ಆ್ಯಂಬುಲೆನ್ಸ್ ಚಾಲಕನ ತಪ್ಪಿನಿಂದ ಕುಂದಾಪುರ ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಬದಲಾವಣೆ: ಡಿಸಿ ಜಿ. ಜಗದೀಶ್ ಸ್ಪಷ್ಟನೆ

ಉಡುಪಿ: ಆ್ಯಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ಕುಂದಾಪುರ ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಬದಲಾವಣೆ ಆಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ಕಾರ್ಕಳಕ್ಕೆ ತೆಗೆದುಕೊಂಡು ಹೋಗಬೇಕಿದ್ದ ಶವವನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲೆಯಲ್ಲಿ  ಕೊರೊನಾದಿಂದ ಮೃತಪಟ್ಟ  ವ್ಯಕ್ತಿಗಳ ಅಂತ್ಯಸಂಸ್ಕಾರ   ಕುರಿತಂತೆ ತಂಡ ರಚಿಸಲಾಗಿದ್ದು, ಇನ್ಮುಂದೆ ಈ ರೀತಿ ಶವಗಳ ಬದಲಾವಣೆ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.