ಎರಡು ವರ್ಷದೊಳಗೆ ಕೊರೊನಾ ಪಿಡುಗು ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ವಿಶ್ವಾಸ
ಜಿನಿವಾ: ಕೊರೊನಾ ಸೋಂಕಿಗೆ ಜಗತ್ತು ಲಸಿಕೆ ಕಂಡುಹಿಡಿಯಲು ಯಶಸ್ವಿಯಾದರೆ, ಈ ಮಹಾಮಾರಿ ಸೋಂಕನ್ನು ಎರಡು ವರ್ಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಕೊನೆಯಾಗಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಹಾಗೂ ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣದಿಂದ ಕೊರೊನಾ ಸೋಂಕು ಬಹುಬೇಗನೆ ವ್ಯಾಪಿಸುತ್ತಿದೆ ಎಂದು ಹೇಳಿದ್ದಾರೆ. ಕೊರೊನಾ […]
ದೆಹಲಿಯಲ್ಲಿ ಐಸಿಸ್ ಉಗ್ರನ ಸೆರೆ: ವಿಧ್ವಂಸಕ ಕೃತ್ಯ ನಡೆಸಲು ಸಂಗ್ರಹಿಸಿದ್ದ ಭಾರಿ ಪ್ರಮಾಣದ ಸ್ಫೋಟಕ ವಶ
ನವದೆಹಲಿ: ಸುಧಾರಿತ ಸ್ಫೋಟಕ ಹೊಂದಿದ್ದ ಐಸಿಸ್ ಉಗ್ರನನ್ನು ದೆಹಲಿಯ ರಿಡ್ಜ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಪೊಲೀಸರು ಮತ್ತು ಉಗ್ರನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬಳಿಕ ಐಸಿಸ್ ನಂಟು ಹೊಂದಿದ್ದ ಉತ್ತರ ಪ್ರದೇಶ ಮೂಲದ ಅಬ್ದುಲ್ ಯೂಸೂಫ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ಆತನಿಂದ ಭಾರಿ ಪ್ರಮಾಣದ ಸ್ಫೋಟಕ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಗ್ರರು ದೆಹಲಿಯಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ದೆಹಲಿಯಲ್ಲಿ […]
ಶ್ರೀ ಗಣೇಶ ಚತುರ್ಥಿಗೆ ಭಕ್ತಿಪೂರ್ವಕವಾಗಿ ಶುಭಹಾರೈಸಿದ್ದಾರೆ ನಾಡಿನ ಗಣ್ಯರು.
ಉಡುಪಿ: ಶ್ರೀ ಗಣೇಶ ಚತುರ್ಥಿಗೆ ಕರಾವಳಿಯ ವಿವಿಧ ಗಣ್ಯರು ಉಡುಪಿXPRESS ಸುದ್ದಿ ಮೂಲಕ ಶುಭಕೋರಿದ್ದಾರೆ. ಗಣೇಶೋತ್ಸವ ಎಲ್ಲರಿಗೂ ಒಳಿತನ್ನು ತರಲಿ ಎಂದು ಹಾರೈಸಿದ್ದಾರೆ.