ಈಶ್ವರಚಂದ್ರ ಅವರಿಗೆ ಪಿ.ಎಚ್.ಡಿ

ಮಣಿಪಾಲ: ಯಕ್ಷಗಾನ ಕುರಿತಾಗಿ ನಡೆಸಿದ “ಸಂವಹನ ಮಾಧ್ಯಮವಾಗಿ ಯಕ್ಷಗಾನ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ಸಂಶೋಧನಾ ಪ್ರಬಂಧಕ್ಕೆ ವಿಟ್ಲದ ವೀರಕಂಭ ಮೂಲದ ಈಶ್ವರಚಂದ್ರ ಇವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಇವರು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಅಂಡಿಂಜೆ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ಈಶ್ವರಚಂದ್ರ ಇವರು ಸದ್ಯ ಮಣಿಪಾಲದಲ್ಲಿ ನೆಲೆಸಿದ್ದು, ಬೆತ್ತಸರವು ಗಣಪತಿ ಭಟ್, ಪರಮೇಶ್ವರಿ ಇವರ ಪುತ್ರ.
ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಆಯುಕ್ತರಾಗಿದ್ದ ಅಶೋಕ್ ಲಾವಾಸ ಅವರಿಂದ ತೆರವಾದ ಸ್ಥಾನದಲ್ಲಿ ರಾಜೀವ್ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಲಾವಾಸ ಅವರು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜೀವ್ 1984ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ಅಧಿಕಾರಿಯಾಗಿದ್ದು, ಇವರ ಅಧಿಕಾರಾವಧಿ 2025ರವರೆಗೂ ಇರಲಿದೆ. ಆದ್ದರಿಂದ 2024ನೇ ಸಾಲಿನ ಲೋಕಸಭೆ ಚುನಾವಣೆ ಇವರ ಅವಧಿಯಲ್ಲೇ ನಡೆಯಲಿದೆ.
ಮೈತ್ರಿ ಸರ್ಕಾರ ಉರುಳಿಸಲು ಡ್ರಗ್ಸ್ ದಂಧೆಯ ಹಣ ಬಳಕೆ: ಎಚ್ ಡಿಕೆ ಆರೋಪ

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಡ್ರಗ್ಸ್ ಮಾಫಿಯಾವೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಯತ್ನಿಸಿದ್ದೆ. ಇದುವೇ ನನ್ನ ಸರ್ಕಾರಕ್ಕೆ ಮುಳುವಾಯಿತು. ನನ್ನ ಸರ್ಕಾರ ಉರುಳಲು ಡ್ರಗ್ಸ್, ಕ್ರಿಕೆಟ್ ಬೆಟ್ಟಿಂಗ್ ಮತ್ತು ಪಬ್ ಹಣ ಬಳಕೆ ಆಯಿತು’ ಎಂದು ಆರೋಪಿಸಿದ್ದಾರೆ. ಡ್ರಗ್ಸ್ ಮಾಫಿಯಾ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಕೋಟ: ಯುವತಿಗೆ ಚೂರಿ ಇರಿದ ದುಷ್ಕರ್ಮಿಗಳು

ಕೋಟ: ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯೊಬ್ಬಳಿಗೆ ಐದು ಜನರ ದುಷ್ಕರ್ಮಿಗಳ ತಂಡವೊಂದು ಚೂರಿ ಇರಿದ ಘಟನೆ ಕೋಟ ಥೀಮ್ ಪಾರ್ಕ್ ಬಳಿ ನಡೆದಿದೆ. ಚೂರಿ ಇರಿತಕ್ಕೊಳಗಾದ ಯುವತಿಯನ್ನು ಪಾರಂಪಳ್ಳಿ ಅಂಬಾಗಿಲು ನಿವಾಸಿ ಸುಚಿತಾ (18)ಎಂದು ಗುರುತಿಸಲಾಗಿದೆ. ಸುಚಿತಾ ಸ್ನೇಹಿತನೊಂದಿಗೆ ಕೋಟ ಪೇಟೆಯ ಮೆಡಿಕಲ್ ಒಂದರಲ್ಲಿ ಔಷಧಿ ತರಲು ಹೋಗುತ್ತಿದ್ದರು, ಈ ವೇಳೆ ಆರೋಪಿಗಳಾಗದ ಕಿಶನ್, ಶಿವಪ್ರಸಾದ್, ಗೌತಮ್, ಚೇತನ್, ವಿಕಾಸ್ ಎಂಬುವವರು ಮಾರ್ಗ ಮಧ್ಯೆ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈಕೆ ಓಡಲು […]
ಗ್ರಾಪಂ ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ: ಸಂಘಟನೆ, ಕ್ರಿಯಾಶೀಲತೆ ಕಾರ್ಯಕರ್ತರ ಮುಖ್ಯ ಆದ್ಯತೆಯಾಗಲಿ-ಸಚಿವ ಕೋಟ

ಉಡುಪಿ: ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕಾರ್ಯಕರ್ತರು ಗ್ರಾಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ-ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದರು. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ಪೂರಕ […]