ಜಿಡಿಪಿ ಕುಸಿತಕ್ಕೆ ನೋಟು ಅಮಾನ್ಯೀಕರಣವೇ ಕಾರಣ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕಳೆದ 40 ವರ್ಷಗಳಲ್ಲಿ ಶೇಕಡಾ 23.9ರಷ್ಟು ಕುಸಿದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ಕೈಗೊಂಡ ನೋಟು ಅಮಾನ್ಯೀಕರಣ ನಿರ್ಧಾರವೇ ಪ್ರಮುಖ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋ ಹೇಳಿಕೆ ಮೂಲಕ ಟೀಕಿಸಿರುವ ಅವರು, ನೋಟು ಅಮಾನ್ಯೀಕರಣದಿಂದ ದೇಶದ ಜಿಡಿಪಿ ತಳಮಟ್ಟಕ್ಕೆ ಇಳಿದಿದೆ ಎಂದು ಗುಡುಗಿದ್ದಾರೆ. ದೇಶದ ಬಡವರು, ರೈತರು, ಅಸಂಘಟಿತ ವಲಯಗಳ ಮೇಲೆ ದಾಳಿ ನಡೆಸುತ್ತಿರುವ […]

ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ನನ್ನ ಹೋರಾಟ: ಇಂದ್ರಜಿತ್ ಲಂಕೇಶ್

ಬೆಂಗಳೂರು: ಸ್ಯಾಂಡಲ್ ವುಡ್ ನ ಕೆಲ ನಟ ನಟಿಯರಿಗೆ ಡ್ರಗ್ಸ್ ದಂಧೆಯ ನಂಟಿರುವ ಕುರಿತಂತೆ ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಸಿಸಿಬಿ ಪೊಲೀಸರಿಗೆ ಯಾವ ದಾಖಲೆ ನೀಡಿದೆ, ಏನು ಹೇಳಿದ್ದೇನೆ ಎಂಬುವುದನ್ನು ಈಗಲೇ ಹೇಳಲು ಆಗಲ್ಲ. ತನಿಖೆಗೆ ಯಾವುದೇ ಅಡ್ಡಿ ಆಗಬಾರದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಸಿಬಿ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದೇನೆ. ತನಿಖೆ ಅನುಕೂಲವಾಗುವ ಮಾಹಿತಿ ನೀಡಿದ್ದೇನೆ. ನನ್ನ ಬಳಿ ಹಾರ್ಡ್ ಡಿಸ್ಕ್, ಐಪ್ಯಾಡ್ […]

ಮುತಾಲಿಕ್ ಗೆ ನನ್ನ ಅಕ್ಕ ಗೌರಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಇಂದ್ರಜಿತ್ ಲಂಕೇಶ್ ಕಿಡಿ

ಬೆಂಗಳೂರು: ನಮ್ಮ ಅಕ್ಕ ಗೌರಿ ಲಂಕೇಶ್ ಅವರ ಸಿದ್ಧಾಂತವನ್ನು ಹಲವಾರು ಒಪ್ಪಿರಬಹುದು. ಇನ್ನಷ್ಟು ಮಂದಿ ಒಪ್ಪದೆಯೂ ಇರಬಹುದು. ಆದರೆ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಪ್ರಮೋದ್ ಮುತಾಲಿಕ್ ಗೆ ನನ್ನ ಅಕ್ಕನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿಯ ಸಾವು ಕೂಡ ನಿಜವಾದ ಸಾವು. ಸಿದ್ದಾಂತ ಬೇರೆ ಆಗಿರಬಹುದು. ಆದರೆ ಅವರ ಘನತೆಗೆ ಧಕ್ಕೆಬರುವಂತಹ ಹೇಳಿಕೆ ನೀಡಬಾರದು ಎಂದು‌ ಭಾವುಕರಾದರು. […]

ಸ್ಟುಡಿಯೋ 9 ಬ್ರಹ್ಮಾವರದ ಜನತೆಗೊಂದು ಸದವಕಾಶ ಕಲ್ಪಿಸಿದೆ: ಶೈನ್ ಶೆಟ್ಟಿ

ಬ್ರಹ್ಮಾವರ: ಇಲ್ಲಿನ ಬಸ್ ಸ್ಟ್ಯಾಂಡ್ ಬಳಿಯ ಶ್ರೀರಾಮ್ ಆರ್ಕೆಡ್ ನಲ್ಲಿ ನೂತನವಾಗಿ ಆರಂಭಿಸಲಾದ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆಯನ್ನು ಕನ್ನಡದ ಬಿಗ್ ಬಾಸ್ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಬುಧವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶೈನ್ ಶೆಟ್ಟಿ, ಬ್ರಹ್ಮಾವರದಲ್ಲಿ ಶುಭಾರಂಭಗೊಂಡ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆಯಲ್ಲಿ ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ ಗಳ ಸಿದ್ಧ ಉಡುಪುಗಳು ಕೈಗೆಟುಕುವ ದರಲ್ಲಿ ದೊರೆಯುತ್ತಿದೆ. ಇಂತಹದೊಂದು ಸದಾವಕಾಶವನ್ನು ಪ್ರದೀಪ್ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಬಳಗದವರು […]

ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಕೆ. ಆತ್ರಾಡಿ ಇದಿನಬ್ಬ ವಿಧಿವಶ

ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಕೆ.ಆತ್ರಾಡಿ ಇದಿನಬ್ಬ(72) ಅಲ್ಪಕಾಲದ ಅಸೌಖ್ಯದಿಂದ ಇಂದು ನಸುಕಿನ ವೇಳೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರು ಒಬ್ಬರು. ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ, ಉಡುಪಿ ತಾಲೂಕು ಆಶ್ರಯ ಸಮಿತಿಯ ಸದಸ್ಯರಾಗಿ ಹಾಗೂ ಆತ್ರಾಡಿ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. […]