ಉಡುಪಿಯಲ್ಲಿ ಮೊಂತಿ ಫೆಸ್ಟ್ ಸಂಭ್ರಮ
ಉಡುಪಿ: ಕರಾವಳಿ ಕ್ರೈಸ್ತ ಬಾಂಧವರ ಅತ್ಯಂತ ಶ್ರದ್ಧೆಯ ಹಬ್ಬ ತೆನಹಬ್ಬ ಹಾಗೂ ಕನ್ಯಾಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್) ವನ್ನು ಕೊರೊನಾ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಳ ರೀತಿಯಲ್ಲಿ ಮಂಗಳವಾರ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಚರ್ಚ್ ಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶಿರ್ವಾದಿಸಿ ಬಲಿಪೂಜೆಗಳನ್ನು ನೆರವೇರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಹೊಸ ತೆನೆಗಳನ್ನು ಆಶೀರ್ವಾದಿಸಿ ಬಲಿಪೂಜೆಯನ್ನು ನೆರವೇರಿಸಿ […]
ಸಿಂಧೂರ ಕಲಾವಿದೆರ್ ಕಾರ್ಲ:ಸಿಂಧೂರ ಸಂಭ್ರಮ ಕಾರ್ಯಕ್ರಮ
ಕಾರ್ಕಳ: ಸಿಂಧೂರ ಕಲಾವಿದೆರ್ ಕಾರ್ಲ ಇದರ 5 ನೇ ವರ್ಷದ ಸಿಂಧೂರ ಸಂಭ್ರಮ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು. ತಂಡದ ಮಹಾ ಪೊಷಕರಾದ ಅಶೊಕ್ ದೇವಾಡಿಗ ಪೊಸಲಾಯಿ. ಜೇರಾಲ್ಡ್ ಡಿಸಿಲ್ವಾ ಮಿಯ್ಯಾರು, ತಂಡದ ಸಾರಥಿ ಲೀಲಾವತಿ ಪೊಸಲಾಯಿ, ರವೀಂದ್ರ ಶಾಂತಿ ಪುಲ್ಕೇರಿ, ತಾರಾನಾಥ್ ಬೊಳ, ಹಮೀದ್ ಮಿಯ್ಯಾರು, ಸುಚಿತ್ರಾ, ಪವನ್, ವಿಠ್ಠಲ್ ಅಮೀನ್ ಪುಲ್ಕೇರಿ, ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂದೀಪ್ ಬಾರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ನೆಲ್ಲಿಕಟ್ಟೆ […]
ಡ್ರಗ್ಸ್ ದಂಧೆ: ನಟಿ ಸಂಜನಾ ಐದು ದಿನ ಕಾಲ ಸಿಸಿಬಿ ಕಸ್ಟಡಿಗೆ
ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ವಿಡಿಯೋ ಕನ್ಫೋರೆನ್ಸ್ ಮೂಲಕ ನಗರದ 8ನೇ ಎಸಿಎಂಎಂ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಹೆಚ್ಚಿನ ವಿಚಾರಣೆಗಾಗಿ ಸಂಜನಾಳನ್ನು 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ 5 ದಿನಗಳ ಕಾಲ ಸಿಸಿಬಿ ಕಸ್ಟಡಿ ನೀಡಿ ಎಂದು ಆದೇಶ ನೀಡಿದೆ. ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ಇಂದು […]
ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ: ನಟಿ ರಿಯಾ ಚಕ್ರವರ್ತಿ ಅರೆಸ್ಟ್
ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಂಟಿನ ಕುರಿತು ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ನಟಿ ರಿಯಾ ಚಕ್ರವರ್ತಿಯನ್ನು ಇಂದು ಬಂಧಿಸಿದ್ದಾರೆ. ಕಳೆದ ಮೂರು ದಿನಗಳಿಂದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು ಬಂಧಿಸಿದ್ದು, ಇಂದು ಸಂಜೆ ಐದು ಗಂಟೆಯ ಸುಮಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ವರದಿಯಾಗಿದೆ. ಡ್ರಗ್ಸ್ ಪೂರೈಕೆ, ಬಳಕೆ ಸಂಬಂಧಿಸಿದ ಪ್ರಕರಣದಲ್ಲಿ ರಿಯಾ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಹೌಸ್ ಮ್ಯಾನೇಜರ್ ಸ್ಯಾಮ್ಯಯೆಲ್ ಮಿರಾಂಡ […]
ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಗೆ 615 ಅಂಕ
ನಿಟ್ಟೆ:ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಯ ಮರುಮೌಲ್ಯಮಾಪನದ ಫಲಿತಾಂಶದಲ್ಲಿ ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ‘ಸಾತ್ವಿಕ್’ 615 ಅಂಕಗಳನ್ನು ಗಳಿಸಿ ಕನ್ನಡ ಮಾಧ್ಯಮದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಹಾಗೂ ಉಡುಪಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿಯು ಮರುಮೌಲ್ಯಮಾಪನದಲ್ಲಿ 34 ಹೆಚ್ಚುವರಿ ಅಂಕಗಳನ್ನು ಗಳಿಸಿದ್ದಾರೆ.