೀಪ ಇರುವ ಬೃಹತ್ ಗಾತ್ರದ ಮರಗಳು ರಸ್ತೆಗೆ ಬೀಳುತ್ತಿದ್ದು, ಈಗಾಗಲೇ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗಿದ್ದು, ವಿಪರೀತ ಮಳೆಯಿಂದಾಗಿ ತೆರವು ಕಾರ್ಯಾಚರಣೆ ಕಷ್ಟವಾಗುತ್ತಿದ್ದು, ವಾಹನ ಸಂಚಾರ ಮಾಡಿದ್ದಲ್ಲಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇದ್ದು, ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಳ ಕುದುರೆಮುಖ […]
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು-ಅರ್ಜಿ ಆಹ್ವಾನ
ಉಡುಪಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ / ಸುಣ್ಣ ಕಲ್ಲು ಮತ್ತು ಡಾಲೋಮೈಟ್ / ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು / ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಪದವಿ ಕೋರ್ಸ್ವರೆಗೆ, ವೃತ್ತಿಪರ ಹಾಗೂ ವೃತ್ತಿಪರ ರಹಿತ, ಐಟಿಐ ಕೋರ್ಸ್ಗಳಿಗೆ ನ್ಯಾಷನಲ್ ಸ್ಕಾಲರ್ ಷಿಪ್ ಪೋರ್ಟಲ್ https://scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು. […]