ಉಡುಪಿ: ಇಂದು 402 ಮಂದಿಗೆ ಕೊರೊನಾ ಪಾಸಿಟಿವ್: ಒಬ್ಬರು ಕೊರೊನಾದಿಂದ ಮೃತ್ಯು
ಉಡುಪಿ: ಜಿಲ್ಲೆಯಲ್ಲಿ ಇಂದು 402 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7175 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 188 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 104 ಮಂದಿ ಸಹಿತ ಮಂದಿ ಕೊರೊನಾ 292 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 4258 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2847 ಸಕ್ರಿಯ ಕೊರೊನಾ ಸೋಂಕಿತರಿದ್ದು, 1449 […]
ಕಾರ್ಕಳ ಎಂ.ಪಿ.ಎಂ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ
ಉಡುಪಿ: ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಗಳ ಆತ್ಮ, ಗ್ರಂಥಾಲಯಗಳು ನೀಡುವ ಪ್ರತಿಯೊಂದು ಸೇವೆಗಳೂ ಅತ್ಯುತ್ತಮ ನಾಗರಿಕ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗುತ್ತವೆ” ಎಂದು ಕಾರ್ಕಳ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಶ್ರೀವರ್ಮ ಅಜ್ರಿ ಎಂ. ಹೇಳಿದರು. ಅವರು ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ| ಎಸ್ ಆರ್. ರಂಗನಾಥನ್ ರವರ 128 ನೇ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು. ಮನೆಯಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸುವಂತಹ ಇಂದಿನ ಪರಿಸ್ಥಿತಿಯಲ್ಲಿ […]
ಕೃಷಿ ಪ್ರಶಸ್ತಿ-ಭತ್ತದ ಬೆಳೆ ಸ್ವರ್ಧೆಗೆ ರೈತರಿಂದ ಅರ್ಜಿ ಆಹ್ವಾನ
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸ್ತಕ ಸಾಲಿನ ಕೃಷಿ ಪ್ರಶಸ್ತಿ ರೈತರಿಗೆ ಉತ್ಪದನಾ ಬಹುಮಾನ ಕಾರ್ಯಕ್ರಮದಡಿ ಮುಂಗಾರು ಭತ್ತದ ಬೆಳೆಯಲ್ಲಿ ಬೆಳೆ ಸ್ವರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ಭತ್ತದ ಬೆಳೆಯಲ್ಲಿ ರೈತರು ವಿವಿಧ ಹಂತದ ಬೆಳೆ ಸ್ವರ್ದೆಗೆ ಪ್ರವೇಶ ಶುಲ್ಕವನ್ನು ಪಾವತಿಸಿ ಅರ್ಜಿ,ಭೂ ಮಾಲೀಕತ್ವ ಕ್ಷೇತ್ರ ಕುರಿತ ಕಂದಾಯ ಇಲಾಖೆಯ ದಾಖಲಾತಿ ಅಥವಾ ಗುತ್ತಿಗೆ ಕರಾರು ಪತ್ರ ಗಳೊಂದಿಗೆ ಸೆಪ್ಟೆಂಬರ್ 15 ರೊಳಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಹತ್ತಿರದ […]
ಆರೋಗ್ಯ ಇಲಾಖೆಯಲ್ಲಿ ನೇರ ಸಂದರ್ಶನ: ಕೂಡಲೇ ಅಪ್ಲೈ ಮಾಡಿ
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗಾಗಿ ಪ್ರಯೋಗಶಾಲಾ ತಂತ್ರಜ್ಞರ (20 ಹುದ್ದೆ) ದತ್ತಾಂಶ ನಮೂದಕರ (20 ಹುದ್ದೆ) ಗಳಿಗೆ ಆಗಸ್ಟ್ 14 ರಿಂದ 17 ರ ವರೆಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಮತ್ತು ದೃಡೀಕೃತ ದಾಖಲಾತಿಗಳೊಂದಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಅಜ್ಜರಕಾಡು ಇಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಪ್ರಯೋಗಶಾಲಾ ತಂತ್ರಜ್ಞ ಹುದ್ದೆಗೆ , ಡಿಎಂಎಲ್ಟಿ/ಬಿಎAಎಲ್ಟಿ ಯವರಿಗೆ […]
ದೇವರೇ ಒಮ್ಮೆ ಕಾಲೇಜು ಶುರುವಾಗಲಿ, ನನ್ನ ಕಣ್ಣು ಅವನನ್ನು ಕಾಣಲಿ
ಬೇಸರದಿಂದ ನಾ ಕುಳಿತುಕೊಂಡು, ನಿನ್ನ ದಾರಿಯ ಹುಡುಕುತ್ತಾ ಕಾದುಕೊಂಡು, ನಿನ್ನ ಬಳಿಗೆ ಈಗ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ ಮನಸ್ಸಿಗೆ ತೋಚಿದ್ದನ್ನ ತಕ್ಷಣ ಬರೆದ ಲೇಖನವಿದು. ಅಯ್ಯೋ ಸಮಯ ಓಡುತಿದೆ ,ಕಾಲ ಉರುಳುತಿದೆ. ಆದರೆ ನನ್ನ ಮನಸು ಮಾತ್ರ ನಿನ್ನನೇ ಕಾಯುತಿದೆ. ನಿನ್ನ ಬಿಟ್ಟು ಇದೀಗ ನಾಲ್ಕು ತಿಂಗಳುಗಳು ಕಳೆದಿವೆ. ನಿನ್ನ ನೋಡಲು ಮನ ತವಕ ಪಡುತ್ತಿದೆ. ನಿನ್ನ ಮಾತನಾಡಿಸಲು ಮನಸು ಚಂಚಲಿಸುತ್ತಿದೆ. ನಿನ್ನೊಂದಿಗೆ ಕಳೆದ ದಿನಗಳನ್ನು ಮತ್ತೆ ,ಮತ್ತೆ ನೆನಪಿಸುತ್ತಾ ಕುಳಿತರೆ ಸಂತೋಷದ ಜೊತೆಗೆ ಕಣ್ಣೀರು […]