ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಸಭೆ

ಉಡುಪಿ: ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ‘ಗ್ರಾಮ ಪಂಚಾಯತ್ ಚುನಾವಣೆ-2020’ರ ಪೂರ್ವಭಾವಿ ಸಭೆ ಇಂದು ತೆಂಕನಿಡಿಯೂರಿನ ರಾಧ್ಮಾ ರೆಸಿಡೆನ್ಸಿಯಲ್ಲಿ ನಡೆಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಜನಾರ್ದನ್ ತೋನ್ಸೆ, ಸತೀಶ್ ಅಮೀನ್ ಪಡುಕೆರೆ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಪ್ರಶಾಂತ್ ಪೂಜಾರಿ, ನಾರಾಯಣ್ ಕುಂದರ್, ಲಕ್ಷ್ಮಣ್ ಅಂಬಲಪಾಡಿ, ಕೃಷ್ಣಮೂರ್ತಿ ಆಚಾರ್ಯ, ರಾಘು ಪೂಜಾರಿ, ಯತೀಶ್ ಕರ್ಕೇರಾ, ಸಾಯಿರಾಜ್, ಸತೀಶ್ ನಾಯ್ಕ್, ಸಂಪತ್ ಗುಜ್ಜರಬೆಟ್ಟು, ನಿತ್ಯಾನಂದ ಕೆಮ್ಮಣ್ಣು, ಜಯಾನಂದ್, […]

ಉಡುಪಿಯಲ್ಲಿ ಇಂದು 226 ಮಂದಿಗೆ ಕೊರೊನಾ ಪಾಸಿಟಿವ್: ನಾಲ್ವರು ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 226 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12150 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ 2115 ಸಕ್ರಿಯ ಕೊರೊನಾ ಸೋಂಕಿತರಿದ್ದು, 1045 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1070 ಮಂದಿ ಸೋಂಕಿತರು ಹೋಮ್ ಐಸೋಲೇಷನ್ ನಿಗಾದಲ್ಲಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. *328 ಮಂದಿ ಗುಣಮುಖ* ಜಿಲ್ಲೆಯಲ್ಲಿ ಇಂದು 328 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 134 […]

ಪ್ರಧಾನಿ ಮೋದಿಗೆ ಇ ಮೇಲ್ ಮೂಲಕ ಜೀವ ಬೆದರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ ಮೇಲ್ ಮೂಲಕ ದುಷ್ಕರ್ಮಿಗಳು ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೇಲ್ ನಲ್ಲಿ ‘Kill Narendra Modi’ ಎಂಬ ಸಂದೇಶ ಕಳುಹಿಸಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎನ್ನಲಾಗಿದೆ. ಗೃಹ ಸಚಿವಾಲಯ ಈ ಬೆದರಿಕೆ ಇ ಮೇಲ್ ನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಧಾನಿ ಮೋದಿಗೆ ರಕ್ಷಣೆ ನೀಡುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಜತೆ […]

ಟಾಟಾ ಮೋಟಾರ್ಸ್ ನ ನೂತನ ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಮಾರುಕಟ್ಟೆಗೆ ಲಾಂಚ್

ಮುಂಬೈ: ಭಾರತದಲ್ಲಿ ಕಾರು ತಯಾರಿಕಾ ಕಂಪೆನಿಗಳ ಪೈಕಿ ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನವಿದೆ. ಟಾಟಾ ಕಾರುಗಳ ಪೈಕಿ ನೆಕ್ಸಾನ್ ಮಾರಾಟದಲ್ಲಿ ದಾಖಲೆ ಬರೆದಿದ್ದು, ಇದೀಗ ನೆಕ್ಸಾನ್ ಕಾರಿನಲ್ಲಿ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಭಾರತದಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸನ್ ರೂಫ್ ಫೀಚರ್ಸ್ ಹೊಂದಿದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರಿನ ಬೆಲೆ 8.36 ಲಕ್ಷ ರೂಪಾಯಿಯಿಂದ […]

ಕೃಷ್ಣಮಠದಲ್ಲಿ ಎಂಟು ದಿನಗಳ ಕಾಲ ಜ್ಞಾನಯಜ್ಞ ಕಾರ್ಯಕ್ರಮ: ವಿಶ್ವಪ್ರಿಯ ಶ್ರೀಗಳಿಂದ ಚಾಲನೆ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಕೃಷ್ಣಮಠದಲ್ಲಿ ಆಯೋಜಿಸಿರುವ ಸೆ. 3ರಿಂದ 10ರ ವರೆಗೆ ಎಂಟು ದಿನಗಳ ಕಾಲ ಜ್ಞಾನಯಜ್ಞ ಕಾರ್ಯಕ್ರಮಕ್ಕೆ ಪರ್ಯಾಯ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಇಂದು ಚಾಲನೆ ನೀಡಿದರು. ಪರ್ಯಾಯ ಈಶಪ್ರಿಯ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿ ನಾವು ಏನನ್ನಾದರೂ ಪಡೆದರೂ ಅದಕ್ಕೆ ಭಗವಂತನ ಅನುಗ್ರಹ ಇರುತ್ತದೆ. ಇದು ಭಗವಂತನ ಪೂಜೆಯ ಫಲದಿಂದ ನಮಗೆ […]