ಕೃಷಿಕರಿಗೆ ಆರ್ಥಿಕ ನೆರವು ಒದಗಿಸಲು 1 ಲಕ್ಷ ಕೋಟಿ ರೂ.ಗಳ ಯೋಜನೆ: ಪ್ರಧಾನಿ ಮೋದಿ ಘೋಷಣೆ
ನವದೆಹಲಿ: ಕೃಷಿ ಕ್ಷೇತ್ರಕ್ಕೆ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ ಕೃಷಿ ಮೂಲಸೌಕರ್ಯ ನಿಧಿಯಡಿ 1 ಲಕ್ಷ ಕೋಟಿ ರೂಪಾಯಿಗಳ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ಬಗ್ಗೆ ಭಾನುವಾರ ಟ್ವೀಟರ್ ನಲ್ಲಿ ಅವರು ಮಾಹಿತಿ ನೀಡಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ 17,000 ಕೋಟಿ ರೂ. ನೆರವು ಯೋಜನೆಯ ಆರನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಒಟ್ಟು 8.5 ಕೋಟಿ ರೈತರಿಗೆ ನೆರವಾಗಲಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಈ ಯೋಜನೆ ಕೃಷಿಕರಿಗೆ ಬಹಳ […]
ಕಂಬಳ ಸಾಧಕ ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ ಇನ್ನಿಲ್ಲ
ಉಡುಪಿ: ಕಂಬಳ ಸಾಧಕ ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ (62)ಅವರು ಆ. 9ರಂದು ನಿಧನ ಹೊಂದಿದರು. ಅವರು ಕಳೆದ ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದ ಅವರು ಹಗ್ಗ, ನೇಗಿಲು, ಕನೆ ಹಲಗೆ ವಿಭಾಗದಲ್ಲಿ ಕೋಣಗಳನ್ನು ಸ್ಪರ್ಧೆಗಿಳಿಸಿದ್ದರು. ಅಲ್ಲದೆ ಈ ವಿಭಾಗದಲ್ಲಿ ಬಹುಮಾನಗಳನ್ನು ಪಡೆದು ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಹೋಟೆಲ್ ಉದ್ಯಮಿಯಾಗಿದ್ದ ಅವರು ಅಡ್ವೆ ಕಂಬಳದ ಪದಾಧಿಕಾರಿಯಾಗಿದ್ದರು. ಕಂಬಳ ಕ್ಷೇತ್ರದ ಎಲ್ಲರೊಂದಿಗೂ ಆತ್ಮೀಯವಾಗಿ […]