ಆ್ಯಂಬುಲೆನ್ಸ್ ಚಾಲಕನ ತಪ್ಪಿನಿಂದ ಕುಂದಾಪುರ ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಬದಲಾವಣೆ: ಡಿಸಿ ಜಿ. ಜಗದೀಶ್ ಸ್ಪಷ್ಟನೆ
ಉಡುಪಿ: ಆ್ಯಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ಕುಂದಾಪುರ ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಬದಲಾವಣೆ ಆಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಕಳಕ್ಕೆ ತೆಗೆದುಕೊಂಡು ಹೋಗಬೇಕಿದ್ದ ಶವವನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಕುರಿತಂತೆ ತಂಡ ರಚಿಸಲಾಗಿದ್ದು, ಇನ್ಮುಂದೆ ಈ ರೀತಿ ಶವಗಳ ಬದಲಾವಣೆ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.
ಇಂದಿರಾನಗರದ ರಕ್ಷಾ ಸಾವಿನ ತನಿಖೆಗೆ ಡಿಎಚ್ಒ ನೇತೃತ್ವದಲ್ಲಿ ಸಮಿತಿ ರಚನೆ
ಉಡುಪಿ: ಶುಕ್ರವಾರ ಮೃತಪಟ್ಟ ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ಉಪಾಧ್ಯಕ್ಷನ ಪತ್ನಿ ಇಂದಿರಾನಗರ ನಿವಾಸಿ ರಕ್ಷಾ (26) ಅವರ ಸಾವಿನ ತನಿಖೆಗೆ ಸಂಬಂಧಿಸಿ ಡಿಎಚ್ಒ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಹಿಳೆಯ ಸಾವಿನ ತನಿಖೆಯನ್ನು ಸೂಕ್ತ ರೀತಿ ನಡೆಸಿ ನಾಲ್ಕು ದಿನಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.
ತುಳುನಾಡಿನಲ್ಲಿ ಕುದಿ ಕಂಬಳ ಋತು ಪ್ರಾರಂಭ: ಮೂಡಬಿದಿರೆಯಲ್ಲಿ ಚಾಲನೆ
ಕಾರ್ಕಳ: ತುಳುನಾಡಿನ ಜನಪದ ಕ್ರೀಡೆ ಕಂಬಳ ಋತು ಪ್ರಾರಂಭಕ್ಕೂ ಮೊದಲು ಕೋಣಗಳನ್ನು ತಯಾರುಗೊಳಿಸುವ ಕುದಿ ಕಂಬಳಕ್ಕೆ (ತರಬೇತಿ ಕಂಬಳಕ್ಕೆ) ಭಾನುವಾರ ಮೂಡುಬಿದಿರೆಯ ಕೋಟಿ-ಚೆನ್ನಯ ಕಂಬಳಕರೆಯಲ್ಲಿ ಚಾಲನೆ ನೀಡಲಾಯಿತು. ಕಂಬಳ ಅಕಾಡೆಮಿಯ ಸಂಚಾಲಕ ಗುಣಾಪಾಲ ಕಡಂಬ ಅವರು ಚಾಲನೆ ನೀಡಿದರು. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ರಂಜಿತ್ ತೋಡಾರು ಮತ್ತಿತರರು ಉಪಸ್ಥಿತರಿದ್ದರು. ಮಾಸ್ಕ್ ವಿತರಿಸಿ ಜಾಗೃತಿ : ಮೂಡಬಿದಿರೆ, ಬಾರಾಡಿಬೀಡು, ಮಿಯ್ಯಾರು ಮೂರು ಕಡೆಗಳಲ್ಲಿ ಕುದಿ ಕಂಬಳ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿಗಾಗಿ ಮಾಸ್ಕ್ ಕೂಡ ವಿತರಣೆ […]
ಉಡುಪಿಯಲ್ಲಿ ಇಂದು 309 ಮಂದಿ ಕೊರೊನಾದಿಂದ ಗುಣಮುಖ: ಇಬ್ಬರು ಕೊರೊನಾಗೆ ಬಲಿ
ಉಡುಪಿ: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರಿಗಿಂತ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 154 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 155 ಮಂದಿ ಸಹಿತ 309 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 7401 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 117 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10133 ಕ್ಕೆ […]
ಉಡುಪಿ ಕೋವಿಡ್ ಆಸ್ಪತ್ರೆಯ ಮಹಾ ಎಡವಟ್ಟು: ಬೇರೆಯೊಬ್ಬರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಮನೆಯವರು.!
ಕುಂದಾಪುರ: ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹದ ಬದಲು ಯುವಕನೊಬ್ಬನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಘಟನೆ ಉಡುಪಿ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇಂದು ನಡೆದಿದೆ. ಆಸ್ಪತ್ರೆಯ ಎಡವಟ್ಟಿನಿಂದ ಈ ವಿಚಿತ್ರ ಘಟನೆ ನಡೆದಿದ್ದು, ಕುಂದಾಪುರದ ರುದ್ರಭೂಮಿಯಲ್ಲಿ ಮೃತದೇಹ ಅದಲು ಬದಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೋಟೇಶ್ವರ ಸಮೀಪದ ನೇರಂಬಳ್ಳಿಯ 60 ವರ್ಷ ಪ್ರಾಯದ ವ್ಯಕ್ತಿ ಜು.30ರಂದು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ […]