udupixpress
Home Trending ಕೋಟ: ಯುವತಿಗೆ‌ ಚೂರಿ ಇರಿದ ದುಷ್ಕರ್ಮಿಗಳು

ಕೋಟ: ಯುವತಿಗೆ‌ ಚೂರಿ ಇರಿದ ದುಷ್ಕರ್ಮಿಗಳು

ಕೋಟ: ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯೊಬ್ಬಳಿಗೆ ಐದು ಜನರ ದುಷ್ಕರ್ಮಿಗಳ ತಂಡವೊಂದು ಚೂರಿ ಇರಿದ ಘಟನೆ ಕೋಟ ಥೀಮ್ ಪಾರ್ಕ್‌ ಬಳಿ ನಡೆದಿದೆ.

ಚೂರಿ ಇರಿತಕ್ಕೊಳಗಾದ ಯುವತಿಯನ್ನು ಪಾರಂಪಳ್ಳಿ ಅಂಬಾಗಿಲು ನಿವಾಸಿ ಸುಚಿತಾ (18)ಎಂದು ಗುರುತಿಸಲಾಗಿದೆ. ಸುಚಿತಾ ಸ್ನೇಹಿತನೊಂದಿಗೆ ಕೋಟ ಪೇಟೆಯ ಮೆಡಿಕಲ್ ಒಂದರಲ್ಲಿ ಔಷಧಿ ತರಲು ಹೋಗುತ್ತಿದ್ದರು, ಈ ವೇಳೆ ಆರೋಪಿಗಳಾಗದ ಕಿಶನ್, ಶಿವಪ್ರಸಾದ್, ಗೌತಮ್, ಚೇತನ್, ವಿಕಾಸ್ ಎಂಬುವವರು ಮಾರ್ಗ ಮಧ್ಯೆ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈಕೆ ಓಡಲು ಯತ್ನಿಸಿದಾಗ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಯುವತಿ ಬೊಬ್ಬ ಹಾಕುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಯುವತಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!