ರಾಜಸ್ತಾನ ಕಾಂಗ್ರೆಸ್ ಬಿಕ್ಕಟ್ಟು ಶಮನ: ಕಾಂಗ್ರೆಸ್ ನಲ್ಲೇ ಮುಂದುವರಿಯಲು ಸಚಿನ್ ಪೈಲಟ್ ನಿರ್ಧಾರ
ನವದೆಹಲಿ: ರಾಜಸ್ತಾನ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಬಹುತೇಕ ಬಗೆಹರಿದ್ದು, ಇಂದು ಸೋನಿಯಾ ಗಾಂಧಿ ನಿವಾಸದಲ್ಲಿ ಸಚಿನ್ ಪೈಲಟ್ ಹಾಗೂ ಬಂಡಾಯ ಶಾಸಕರ ಜತೆ ನಡೆದ ಸಂದಾನ ಸಭೆ ಯಶಸ್ವಿಯಾಗಿದೆ. ಆ ಮೂಲಕ ರಾಜಸ್ತಾನ ಕಾಂಗ್ರೆಸ್ ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿದೆ. ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆಗೆ ಚರ್ಚೆ […]
ಹಿರಿಯ ಚಲನಚಿತ್ರ ನಟ ಕಾರ್ಕಳ ಶೇಖರ್ ಭಂಡಾರಿ (72) ನಿಧನ
ಕಾರ್ಕಳ: ಹಿರಿಯ ಚಲನಚಿತ್ರ ನಟ ಕಾರ್ಕಳ ಶೇಖರ್ ಭಂಡಾರಿ (72) ಅವರು ಇಂದು ಅನಾರೋಗ್ಯದಿಂದ ನಿಧನರಾದರು. ವಿಜಯ ಬ್ಯಾಂಕ್ ನ ನಿವೃತ್ತ ಉದ್ಯೋಗಿಯಾಗಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಚಲನಚಿತ್ರ ರಂಗದಲ್ಲೂ ಹಾಸ್ಯ, ಪೋಷಕ ನಟನಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಬರವಣಿಗೆಯಲ್ಲೂ ತಮ್ಮ ಪ್ರತಿಭೆ ತೋರಿಸಿದ್ದ ಶೇಖರ್ ಅವರು ಈಚೆಗೆ ‘ಮಸ್ತಕದಿಂದ ಪುಸ್ತಕಕ್ಕೆ” ಎಂಬ ಕೃತಿಯನ್ನು ಹೊರತಂದಿದ್ದರು. 2012-14 ರ ಅವಧಿಯಲ್ಲಿ ಬೆಂಗಳೂರು ಸವಿತಾ ಸಮಾಜ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ದಕ್ಷಿಣ […]
ಉಡುಪಿ: ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳ ವಿವರ ಇಲ್ಲಿದೆ
ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳ ವಿವರ ಈ ಕೆಳಕಂಡಂತಿದೆ. ಉಡುಪಿ ಅನಂತೇಶ್ವರ ಹೈಸ್ಕೂಲ್ ನ ಪರೀಕ್ಷೆ ಬರೆದ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 100 ಫಲಿತಾಂಶ ದಾಖಲಾಗಿದೆ. ಹೆಜಮಾಡಿಕೋಡಿ ಜಿಎಚ್ಎಸ್ ಪ್ರೌಢಶಾಲೆಯ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 100 ಫಲಿತಾಂಶ ದಾಖಲಾಗಿದೆ. ಕಟಪಾಡಿ ಎಸ್ ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 27 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಶೇ. 100 ಫಲಿತಾಂಶ ದಾಖಲಾಗಿದೆ. ಅದಮಾರು ಪೂರ್ಣಪ್ರಜ್ಞ ಆಂಗ್ಲ […]
ಉಡುಪಿ: ಇಂದು 90 ಮಂದಿಗೆ ಕೊರೊನಾ ಪಾಸಿಟಿವ್: ಮೂರು ಮಂದಿ ಕೊರೊನಾಗೆ ಬಲಿ
ಉಡುಪಿ: ಜಿಲ್ಲೆಯಲ್ಲಿ ಇಂದು 90 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮೂರು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕುಂದಾಪುರ ತಾಲ್ಲೂಕಿನ 62 ವರ್ಷದ ಮಹಿಳೆ ಮತ್ತು 79 ವರ್ಷದ ವೃದ್ಧ ಹಾಗೂ ಉಡುಪಿ ತಾಲ್ಲೂಕಿನ 81 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಕಳ: 9 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ
ಕಾರ್ಕಳ: ಕಾರ್ಕಳ ತಾಲ್ಲೂಕಿನಲ್ಲಿ ಮಿಯಾರಿನ ಮೊರಾರ್ಜಿ ಸರ್ಕಾರಿ ಪ್ರೌಢಶಾಲೆ ಸಹಿತ 9 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಸರ್ಕಾರಿ ಶಾಲೆ: ಮಿಯಾರಿನ ಮೊರಾರ್ಜಿ ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ. ಅನುದಾನಿತ ಪ್ರೌಢಶಾಲೆ: ಕಾರ್ಕಳ ಭುವನೇಂದ್ರ ಕನ್ನಡ ಮಾಧ್ಯಮ ಪ್ರೌಢಶಾಲೆ, ನಿಟ್ಟೆ ಎನ್ಎಸ್ಎಎಂ ಅನುದಾನಿತ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ. ಅನುದಾನರಹಿತ ಪ್ರೌಢಶಾಲೆ: ಗಣಿತನಗರದ ಜ್ಞಾನಸುಧಾ ಪ್ರೌಢಶಾಲೆ, ಹಿರ್ಗಾನದ ಸಂತ ಮರಿಯ ಗೊರೆಟ್ಟಿ ಪ್ರೌಢಶಾಲೆ, ಕಾರ್ಕಳ ಎಸ್ ವಿಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಅಜೆಕಾರು […]