ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪದ್ಮಾವತಿ ಅಲಂಕಾರ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥಶ್ರೀಪಾದರು ಶ್ರಾವಣ ಶುಕ್ರವಾರದ ಪ್ರಯುಕ್ತ ಶ್ರೀ ಕೃಷ್ಣ ದೇವರಿಗೆ ” ಪದ್ಮಾವತಿ” ಅಲಂಕಾರ ಮಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.
ಉಡುಪಿ: ರಸ್ತೆ ಬದಿಯಲ್ಲಿ ಜೋಳದ ತೆನೆ ಮಾರುತ್ತಿದ್ದ ಇಬ್ಬರು ಮಕ್ಕಳ ರಕ್ಷಣೆ
ಉಡುಪಿ: ಇಂದ್ರಾಳಿ ರಸ್ತೆ ಬದಿಯಲ್ಲಿ ಜೋಳದ ತೆನೆ ಮಾರುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿ ತಾತ್ಕಾಲಿಕವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಾರ್ಜನಿಕರಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಬಂದ ದೂರಿನಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಸ್ತೆ ಬದಿಯಲ್ಲಿ ಜೋಳದ ತೆನೆ ಮಾರುತ್ತಿದ್ದ ಬಾಗಲಕೋಟೆ ಮೂಲದ ವಲಸೆ ಕಾರ್ಮಿಕರ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಈ ಮಕ್ಕಳನ್ನು ರಕ್ಷಿಸಿ ವಿಚಾರಿಸಿದಾಗ ನಾವು ಇಂದ್ರಾಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, […]
ಕೊರೊನಾ ಚಿಕಿತ್ಸೆಗೆ ಫವಿಪಿರವಿರ್ ಔಷಧ ಅಭಿವೃದ್ಧಿ: ಭಾರತದಲ್ಲಿ ಬಿಡುಗಡೆ ಮಾಡಲು ಸಿಪ್ಲಾ ಕಂಪೆನಿ ಸಿದ್ಧತೆ
ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಅಭಿವೃದ್ಧಿಪಡಿಸಿರುವ ‘ಫವಿಪಿರವಿರ್ (Favipiravir) ಔಷಧ’ವನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲು ಔಷಧ ಉತ್ಪಾದನಾ ಕಂಪನಿ ಸಿಪ್ಲಾ ಮುಂದಾಗಿದೆ. ಈ ಔಷಧ ಕೋವಿಡ್–19 ಆರಂಭಿಕ ಹಂತದಲ್ಲಿರುವ ರೋಗಿಗಳಿಗೆ ಪರಿಣಾಮಕಾರಿಯಾಗಲಿದೆ ಎಂದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಅಲ್ಲದೆ, ಕೊರೊನಾ ಸೋಂಕಿತರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಸಿಎಸ್ಐಆರ್ ಮತ್ತು ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಹೊಸ […]
ಸಂವಿಧಾನಕ್ಕೆ ಪುರಸಭಾ ಮುಖ್ಯಾಧಿಕಾರಿಯಿಂದ ಅವಮಾನ ಆರೋಪ: ಮುಖ್ಯಾಧಿಕಾರಿ ರೇಖಾ ಶೆಟ್ಟಿ ವಿರುದ್ದ ಉಪನ್ಯಾಸಕಿ ದೂರು
ಕಾರ್ಕಳ : ದಲಿತ ಉಪನ್ಯಾಸಕಿಯಾಗಿಯಾದ ನನ್ನ ಮೇಲೆ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ದೌರ್ಜನ್ಯ ಎಸಗಿದ್ದಾರೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಹಾಗೂ ದಲಿತರಿಗೆ ಸಿಗುವ ಸವಲತ್ತುಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಕಳದ ಉಪನ್ಯಾಸಕಿ ಸವಿತಾ ಕುಮಾರಿ ತಮಗಾದ ನೋವನ್ನು ಆಡಿಯೋ ಮೂಲಕ ತೋಡಿಕೊಂಡಿದ್ದು ಆಡಿಯೋ ಭಾರೀ ವೈರಲ್ ಆಗಿದೆ. ಇದೀಗ ಉಪನ್ಯಾಸಕಿ ಬಿ.ಅರ್ ಅಂಬೇಡ್ಕರ್ ಸೇವಾ ಸಮಾಜ ಸಂಘಕ್ಕೆ ಲಿಖಿತ ದೂರನ್ನೂ ನೀಡಿದ್ದಾರೆ. ಏನು ವಿಷಯ? ಕಳೆದ ಸಲ ಪ್ರಾಕೃತಿಕ ವಿಕೋಪದಿಂದಾಗಿ ಉಪನ್ಯಾಸಕಿ […]
ಉಡುಪಿಯಲ್ಲಿ ಇಂದು 190 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು 190 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3036ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.