ರಾಜ್ಯದಲ್ಲಿ ಅತ್ಯಂತ ಪ್ರಬಲವಾದ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಿ: ಪೇಜಾವರ ಶ್ರೀಗಳಿಂದ ಸರ್ಕಾರಕ್ಕೆ ಆಗ್ರಹ

ಉಡುಪಿ: ರಾಜ್ಯದಲ್ಲಿ ಅತ್ಯಂತ ಪ್ರಬಲವಾದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಂತೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಗೋ ಹತ್ಯೆ ನಿಷೇಧ ಕಾಯಿದೆ (1964) ಅತ್ಯಂತ ದುರ್ಬಲವಾಗಿದೆ. ಆದ್ದರಿಂದ ಪ್ರತಿದಿನ ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ, ಗೋವುಗಳ ಹತ್ಯೆ ನಡೆಯುತ್ತಿದೆ. ಗೋವುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದು, ಇದರಿಂದ ಕೃಷ್ಣನ ಭಕ್ತರಿಗೆ ಅತ್ಯಂತ ದುಃಖವಾಗಿದೆ ಎಂದು ಶ್ರೀಪಾದರ ಹೇಳಿದ್ದಾರೆ. ಗೋವುಗಳ ರಕ್ಷಣೆ ಹಾಗೂ ಗೋವುಗಳ ವಧೆ […]

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಚರಣೆ

ನಿಟ್ಟೆ: ‘ತಾಂತ್ರಿಕ ಜ್ಞಾನದೊಂದಿಗೆ ಸಂವಹನ ಚಾತುರ್ಯತೆ ಬೆಳೆಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತಿಮುಖ್ಯ’ ಎಂದು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜಿನ ಎಡ್ಮಿನಿಸ್ಟ್ರೇಟರ್  ರೋಹಿತ್ ಪೂಂಜಾ ಅಭಿಪ್ರಾಯಪಟ್ಟರು. ಅವರು ಸೆ.೧೫ ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಇಂಜಿನಿಯರ್‍ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದರು. ಪ್ರತೀ ಕ್ಷೇತ್ರದಲ್ಲೂ ದಿನೇದಿನೇ ನಾವಿನ್ಯತೆಯನ್ನು ಕಾಣಬಹುದಾಗಿದ್ದು ಇಂದಿನ ದಿನಗಳಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಸರ್.ಎಂ ವಿಶ್ವೇಶ್ವರಯ್ಯರಂತಹ ಮಹಾನ್ ಚೇತನ ನಮ್ಮ ಬದುಕಿಗೆ ಆದರ್ಶಪ್ರಾಯರಾಗಿರುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]

ಕಡೆಕಾರು ರಂಜಿತ ಕೊಲೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ

ಉಡುಪಿ: ಕಳೆದ ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟ ಎಂಬಲ್ಲಿ ನಡೆದ ರಂಜಿತ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪಟೇಲ್ ತೋಟದ ನಿವಾಸಿ ಯೋಗೀಶ್ (32) ಜೀವಿತಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಘಟನೆಯ ವಿವರ: ಆರೋಪಿ ಯೋಗೀಶ್ ತನ್ನ ಮನೆಯ ಹತ್ತಿರದ ನಿವಾಸಿಯಾಗಿದ್ದ ಸುಮತಿ ಎಂಬುವವರ ಮಗಳು 19 ವರ್ಷ ಪ್ರಾಯದ ರಂಜಿತಾಳನ್ನು ದಾರಿ ಮಧ್ಯೆ […]

ಉಡುಪಿಯ “ಡ್ರೀಮ್ ಝೋನ್” ನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ನಿಮ್ಮ ಡ್ರೀಮ್ ನನಸಾಗಲಿದೆ: ಈಗಲೇ ಡ್ರೀಮ್ ಝೋನ್ ಗೆ ಸೇರಿ

ಈಗಿನ ಔದ್ಯೋಗಿಕ ಜಗತ್ತಿನಲ್ಲಿ ಎಷ್ಟು ಕ್ರಿಯೇಟಿವಿಟಿ ಇದ್ದರೂ ಸಾಲುವುದಿಲ್ಲ. ಕಂಪ್ಯೂಟರ್ ಗ್ರಾಫಿಕ್, ಡಿಸೈನ್ ಎಲ್ಲಾ ಗೊತ್ತಿದ್ದವರಿಗಂತೂ ಉಜ್ವಲ ಭವಿಷ್ಯ ಕಟ್ಟಿಕೊಳ್ಳೋದು ಬಹಳ ಸುಲಭ. ಯಾಕೆಂದರೆ ಗ್ರಾಫಿಕ್ ಡಿಸೈನ್, ಫ್ಯಾಶನ್ ಡಿಸೈನ್, ಇಂಟಿರಿಯರ್ ಡಿಸೈನ್, ವಿಡಿಯೋ ಎಡಿಟಿಂಗ್,ಫೋಟೋಗ್ರಫಿ ಮೊದಲಾದವುಗಳು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ  ಕ್ಷೇತ್ರಗಳಿಗೂ ಬೇಕೇ ಬೇಕು. ಇವಿಲ್ಲದೇ  ಜಗತ್ತೇ ಇಲ್ಲ. ಇಂತಹ ಕ್ರಿಯಾಶೀಲ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಉದ್ಯೋಗ ಜಗತ್ತಿನಲ್ಲಿ ಅವಕಾಶದ ಬಾಗಿಲನ್ನು ತೆರೆದು ನೂರಾರು ಜನರಿಗೆ ಕಂಪ್ಯೂಟರ್ ಗ್ರಾಫಿಕ್ಸ್, ಡಿಸೈನ್ ಎಲ್ಲವನ್ನೂ ಕಲಿಸಿ ಬದುಕು […]

ಊರಿಗೆ ಮರಳುತ್ತಿದ್ದ ಉಡುಪಿ ಶಿರ್ವಾದ ಮಹಿಳೆ ಕುವೈಟ್ ನಲ್ಲಿ ಬಂಧನ

ಉಡುಪಿ: ತಾಯ್ನಾಡಿಗೆ ಮರಳುತ್ತಿದ್ದ ಉಡುಪಿ ಶಿರ್ವ ಮೂಲದ ಗಿರಿಜಾ(63) ಎಂಬವರನ್ನು ಕುವೈಟ್ ಸಿಐಡಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಗಿರಿಜಾ ಅವರು ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿನಿಂದ ಕೆಲಸ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಅವರು ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದನ್ನು ತಿಳಿದ ಅವರ ಪುತ್ರಿ‌ ಊರಿಗೆ ಗಿರಿಜಾಗೆ ತಿಳಿಸಿದ್ದರು. ಅದರಂತೆ ಊರಿಗೆ ಬರಲು ನಿರ್ಧರಿಸಿದ ಗಿರಿಜಾ ಅವರು, ಸೆ.13ರಂದು ಇಂಡಿಗೋ ವಿಮಾನದ ಟಿಕೆಟ್‌ […]