ಕುಂದಾಪುರ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಸ್ವಾತಂತ್ರ್ಯೋತ್ಸವ ಆಚರಣೆ
ಕುಂದಾಪುರ: ದೇಶದ ೭೪ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಧ್ವಜಾರೋಹಣ ಕಾರ್ಯಕ್ರಮವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿಯವರು ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹಾಗೂ ಬೋಧಕ – ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜನಾಧಿಕಾರಿ ರೇಷ್ಮಾ ಶೆಟ್ಟಿ ವಂದಿಸಿದರು.
ಉಡುಪಿಯಲ್ಲಿ ಸಾತಂತ್ರ್ಯೋತ್ಸವ ಸಂಭ್ರಮ:ಎಲ್ಲೆಡೆ ಗಮನಸೆಳೆದ ಸರಳ ಸಾತಂತ್ರ್ಯೋತ್ಸವ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸರಳ ಸಾತಂತ್ರ್ಯೋತ್ಸವ ಗಮನಸೆಳೆಯಿತು.ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಅಜ್ಜರಕಾಡು ನಲ್ಲಿನ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಗೌರವ ಸಲ್ಲಿಸಿ ಹಲವು ಮಂದಿ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯವನ್ನು , ಪ್ರಸ್ತುತ ನಮ್ಮ ಸೇನಾಪಡೆಗಳ ವೀರ ಯೋಧರು ರಕ್ಷಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಜಿಲ್ಲೆಯ ನಿವೃತ್ತ ಯೋಧರು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ […]
ನೀಲಾವರ ಗೋಶಾಲೆಯಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ: ಗೋವಿನ ಪೋಷಣೆ ರಾಷ್ಟ್ರೀಯ ಆದ್ಯತೆಯಾಗಲಿ: ವಿಶ್ವಪ್ರಸನ್ನ ಶ್ರೀ
ನೀಲಾವರ: ಪ್ರತಿಯೊಂದು ಗೋವು ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಲೋಕದ ಒಳಿತಿಗಾಗಿಯೇ ಜೀವಿಸುತ್ತದೆ. ಆದ್ದರಿಂದ ರಾಷ್ಟ್ರದ ಸುಭಿಕ್ಷೆ ಸಮೃದ್ಧಿಯನ್ನು ಬಯಸುವ ಸರಕಾರ ಹಾಗೂ ಪ್ರತಿಯೊಬ್ಬರೂ ಗೋವಿನ ಪೋಷಣೆಯನ್ನು ರಾಷ್ಟ್ರೀಯ ಕರ್ತವ್ಯ ಎಂದೇ ಪರಿಗಣಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ . ನೀಲಾವರ ಗೋಶಾಲೆಯಲ್ಲಿರುವ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಇದೇ ಮೊದಲ ಬಾರಿಗೆ ಗೋಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶನಿವಾರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು . ಎಷ್ಟೇ ಕಷ್ಟ ಸವಾಲುಗಳು ಎದುರಾದರೂ ದೇಶದಲ್ಲಿ […]
74ನೇ ಸ್ವಾತಂತ್ರ್ಯೋತ್ಸವಕ್ಕೆ ನಾಡಿನ ಗಣ್ಯರು ಶುಭಹಾರೈಸಿದ್ದಾರೆ.
ಉಡುಪಿ: 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇಡೀ ದೇಶ ಮಿಂದೇಳುವ ಹೊತ್ತಿದು. ಸ್ವಾತಂತ್ರ್ಯಕ್ಕೋಸ್ಕರ ಬಲಿದಾನಗೈದ ನೂರಾರು ಹೋರಾಟಗಾರನ್ನು, ವೀರಯೋಧರನ್ನು ಸ್ಮರಿಸುವ ಅಭೂತಪೂರ್ವ ಗಳಿಗೆಯಿದು. ಇಲ್ಲಿ ಗಣ್ಯರು ಸ್ವಾತಂತ್ರ್ಯೋತ್ಸವಕ್ಕೆ ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.
ಭಾರತದಲ್ಲಿ ಶೀಘ್ರವೇ ಕೊರೊನಾ ಲಸಿಕೆ ಉತ್ಪಾದನೆ: ಮೂರು ಔಷಧಿ ಪ್ರಾಯೋಗಿಕ ಹಂತದಲ್ಲಿದೆ: ಪ್ರಧಾನಿ ಮೋದಿ
ನವದೆಹಲಿ: ಭಾರತದಲ್ಲಿ ಶೀಘ್ರವೇ ಕೊರೊನಾ ಲಸಿಕೆ ಕಂಡುಹಿಡಿಯುವುದರ ಜತೆಗೆ ಭಾರೀ ಪ್ರಮಾಣದಲ್ಲಿ ಔಷಧಿ ಉತ್ಪಾದನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೆಹಲಿಯ ಕೆಂಪು ಕೋಟೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ವಿಜ್ಞಾನಿಗಳು ಕೊರೊನಾ ಲಸಿಕೆಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಮೂರು ಕೊರೊನಾ ಔಷಧಿ ಪ್ರಾಯೋಗಿಕ ಹಂತದಲ್ಲಿದೆ. ಆದಷ್ಟು ಬೇಗ ಜನರಿಗೆ ಔಷಧಿ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ. ಅಭಿವೃದ್ಧಿ […]