ಸೆ.14ರಿಂದ ಅ. 2ರ ವರೆಗೆ ಬಿಜೆಪಿ ಸೇವಾ ಸಪ್ತಾಹ

ಉಡುಪಿ: ಸೇವಾ ಹೀ ಸಂಘಟನೆ ಪರಿಕಲ್ಪನೆಯಡಿ ಸೆ.14 ರಿಂದ ಅ. 2ರ ವರೆಗೆ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮಾಗಾಂಧಿ ಜಯಂತಿ ಸಂಬಂಧಿಸಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾಹಿತಿ ನೀಡಿ, ಜಿಲ್ಲೆಯ ಪ್ರತಿ ಮಂಡಲದಲ್ಲಿ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ, ಉಚಿತ ಕನ್ನಡಕ, ಬಡ ಕಾಲೋನಿಗಳಿಗೆ ತೆರಳಿ ಹಣ್ಣು ವಿತರಣೆ, ಕೋವಿಡ್ ಪೀಡಿತರಿಗೆ ಪ್ಲಾಸ್ಮಾದಾನ ಕಾರ್ಯಕ್ರಮಗಳು ನಡೆಯಲಿದೆ. […]

ಜೆಸಿಐ ಉಡುಪಿ ಇಂದ್ರಾಳಿ ಘಟಕ: 2020ನೇ ಸಾಲಿನ ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭ

ಉಡುಪಿ: ಜೆಸಿಐ ಉಡುಪಿ ಇಂದ್ರಾಳಿ ಘಟಕದ 2020ನೇ ಸಾಲಿನ ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭವು ಮಣಿಪಾಲದ ಹೋಟೆಲ್ ಮಧುವನ ಸೇರಾಯ್ ನ ಮೈತ್ರಿ ಹಾಲ್ ನಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಎಂ ಎನ್ ನಾಯಕ್  ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷ ಮೇಧಾವಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮಣಿಪಾಲದ ನಗರಸಭಾ ಕಟ್ಟಡದಲ್ಲಿ ಇರುವ ಗ್ರಾಮ ಕರಣಿಕರ ಕಚೇರಿ ಗೆ ವಾಟರ್ ಪ್ಯೂರಿಫೈರ್ ನ ಕೊಡುಗೆ ಹಾಗೂ ಫಿಟ್ ಇಂಡಿಯಾದ […]

ಕಾಪು: ಮಸೀದಿಯ ಬಾಗಿಲು ಒಡೆದು ನಮಾಜ್; ಐವರ ವಿರುದ್ಧ ಪ್ರಕರಣ ದಾಖಲು

ಕಾಪು: ಇಲ್ಲಿನ ಪೊಲಿಪು ಜಾಮೀಯ ಮಸೀದಿಯ ದರ್ಗಾದ ಬಾಗಿಲು ಒಡೆದು ಒಳನುಗ್ಗಿದ ತಂಡವೊಂದು ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಮಾಜ್ ಮಾಡಿ, ಮಸೀದಿಯ ಉಪಾಧ್ಯಕ್ಷರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಸೆ. 14ರಂದು ನಡೆದಿದೆ. ಸ್ಥಳೀಯರಾದ ರಶೀದ್, ಜಲೀಲ್, ಬಶೀರ್ ಜನಪ್ರಿಯ, ಬಶೀರ್ ಕರ್ನಾಟಕ ಹೋಟೆಲ್ ಹಾಗೂ ಅಶ್ರಫ್ ಅಕ್ರಮವಾಗಿ ಮಸೀದಿಯೊಳಗೆ ನುಗ್ಗಿ, ಉಪಾಧ್ಯಕ್ಷರಿಗೆ ಬೆದರಿಕೆ ಹಾಕಿದ ಆರೋಪಿಗಳು. ಇವರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲಿಪು ಮಸೀದಿಯಲ್ಲಿ ಸರಕಾರ ಮತ್ತು ವಕ್ಷ್ ಬೋರ್ಡ್‌ನ ಎಲ್ಲ ಸೂಚನೆಗಳನ್ನು ಪಾಲಿಸಿಕೊಂಡು […]

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ: ಉಚಿತವಾಗಿ ಐದು ಕೆಜಿ ಅಕ್ಕಿ ಪಡೆಯಿರಿ

ಪುದುಚೇರಿ: ಕೊರೊನಾ ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ಜನರನ್ನು ಆಕರ್ಷಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಪುದುಚೇರಿಯ ಎಐಎಡಿಎಂಕೆ ಶಾಸಕರೊಬ್ಬರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ಪರೀಕ್ಷೆಗೆ ಒಳಪಡುವ ಜನರಿಗೆ ಅಕ್ಕಿ ವಿತರಿಸಲು ಮುಂದಾಗಿದ್ದಾರೆ. ಎಐಎಡಿಎಂಕೆ ಶಾಸಕ ಅನ್ಬಗಳನ್ ತಮ್ಮ ಸ್ವಕ್ಷೇತ್ರದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದ್ದಾರೆ. ಪುದುಚೆರಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುದುಚೆರಿ ಜಿಲ್ಲಾಡಳಿತ ಐಸಿಎಂಆರ್ ಆದೇಶದಂತೆ ಪರೀಕ್ಷೆ ನಡೆಸಲು […]

ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನ(ರಿ.) ಪ್ರಸಾದ ಭವನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ         

ಉಡುಪಿ ಸೆ.16: ಕಾರ್ಕಳದ ಸಂಘದ ಕಛೇರಿ ಪ್ರಸಾದ ಭವನದಲ್ಲಿ ಸ್ಥಾನಿಕ ದ್ರಾವಿಡ  ಬ್ರಾಹ್ಮಣ ಸಂಘ ಕಾರ್ಕಳ ವಲಯದ ಶ್ರೀ ಶಂಕರ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಸೆ.೧೨ ರಂದು ಅಪರಾಹ್ನ ನೆರವೇರಿತು. ಈ ಸಂದರ್ಭದಲ್ಲಿ  2019 -20 ನೇ ಸಾಲಿನಲ್ಲಿ ದ್ವಿತೀಯ .ಪಿ.ಯು.ಸಿ. ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು.ಪ್ರದೀಪ್ ರಾವ್ ಹೊಸ್ಮಾರ್,  ಕುಮಾರಿ ಪ್ರಜ್ಞಾಶ್ರೀ ಹೆಬ್ಬಾರ್ ಬೈಲೂರು, ಕು.ಸುಜನ್ ರಾವ್ ಕಾರ್ಕಳ, ಹಾಗೂ ಕುಮಾರಿ.ಅನನ್ಯ ಹೆಬ್ಬಾರ್ ಕಬ್ಬಿನಾಲೆ, ಮತ್ತು  ಎಸ್.ಎಸ್.ಎಲ್.ಸಿ.ಯ ಕು.ಕಾರ್ತಿಕ್ ಹೆಬ್ಬಾರ್ ಕಾರ್ಕಳ, ಹಾಗೂ ಕು.ಶ್ರೀವತ್ಸ ರಾವ್ […]