ಉಡುಪಿಯ “ಡ್ರೀಮ್ ಝೋನ್” ನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ನಿಮ್ಮ ಡ್ರೀಮ್ ನನಸಾಗಲಿದೆ: ಈಗಲೇ ಡ್ರೀಮ್ ಝೋನ್ ಗೆ ಸೇರಿ

ಈಗಿನ ಔದ್ಯೋಗಿಕ ಜಗತ್ತಿನಲ್ಲಿ ಎಷ್ಟು ಕ್ರಿಯೇಟಿವಿಟಿ ಇದ್ದರೂ ಸಾಲುವುದಿಲ್ಲ. ಕಂಪ್ಯೂಟರ್ ಗ್ರಾಫಿಕ್, ಡಿಸೈನ್ ಎಲ್ಲಾ ಗೊತ್ತಿದ್ದವರಿಗಂತೂ ಉಜ್ವಲ ಭವಿಷ್ಯ ಕಟ್ಟಿಕೊಳ್ಳೋದು ಬಹಳ ಸುಲಭ. ಯಾಕೆಂದರೆ ಗ್ರಾಫಿಕ್ ಡಿಸೈನ್, ಫ್ಯಾಶನ್ ಡಿಸೈನ್, ಇಂಟಿರಿಯರ್ ಡಿಸೈನ್, ವಿಡಿಯೋ ಎಡಿಟಿಂಗ್,ಫೋಟೋಗ್ರಫಿ ಮೊದಲಾದವುಗಳು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ  ಕ್ಷೇತ್ರಗಳಿಗೂ ಬೇಕೇ ಬೇಕು. ಇವಿಲ್ಲದೇ  ಜಗತ್ತೇ ಇಲ್ಲ.

ಇಂತಹ ಕ್ರಿಯಾಶೀಲ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಉದ್ಯೋಗ ಜಗತ್ತಿನಲ್ಲಿ ಅವಕಾಶದ ಬಾಗಿಲನ್ನು ತೆರೆದು ನೂರಾರು ಜನರಿಗೆ ಕಂಪ್ಯೂಟರ್ ಗ್ರಾಫಿಕ್ಸ್, ಡಿಸೈನ್ ಎಲ್ಲವನ್ನೂ ಕಲಿಸಿ ಬದುಕು ಕಟ್ಟಿಕೊಟ್ಟ ಸಂಸ್ಥೆಯೇ ಉಡುಪಿಯ ರಾಜ್ ಟವರ್ಸ್ ನಲ್ಲಿರುವ ಡ್ರೀಮ್ ಝೋನ್ ಸಂಸ್ಥೆ.

ಭಾರತದ ಸರ್ಕಾರದ ಸ್ಕಿಲ್ ಇಂಡಿಯ ಯೋಜನೆಯಡಿ NSDC ಪ್ರಮಾಣಿತ ಉದ್ಯೋಗಾಧಾರಿತ ತರಬೇತಿ ತರಗತಿಗಳನ್ನು ನೀಡೋದು ಈ ಸಂಸ್ಥೆಯ ಸ್ಪೆಷಾಲಿಟಿ.

https://youtu.be/0DaADaadLwY

ಕಲಿಕೆ ಎಂದರೆ ಬರೀ ಇಂಜಿನಿಯರಿಂಗ್, ಸಿಎ, ಬಿಕಾಂ ಮಾತ್ರವಲ್ಲ ಲಕ್ಷಾಂತರ ವೇತನ ನೀಡುವ ಗ್ರಾಫಿಕ್ ಡಿಸೈನಿಂಗ್, ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್, ಎಡಿಟಿಂಗ್, ಫೋಟೋಗ್ರಫಿ, ವೆಬ್ ಡಿಸೈನಿಂಗ್, ಜ್ಯುವೆಲ್ಲರಿ ಡಿಸೈನಿಂಗ್ ಮೊದಲಾದ ಕ್ಷೇತ್ರದಲ್ಲೂ ಈಗ ಉದ್ಯೋಗ ಧಾರಾಳ, ಅವಕಾಶಗಳು ಭರಪೂರ. ಡ್ರೀಮ್ ಝೋನ್, ಇಂತಹ ನೂರಾರು ಮಂದಿಗೆ ತರಬೇತಿ ನೀಡುವ ಮೂಲಕ ಬದುಕು ಕಟ್ಟಿಕೊಟ್ಟಿದೆ

ಕನಸು ಕಟ್ಟಿಕೊಡುವ ಕ್ರಿಯಾಶೀಲ ಸಂಸ್ಥೆ:

ಡ್ರೀಮ್ ಝೋನ್, ನೂರಾರು ಜನರಲ್ಲಿ ಡಿಸೈನಿಂಗ್ ಹಾಗೂ ಇತರ ಸೃಜನಶೀಲ ಕ್ಷೇತ್ರದಲ್ಲಿ ಚಿಗುರಲು ಕನಸುಗಳನ್ನು ಹುಟ್ಟಿಸಿ, ಆ ಕನಸುಗಳನ್ನು ನನಸೂ ಮಾಡಿದೆ.

ಇಲ್ಲಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ದೇಶದ  ಹೆಸರುವಾಸಿ ಸಂಸ್ಥೆಗಳಲ್ಲಿ ಡಿಸೈನರ್ ಗಳಾಗಿ ಮಿಂಚುತ್ತಿದ್ದಾರೆ.ಸ್ವಂತವಾಗಿ ದುಡಿಯುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗ ಕಂಡುಕೊಂಡು ಬೆಳೆಯುತ್ತಿದ್ದಾರೆ.

ಉಚಿತ ಕಾರ್ಯಗಾರವೂ ಇದೆ:

ಡ್ರೀಮ್ ಝೋನ್ ನಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ತರಬೇತಿಗಳೂ ಇವೆ. ಈ ತರಬೇತಿಗಳಲ್ಲಿ ನೀವು ವಿವಿಧ ಕ್ರಿಯಾಶೀಲ ಕ್ಷೇತ್ರಗಳಲ್ಲಿ ನೀಡುವ ತರಬೇತಿ ಇತ್ಯಾದಿಗಳ ಕುರಿತು ಸಮರ್ಪಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಡ್ರೀಮ್ ಝೋನ್ ನಿಂದ  ನಿಮ್ಮ ಬದುಕು ಕಟ್ಟಿಕೊಳ್ಳಿ:

ಎಸ್ಸೆಸ್ಸೆಲ್ಸಿ, ಪಿಯುಸಿ ಡಿಗ್ರಿಗಳಲ್ಲಿ ಪಾಸ್/ಫೈಲ್ ಆದವರು ಡ್ರೀಮ್ ಝೋನ್ ನೀಡುವ ಉದ್ಯೋಗಾಧಾರಿತ ತರಬೇತಿಯನ್ನು ಪಡೆದು ಬದುಕು ಕಟ್ಟಿಕೊಳ್ಳಬಹುದು. ಯಾವತ್ತೂ ಬೇಡಿಕೆ ಕುಸಿಯದ ಸೃಜಲಶೀಲ ಕ್ಷೇತ್ರಗಳಲ್ಲಿ ಮುನ್ನುಗ್ಗಬಹುದು.ಆಸಕ್ತರು 8139911828 ಗೆ ಸಂಪರ್ಕಿಸಿ