ಡಿಜೆ ಹಳ್ಳಿ ಗಲಭೆ: ಕಾರ್ಪೊರೇಟರ್ ಪತಿ ಕಲೀಂ ಪಾಷ ಸಹಿತ 60 ಮಂದಿಯ ಬಂಧನ
ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ನಡೆದ ಗಲಭೆ ಸಂಬಂಧಿಸಿ ಕಾರ್ಪೊರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷ ಸೇರಿದಂತೆ 60 ಮಂದಿಯನ್ನು ಗುರುವಾರ ರಾತ್ರಿ ಬಂಧಿಸಲಾಗಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 206ಕ್ಕೆ ಏರಿಕೆಯಾಗಿದೆ. ಗಲಭೆ ನಡೆಯಲು ಪ್ರಚೋದನೆ ನೀಡಿದ ಆರೋಪ ಕಲೀಂ ಪಾಷ ಮೇಲಿದೆ. ಬಂಧಿತರನ್ನು ವೈದ್ಯಕೀಯ ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ನಂತರ ನ್ಯಾಯಾಲಯದ ಅನುಮತಿ ಪಡೆದು ಕೆಲ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. […]
ದಿಗ್ವಿಜಯ ನ್ಯೂಸ್ ಆ್ಯಂಕರ್ ರಕ್ಷತ್ ಶೆಟ್ಟಿಗೆ ವಿದೇಶದಿಂದ ಕೊಲೆ ಬೆದರಿಕೆ
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ವಸ್ತುನಿಷ್ಠ ವರದಿ ಮಾಡಿ ಸತ್ಯಾಂಶಗಳನ್ನು ಬಿಚ್ಚಿಟ್ಟದಕ್ಕೆ ದಿಗ್ವಿಜಯ ನ್ಯೂಸ್ ವಾಹಿನಿಯ ನ್ಯೂಸ್ ಆ್ಯಂಕರ್ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ. ಆ್ಯಂಕರ್ ರಕ್ಷತ್ ಶೆಟ್ಟಿ ಅವರಿಗೆ ವಿದೇಶದಿಂದ ಪದೇಪದೇ ಕರೆ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಮಾದರಿಯಲ್ಲಿ ಹತ್ಯೆಗೈಯುವ ಎಚ್ಚರಿಕೆ ನೀಡಿದ್ದು, ಎಸ್ಡಿಪಿಐ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದಾನೆ. ಇಂತಹ ಅನಾಮಧೇಯರ ಗೊಡ್ಡು ಬೆದರಿಕೆಗೆ ದಿಗ್ವಿಜಯ […]