ಹಡಿಲುಗದ್ದೆ ಕೃಷಿಯೋಜನೆಗೆ ಉಡುಪಿ-ಮಣಿಪಾಲ ರೋಟರಿಯಿಂದ ನೆರವು

ಉಡುಪಿ: ನಿಟ್ಟೂರು ಪ್ರೌಢ ಶಾಲೆ ತನ್ನ ಸುವರ್ಣಪರ್ವದ ನಿಮಿತ್ತ ಹಮ್ಮಿಕೊಂಡ 50 ಎಕರೆ ಹಡಿಲುಗದ್ದೆ ಬೇಸಾಯ ಯೋಜನೆಗೆ ಉಡುಪಿ-ಮಣಿಪಾಲ ರೋಟರಿ ಸಂಸ್ಥೆಯು ತನ್ನ ಸಾಮಾಜಿಕ ಸೇವೆಯ ಅಂಗವಾಗಿ ರೂ. 75,000/-ದ ದೇಣಿಗೆ ನೀಡಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಿತು. ಪೆರಂಪಳ್ಳಿ ಗದ್ದೆಯ ಸನಿಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿಯ ಅಧ್ಯಕ್ಷ ಪ್ರಶಾಂತ ಹೆಗ್ಡೆ, ಕಾರ್ಯದರ್ಶಿ ಶ್ರೀಪತಿ ಪೂಜಾರಿ, ಸದಸ್ಯರುಗಳಾದ ರವಿ ಕಾರಂತ್, ಡಾ. ವಿರೂಪಾಕ್ಷ ದೇವರುಮನೆ, ಅಮಿತ್ ಅರವಿಂದ, ರಾಜವರ್ಮ ಅರಿಗ ಉಪಸ್ಥಿತರಿದ್ದು ಶಾಲೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಅಭಿನಂದಿಸಿದರು. […]

ಬಿಜೆಪಿ ಮಹಿಳಾ ಮೋರ್ಚಾದಿಂದ ಗೋವಿಗಾಗಿ ಮೇವು ಅಭಿಯಾನ; ನೀಲಾವರ ಗೋಶಾಲೆಗೆ ಎರಡು ಲೋಡ್ ಮೇವು ಹಸ್ತಾಂತರ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ‘ಗೋವಿಗಾಗಿ ಮೇವು ಅಭಿಯಾನ’ದಡಿ ಎರಡು ಲೋಡ್ ಹಸಿ ಹುಲ್ಲು ಸಂಗ್ರಹಿಸಿ ಇಂದು ನೀಲಾವರ ಗೋಶಾಲೆಗೆ ಹಸ್ತಾಂತರ ಮಾಡಲಾಯಿತು. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಗೋವುಗಳಿಗೆ ಮೇವು ಸಂಗ್ರಹಿಸಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪೇಜಾವರ ಶ್ರೀಪಾದರ ಆಶೀರ್ವಾದೊಂದಿಗೆ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು , […]

ಎಸ್ ಪಿಬಿ ಚೇತರಿಕೆಗೆ ವಿಶ್ವದಾದ್ಯಂತ ಸಂಗೀತ ಪ್ರಿಯರಿಂದ ಪ್ರಾರ್ಥನೆ

ಚೆನ್ನೈ: ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ಶೀಘ್ರ ಚೇತರಿಕೆಗಾಗಿ ವಿಶ್ವದಾದ್ಯಂತ ಎಸ್ ಪಿಬಿ ಅಭಿಮಾನಿಗಳು ಹಾಗೂ ಸಂಗೀತ ಪ್ರಿಯರಿಂದ ಪ್ರಾರ್ಥನೆ. ಸಂಗೀತ ಗಾಯನದ ಮೂಲಕ ಎಸ್ ಪಿಬಿ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್ ಸಹಿತ ಭಾರತೀಯ ಸಂಗೀತ ದಿಗ್ಗಜರು, ಚಿತ್ರರಂಗದವರು ಸಾಥ್ ನೀಡಿದ್ದಾರೆ. ಸದ್ಯ ಎಸ್ ಪಿಬಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಬದಲಾವಣೆ ಆಗಿಲ್ಲ. ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶದ […]

ಎಸ್ ಡಿಪಿಐ ನಿಷೇಧದ ಬಗ್ಗೆ ತೀರ್ಮಾನ ಆಗಿಲ್ಲ: ಕೇಂದ್ರಕ್ಕೆ ಶಿಫಾರಸು ಮಾಡುವ ಮೊದಲು ದಾಖಲೆ ಸಂಗ್ರಹ- ಸಚಿವ ಮಾಧುಸ್ವಾಮಿ

ಬೆಂಗಳೂರು: ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳ ನಿಷೇಧದ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. ಈ ಎರಡು ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೊದಲು ಅಗತ್ಯ ದಾಖಲೆಗಳ ಸಂಗ್ರಹ ಮಾಡಬೇಕಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ ಡಿಪಿಐ, ಪಿಎಫ್ ಐ ಸಂಘಟನೆಯ ನಿಷೇಧಕ್ಕೆ ಸಂಬಂಧಿಸಿ ಇಂದು ರಾಜ್ಯ […]

ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಸಿಲುಕಿಸುವ ಪ್ರಯತ್ನ ಆಗುತ್ತಿದೆ: ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ಪೊಲೀಸರು ಬಿಜೆಪಿ ಏಜೆಂಟರ್ ಅಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಡಿಜೆ ಹಳ್ಳಿ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಆಗುತ್ತಿದೆ. ನಾವು ಇನ್ನೂ ಸುಮ್ಮನೆ ಕೂರಲ್ಲ, ಸರ್ಕಾರದ ಬದಲಾಗಿ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಜೆ ಹಳ್ಳಿ ಗಲಭೆಯಲ್ಲಿ ಯಾರೇ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಲಿ. ಆದರೆ ನಿಮಗೆ ನಂಬರ್ ಬೇಕೆಂದು ಅಮಾಯಕರನ್ನು […]