ಸೆಪ್ಟೆಂಬರ್ 28ರಿಂದ ಉಡುಪಿ ಶ್ರೀಕೃಷ್ಣಮಠ ಭಕ್ತರ ಪ್ರವೇಶಕ್ಕೆ ಮುಕ್ತ
ಉಡುಪಿ: ಸೆಪ್ಟೆಂಬರ್ 28ರಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ಭಕ್ತರಿಗೆ ಕೆಲ ನಿಬಂಧನೆಗಳೊಂದಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗುವುದು. ಪರ್ಯಾಯ ಅದಮಾರು ಮಠ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದ್ದಾರೆ. ಇಂದು ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಸೆ.21ರ ಬಳಿಕ ಕೇಂದ್ರ ಸರ್ಕಾರವು ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿರುವುದರಿಂದ ಕೆಲವೊಂದು ಷರತ್ತುಗಳೊಂದಿಗೆ ಶ್ರೀಕೃಷ್ಣಮಠದಲ್ಲಿ ಸೆ. 28ರಿಂದ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ […]
ಮಂಗಳೂರು ಮೂಲದ ಕನ್ನಡದ ಪ್ರಸಿದ್ಧ ನಿರೂಪಕಿ ಕಂ ನಟಿಗೆ ಡ್ರಗ್ಸ್ ನಂಟು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ
ಮಂಗಳೂರು: ಮಂಗಳೂರು ಮೂಲದ ಕನ್ನಡದ ಪ್ರಸಿದ್ಧ ನಿರೂಪಕಿ ಕಂ ನಟಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಳು ಎಂಬ ಸ್ಫೋಟಕ ಮಾಹಿತಿಯನ್ನು ಡ್ರಗ್ಸ್ ಪೆಡ್ಲರ್, ಡ್ರಾನ್ಸರ್ ಕಿಶೋರ್ ಶೆಟ್ಟಿ ಸಿಸಿಬಿ ವಿಚಾರಣೆಯಲ್ಲಿ ಬಹಿರಂಗಗೊಳಿಸಿದ್ದಾನೆ. ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಪೊಲೀಸರು ಆ ನಿರೂಪಕಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆಕೆಗೂ ಸದ್ಯದಲ್ಲೇ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿ ಹಾಗೂ ತನಗೆ ಇರುವ ನಂಟಿನ ಬಗ್ಗೆ ಪೊಲೀಸರ ಬಳಿ ಕಿಶೋರ್ ತಿಳಿಸಿದ್ದು, ಆಕೆ ಮಂಗಳೂರು ಮೂಲದ […]
ಡ್ರಗ್ಸ್ ದಂಧೆ: ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ಮಂಗಳೂರು: ಡ್ರಗ್ಸ್ ಸಾಗಾಟದ ಆರೋಪದಡಿ ಬಾಲಿವುಡ್ ನ ಎಬಿಸಿಡಿ ಸಿನಿಮಾದಲ್ಲಿ ಅಭಿನಯಿಸಿದ್ದ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಕೆಲ ಪಾರ್ಟಿಗಳಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಕೆಲ ನಟ, ನಟಿ, ಆ್ಯಂಕರ್ ಗಳಿಗೆ ಡ್ರಗ್ಸ್ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಿಶೋರ್ ನನ್ನು ವಿಚಾರಣೆ ನಡೆಸುತ್ತಿದ್ದು, ಕೆಲ ನಟಿಯರ ಹೆಸರು ಬಹಿರಂಗ ಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈತ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ […]
ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳದ ಶ್ರೀ ಲಕ್ಷ್ಮೀ ಪ್ರಮೋದ್ ನಾಯಕ್ ಆಯ್ಕೆ
ಕಾರ್ಕಳ: ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2019-20ನೇ ಸಾಲಿನ ಕೆಳದಿ ಚೆನ್ನಮ್ಮಪ್ರಶಸ್ತಿಗೆ ಕಾರ್ಕಳದ ಶ್ರೀಲಕ್ಷ್ಮೀ ಪ್ರಮೋದ್ ನಾಯಕ್ ಅವರು ಆಯ್ಕೆಯಾಗಿದ್ದಾರೆ. ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ನೀಡುವ ಈ ಪ್ರಶಸ್ತಿಯನ್ನು ಶ್ರೀಲಕ್ಷ್ಮೀ ‘ತಾರ್ಕಿಕ ಸಾಧನೆಗಳ’ ವಿಭಾಗದಲ್ಲಿ ಪಡೆದಿದ್ದಾಳೆ. ಪ್ರಶಸ್ತಿಯು 10 ಸಾವಿರ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಶ್ರೀಲಕ್ಷ್ಮೀ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿ. ಕಾರ್ಕಳದ ಉಪನ್ಯಾಸಕ ಪ್ರಮೋದ್ ನಾಯಕ್ ಹಾಗೂ ಜಯಶ್ರೀ ದಂಪತಿಗಳ ಸುಪುತ್ರಿ.
ಉಡುಪಿ: ಇನ್ ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರಿಗೆ ಐವತ್ತು ಸಾವಿರ ಪಂಗನಾಮ ಹಾಕಿದ ಮಾಯಾಂಗನೆ
ಉಡುಪಿ: ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬರಿಗೆ ಐವತ್ತು ಸಾವಿರಕ್ಕೂ ಹೆಚ್ಚು ರೂಪಾಯಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೂರಿನ ನಾಗರಾಜ್ ಪೂಜಾರಿ (27) ವಂಚನೆಗೆ ಒಳಗಾದ ವ್ಯಕ್ತಿ. ಇವರಿಗೆ ಕಳೆದ 20 ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿ ಬೆರ್ನಿಟ್ ವಿನ್ಸೆಂಟ್ ಪರಿಚಯವಾಗಿತ್ತು. ಈಕೆ ತಾನು ಲಂಡನ್ ಡಬ್ಲ್ಯೂಎಚ್ಒ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವುದಾಗಿ ಹೇಳಿ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಬಳಿಕ ದೂರವಾಣಿ ಸಂಖ್ಯೆ ಪಡೆದು, ನಿತ್ಯ […]