udupixpress
Home Trending ಸ್ಟುಡಿಯೋ 9 ಬ್ರಹ್ಮಾವರದ ಜನತೆಗೊಂದು ಸದವಕಾಶ ಕಲ್ಪಿಸಿದೆ: ಶೈನ್ ಶೆಟ್ಟಿ

ಸ್ಟುಡಿಯೋ 9 ಬ್ರಹ್ಮಾವರದ ಜನತೆಗೊಂದು ಸದವಕಾಶ ಕಲ್ಪಿಸಿದೆ: ಶೈನ್ ಶೆಟ್ಟಿ

ಬ್ರಹ್ಮಾವರ: ಇಲ್ಲಿನ ಬಸ್ ಸ್ಟ್ಯಾಂಡ್ ಬಳಿಯ ಶ್ರೀರಾಮ್ ಆರ್ಕೆಡ್ ನಲ್ಲಿ ನೂತನವಾಗಿ ಆರಂಭಿಸಲಾದ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆಯನ್ನು ಕನ್ನಡದ ಬಿಗ್ ಬಾಸ್ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶೈನ್ ಶೆಟ್ಟಿ, ಬ್ರಹ್ಮಾವರದಲ್ಲಿ ಶುಭಾರಂಭಗೊಂಡ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆಯಲ್ಲಿ ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ ಗಳ ಸಿದ್ಧ ಉಡುಪುಗಳು ಕೈಗೆಟುಕುವ ದರಲ್ಲಿ ದೊರೆಯುತ್ತಿದೆ. ಇಂತಹದೊಂದು ಸದಾವಕಾಶವನ್ನು ಪ್ರದೀಪ್ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಬಳಗದವರು ಒದಗಿಸಿಕೊಟ್ಟಿದ್ದಾರೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು, ಬೇರೆ ಬೇರೆ ಸ್ಥಳಗಳಲ್ಲಿ ಹತ್ತಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಇಂದಿನ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹೊಸ ಬಟ್ಟೆ ಮಳಿಗೆಯನ್ನು ಆರಂಭಿಸಿ ಇತರರಿಗೆ ಮಾದರಿಯಾಗಿದ್ದಾರೆ.  ಇವರು ಆರಂಭಿಸಿರುವ ಬಟ್ಟೆ ಮಳಿಗೆಯಿಂದ ಇನ್ನಷ್ಟು ಮಂದಿ ಪ್ರೇರೇಪಣೆಗೊಂಡು ಇಂತಹದ್ದೇ ಪ್ರಯತ್ನಕ್ಕೆ ಕೈ ಹಾಕುವಂತಾಗಲಿ ಎಂದು ಹಾರೈಸಿದರು.
error: Content is protected !!