ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್ರಾಜ್ ನಿಧನ
ನವದೆಹಲಿ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್ರಾಜ್ (90) ಇಂದು ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ. ಅವರು 80 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಅಪಾರ ಕೊಡುಗೆ ನೀಡಿದ್ದಾರೆ. ಮಹಾನ್ ಗಾಯಕ ಜಸ್ರಾಜ್ ಪದ್ಮಶ್ರೀ , ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಪ್ರಶಸ್ತಿಗೆ ಭಾಜನರಾಗಿದ್ದರು. ಜಸ್ರಾಜ್ ಅವರು 1930ರ ಜನವರಿ 28ರಂದು ಹರ್ಯಾಣದಲ್ಲಿ ಜನಿಸಿದ್ದರು. ಶಾಸ್ತ್ರೀಯ ಮತ್ತು ಸೆಮಿ ಕ್ಲಾಸಿಕಲ್ ಸಂಗೀತದಲ್ಲಿ ಮೇರು ಗಾಯಕರಾಗಿದ್ದರು. ಭಾರತ , ಕೆನಡಾ ಮತ್ತು ಅಮೆರಿಕಾದಲ್ಲಿ ಸಂಗೀತ ಪಾಠ […]
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಶೀಘ್ರವೇ ನಿರ್ಧಾರ: ಸಚಿವ ಕೋಟ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಬದಲು, ಪ್ರಾಧಿಕಾರ ರಚಿಸುವ ಕುರಿತಂತೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸುಬ್ರಹ್ಮಣ್ಯ ಸಮೀಪದ ಬಳ್ಪ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದ 80ಕ್ಕೂ ಅಧಿಕ ‘ಎ’ ದರ್ಜೆ ದೇವಸ್ಥಾನಗಳ ವ್ಯವಸ್ಥಾಪನಾ ರಚನೆಯ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ವಾರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ’ ಎಂದರು. ದೇವಸ್ಥಾನಗಳಲ್ಲಿ ಸೇವೆಗಳನ್ನು ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ಜೊತೆ ಚರ್ಚಿಸಲಾಗುವುದು. ಈ ಬಾರಿ ಸಾರ್ವಜನಿಕ […]
ಕೊಡೇರಿ ನಾಡದೋಣಿ ದುರಂತ: ನಾಲ್ವರು ಮೀನುಗಾರರ ಮೃತದೇಹ ಪತ್ತೆ
ಬೈಂದೂರು: ಇಲ್ಲಿನ ಕೊಡೇರಿ ಸಮುದ್ರತೀರದಲ್ಲಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಮೃತದೇಹ ಇಂದು ಪತ್ತೆಯಾಗಿದೆ. ಹೊಸಹಿತ್ಲು ಬಳಿ ನಾಗರಾಜ ಖಾರ್ವಿ (55), ಕೊಡೇರಿಯಿಂದ 5 ಕಿ.ಮೀ ದೂರದ ಆದರಗೋಳಿ ಸಮೀಪ ಲಕ್ಷ್ಮಣ ಖಾರ್ವಿ (34), ಶೇಖರ್ ಖಾರ್ವಿ ಶವ (39) ಹಾಗೂ ಮಂಜುನಾಥ ಖಾರ್ವಿ(40) ಶವ ಪತ್ತೆಯಾಗಿದೆ. ನಿನ್ನೆ ಶ್ರೀ ಸಾಗರ್ ಹೆಸರಿನ ನಾಡದೋಣಿ ಅಲೆಗಳ ಉಬ್ಬರಕ್ಕೆ ಸಿಲುಕಿ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತ್ತು. ಇದರ ಪರಿಣಾಮ ದೋಣಿಯಲ್ಲಿದ್ದ 12 ಮೀನುಗಾರರ […]
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ರಾಘವೇಂದ್ರ ಕಿಣಿಗೆ ಸನ್ಮಾನ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಕಿಣಿ ಅವರನ್ನು ಗೌರವಿಸಲಾಯಿತು. ಉಡುಪಿಯ ರಾಮಭವನ್ ಹೋಟೆಲ್ ಸಂಕಿರ್ಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿ ಅವರನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಭಾ ವಿ. ಶೆಣೈ, ಸಂಸ್ಥೆಯ ಅಧ್ಯಕ್ಷ ಪ್ರೊ. ಶಂಕರ್, ಉಪಾಧ್ಯಕ್ಷರಾದ ಮರವಂತೆ ನಾಗರಾಜ್ ಹೆಬ್ಬಾರ್, ಸಂಧ್ಯಾ ಶೆಣೈ, ವಿಘ್ನೇಶ್ವರ ಅಡಿಗ, ಸುಗುಣ ಸುವರ್ಣ, ಮಧುಸೂದನ್ ಹೇರೂರು, ಪ್ರಧಾನ ಕಾರ್ಯದರ್ಶಿ […]
ಕರಾವಳಿ ಯೂತ್ ಕ್ಲಬ್ ಮನವಿಗೆ ಜಿಲ್ಲಾಧಿಕಾರಿಯಿಂದ ಸ್ಪಂದನೆ
ಉಡುಪಿ: ಕೊರೊನಾ ಸಂಕಷ್ಟದಿಂದಾಗಿ ಜಿಲ್ಲೆಯಲ್ಲಿ ಅತಂತ್ರರಾಗಿರುವ ಒಬ್ಬಂಟಿ ರೋಗಿಗಳು ಹಾಗೂ ಅನಾರೋಗ್ಯ ಪೀಡಿತರ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಕರಾವಳಿ ಯೂತ್ ಕ್ಲಬ್ ಉಡುಪಿ ವತಿಯಿಂದ ಆಗಸ್ಟ್ 13ರಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಚೇರಿಗೆ ಪತ್ರ ಬರೆದಿದ್ದು, ಅನಾರೋಗ್ಯ ಪೀಡಿತರಿಗೆ ಅಗತ್ಯ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತರು ಸಹಾಯಕ್ಕಾಗಿ ಆರೋಗ್ಯ ಇಲಾಖೆಯ ಕಾಲ್ […]